ಸಿಬಿಎಸ್‌ಇ ರಾಷ್ಟ್ರೀಯ ಹಾಕಿ ಪಂದ್ಯಾವಳಿ: ಮಡಿಕೇರಿಯ ಕೊಡಗು ವಿದ್ಯಾಲಯ ತಂಡ ಫೈನಲ್‌ಗೆ

Upayuktha
0


ಮಡಿಕೇರಿ: ಮಧ್ಯಪ್ರದೇಶದ ಭೂಪಾಲ್‌ನಲ್ಲಿ ನಡೆಯುತ್ತಿರುವ 17 ವರ್ಷದೊಳಗಿನ ಬಾಲಕಿಯರ ಸಿಬಿಎಸ್‌ಇ ರಾಷ್ಟ್ರೀಯ ಹಾಕಿ ಪಂದ್ಯಾವಳಿಯಲ್ಲಿ  ದಕ್ಷಿಣ ವಲಯವನ್ನು ಪ್ರತಿನಿಧಿಸುತ್ತಿರುವ ಮಡಿಕೇರಿಯ ಕೊಡಗು ವಿದ್ಯಾಲಯ ಬಾಲಕಿಯರ ತಂಡವು ಫೈನಲ್ ಹಂತಕ್ಕೆ ಪ್ರವೇಶಿಸಿದೆ. ಇಂದು ನಡೆದ ಸೆಮಿ ಫೈನಲ್ ಪಂದ್ಯದಲ್ಲಿ ಕೊಡಗು ವಿದ್ಯಾಲಯ ತಂಡವು ತಮಿಳುನಾಡಿನ ಸಚ್ಚಿದಾನಂದ ಜ್ಯೋತಿ ನಿಕೇತನ್ ಶಾಲಾ ತಂಡವನ್ನು 2-0 ಗೋಲುಗಳಿಂದ  ಸೋಲಿಸುವ ಮೂಲಕ ಫೈನಲ್ ಪ್ರವೇಶಿಸಿತು.


ಕೊಡಗು ವಿದ್ಯಾಲಯ ತಂಡದ ನಾಯಕಿ ಪರ್ಲಿನ್ ಪೊನ್ನಮ್ಮ ಫೀಲ್ಡ್ ಗೋಲು ಬಾರಿಸಿದರೆ ಮುನ್ನಡೆ ಆಟಗಾರ್ತಿ ನೀತು ಚೌದ್ರಿ ಪೆನಾಲ್ಟಿ ಕಾರ್ನರ್ ನಲ್ಲಿ  ಗೋಲು ಬಾರಿಸುವ ಮೂಲಕ ತಂಡವನ್ನು ಗೆಲುವಿನೆಡೆಗೆ ಕೊಂಡೊಯ್ದರು. ನಿನ್ನೆ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕೊಡಗು ವಿದ್ಯಾಲಯ ತಂಡವು ಉತ್ತರ ಪ್ರದೇಶದ ಠಾಕೂರ್ ದ್ವಾರಾ ಬಾಲಿಕ ವಿದ್ಯಾಲಯ ತಂಡವನ್ನು 1-0 ಗೋಲುಗಳಿಂದ ಸೋಲಿಸಿತ್ತು.


ನಾಳೆ ನಡೆಯಲಿರುವ ಟೂರ್ನಿಯ ಫೈನಲ್ ಪಂದ್ಯದಲ್ಲಿ ದಕ್ಷಿಣ ವಲಯವನ್ನು ಪ್ರತಿನಿಧಿಸುತ್ತಿರುವ ಮಡಿಕೇರಿಯ ಕೊಡಗು ವಿದ್ಯಾಲಯ ತಂಡವು ಹರಿಯಾಣದ ಬಲಿಷ್ಠ ತಂಡವಾದ ಲಿಟ್ಲ್ ಏಂಜಲ್ ಸ್ಕೂಲ್ ಸೋನಿಪತ್ ತಂಡದೊಂದಿಗೆ ಪ್ರಶಸ್ತಿಗಾಗಿ ಸೆಣಸಲಿದೆ. ಈ ಮಧ್ಯೆ ಕೊಡಗು ವಿದ್ಯಾಲಯ ತಂಡದ ಪ್ರಮುಖ ಆಟಗಾರರು ಕಳೆದೆರೆಡು ದಿನಗಳಿಂದ ಜ್ವರದಿಂದ ಬಳಲುತ್ತಿದ್ದು ತಂಡಕ್ಕೆ ತಲೆನೋವಾಗಿ ಪರಿಣಮಿಸಿದೆ.


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top