ಪುತ್ತೂರು: ಪವಿತ್ರವಾದ ತಿರುಪತಿ ಲಡ್ಡು ಪ್ರಸಾದವನ್ನು ಅಪವಿತ್ರಗೊಳಿಸಿರುವ ಬಗೆಗೆ ಪುತ್ತೂರಿನ ಬಪ್ಪಳಿಗೆಯ ಸುಬ್ರಹ್ಮಣ್ಯ ನಟ್ಟೋಜ ಅವರು ಪುತ್ತೂರು ನಗರ ಪೋಲಿಸ್ ಠಾಣೆಯಲ್ಲಿ ನೀಡಿರುವ ದೂರನ್ನು ಹೈದರಾಬಾದಿನ ಜುಬ್ಲಿಹಿಲ್ ಪೋಲಿಸ್ ಠಾಣೆಗೆ ರವಾನಿಸಲಾಗಿದ್ದು, ಅಲ್ಲಿ ಕೇಸು ದಾಖಲಾಗಿದೆ ಹಾಗೂ ಪೋಲೀಸರು ತನಿಖೆ ನಡೆಸುತ್ತಿದ್ದಾರೆ.
ತಾವು ನೀಡಿರುವ ದೂರಿನ ತನಿಖೆಯ ವಿವರದ ಕುರಿತಾಗಿ ಸುಬ್ರಹ್ಮಣ್ಯ ನಟ್ಟೋಜ ಅವರು ಮಾಹಿತಿ ಹಕ್ಕಿನ ಮುಖಾಂತರ ಪುತ್ತೂರು ಠಾಣೆಯ ಸಾರ್ವಜನಿಕ ಮಾಹಿತಿ ಅಧಿಕಾರಿಯರಿಗೆ ಅರ್ಜಿ ಸಲ್ಲಿಸಿದ್ದರು. ಅದಕ್ಕೆ ಪ್ರತಿಯಾಗಿ ಇದೀಗ ಮಾಹಿತಿ ಅಧಿಕಾರಿಯವರು ಪತ್ರ ಮುಖೇನ ಸುಬ್ರಹ್ಮಣ್ಯ ನಟ್ಟೋಜ ಅವರಿಗೆ ದೂರಿನ ತನಿಖಾ ಪ್ರಕ್ರಿಯೆಯ ಕುರಿತು ಹೈದರಾಬಾದ್ ಠಾಣೆಯ ಪೋಲೀಸರು ಕಾರ್ಯಪ್ರವೃತ್ತ ರಾಗಿರುವ ಬಗೆಗೆ ತಿಳಿಸಿಕೊಟ್ಟಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ