ಪೇಜಾವರ ಶ್ರೀಗಳ ಭೇಟಿ ಮಾಡಿದ ಯೋಗ ಗುರು ಬಾಬಾ ರಾಮ್‌ದೇವ್

Upayuktha
0

ಉಡುಪಿ: ಉಡುಪಿಯಲ್ಲಿ ನಡೆಯುತ್ತಿರುವ ಅಖಿಲ ಭಾರತೀಯ ಪ್ರಾಚ್ಯ ಭಾಷಾ ಸಮ್ಮೇಳನದ ಉದ್ಘಾಟನೆಗೆ ಆಗಮಿಸಿದ ವಿಶ್ವಪ್ರಸಿದ್ಧ ಯೋಗ ಗುರು ಬಾಬಾ ರಾಮ್ ದೇವ ಜಿ ಮತ್ತು ಹರಿದ್ಬಾರದ ಪತಂಜಲಿ ಯೋಗಪೀಠದ ಕುಲಪತಿ ಆಚಾರ್ಯ ಬಾಲಕೃಷ್ಣಜೀಯವರು ಶ್ರೀ ಪೇಜಾವರ ಮಠಕ್ಕೆ ಭೇಟಿ ನೀಡಿದರು.‌ ಈರ್ವರನ್ನೂ ಶ್ರೀ ಮಠದ ಪರವಾಗಿ ಅಧಿಕಾರಿಗಳು ವಿದ್ಯಾರ್ಥಿಗಳ ವೇದ ಘೋಷ ಸಹಿತ ಪೂರ್ಣಕುಂಭ ಸಹಿತ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಬರಮಾಡಿಕೊಂಡರು.


ಶ್ರೀ ವಿಶ್ವೇಶತೀರ್ಥರ ಪಾದುಕೆ ಭಾವಚಿತ್ರಗಳಿಗೆ ಎಲ್ಲರೂ ಪುಷ್ಪಾರ್ಚನೆಗೈದು ನಮನ ಸಲ್ಲಿಸಿದ ಬಳಿಕ ಪೇಜಾವರ ಶ್ರೀಗಳು ಇಬ್ಬರಿಗೂ ಸಂಸ್ಥಾನದ ಗೌರವ ಸಲ್ಲಿಸಿದರು. ಈ ಸಂದರ್ಭ ಬಾಬಾ ರಾಮ್ ದೇವದ ಮಾತನಾಡಿ, ಶ್ರೀ ವಿಶ್ವೇಶತೀರ್ಥ ಶ್ರೀಪಾದರು ತಮಗೆ ತಂದೆ ತಾಯಿ ಗುರು ಬಂಧು ಎಲ್ಲವೂ ಆಗಿ ನೀಡಿದ ಪ್ರೀತಿ ವಾತ್ಸಲ್ಯವನ್ನು ಜೀವನಪರ್ಯಂತ ಮರೆಯಲು ಸಾಧ್ಯವಿಲ್ಲ. ಈಗ ಶ್ರೀ ವಿಶ್ವಪ್ರಸನ್ನ ತೀರ್ಥರೂ ಅವರ ಪ್ರತಿ ಸ್ವರೂಪರಾಗಿ ಕಾಣುತ್ತಾರೆ ಎಂದರು.‌ ಸುಬ್ರಹ್ಮಣ್ಯ ಭಟ್, ಬಾಲಾಜಿ ರಾಘವೇಂದ್ರಾಚಾರ್ಯ ಭವರ್ ಲಾಲ್ ಜೀ, ವಾಸುದೇವ ಭಟ್ ಪೆರಂಪಳ್ಳಿ ಕೃಷ್ಣಮೂರ್ತಿ ಭಟ್, ಸಂತೋಷ್ ಆಚಾರ್ಯ, ಸತೀಶ್ ಕುಮಾರ್, ರಾಘವೇಂದ್ರ ಭಟ್ ಪ್ರಶಾಂತ್ ಹೆಗ್ಡೆ ಮೊದಲಾದವರಿದ್ದರು.




ಉಡುಪಿ: ಶ್ರೀ ಕೃಷ್ಣಮಠದ ರಾಜಾಂಗಣದಲ್ಲಿ ನಡೆಯುತ್ತಿರುವ 51ನೇ ಅಖಿಲ ಭಾರತೀಯ ಪ್ರಾಚ್ಯಭಾಷಾ ಸಮ್ಮೇಳನದ ಉದ್ಘಾಟನೆಗೆ ಆಗಮಿಸಿದ ವಿಶ್ವಪ್ರಸಿದ್ಧ ಯೋಗ ಗುರು ಬಾಬಾ ರಾಮ್ ದೇವ ಜಿ ಮತ್ತು ಹರಿದ್ವಾರದ ಪತಂಜಲಿ ಯೋಗಪೀಠದ ಕುಲಪತಿ ಆಚಾರ್ಯ ಬಾಲಕೃಷ್ಣಜೀ ಮತ್ತು ಭಾರತೀಯ ಮತ್ತು ಸಮ್ಮೇಳನಾಧ್ಯಕ್ಷೆ, ಭಾರತೀಯ ಪ್ರಾಚ್ಯ ಭಾಷಾ ಸಂಶೋಧನಾ ಸಂಸ್ಥೆಯ ಮುಖ್ಯಸ್ಥೆ, ಪ್ರೊ ಸರೋಜಾ ಭಾಟೆಯವರನ್ನು ಸಮಸ್ತ ಉಡುಪಿಯ ಜನತೆಯ ಪರವಾಗಿ ಸಂಸದ ಕೋಟ ಶ್ರೀನಿವಾಸ ಪೂಜಾರಿಯವರು ಸಂಮಾನಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 



Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top