ಕಲಬುರಗಿ ಜಿಲ್ಲಾ ನೂತನ ಅಬಕಾರಿ ಜಿಲ್ಲಾಧಿಕಾರಿ ಸಂಗನ ಗೌಡರಿಗೆ ಸನ್ಮಾನ

Upayuktha
0


ಕಲ್ಬುರ್ಗಿ: ಅಬಕಾರಿ ಇಲಾಖೆಯ ಕಲ್ಬುರ್ಗಿ ಜಿಲ್ಲಾ ನೂತನ ಅಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಸಂಗನಗೌಡ ಅವರನ್ನು ಕಲಬುರ್ಗಿ ಜಿಲ್ಲಾ ವೈನ್ ಮರ್ಚೆಂಟ್ ಅಸೋಸಿಯೇಷನ್ ನ ಜಿಲ್ಲಾಧ್ಯಕ್ಷರಾದ ಅಶೋಕ್ ಗುತ್ತೇದಾರ್ ಬದದಾಳ ಅವರ ನೇತೃತ್ವದಲ್ಲಿ ಕಚೇರಿಯಲ್ಲಿ ಅಕ್ಟೋಬರ್ 18ರಂದು ಶುಕ್ರವಾರ ಸನ್ಮಾನಿಸಲಾಯಿತು.


ನೂತನ ಅಬಕಾರಿ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಸಂಗನಗೌಡ ಅವರಿಗೆ ಶಾಲು ಮತ್ತು ಹೂಗುಚ್ಚ ನೀಡಿ ಸನ್ಮಾನಿಸಿದ ನಂತರ ಅಶೋಕ್ ಗುತ್ತೇದಾರ್ ಬಡದಾಳ ಮಾತನಾಡಿ ಕಲ್ಬುರ್ಗಿ ಜಿಲ್ಲೆಯ ಅಬಕಾರಿ ವಲಯದ ಎಲ್ಲ ಸನನ್ನದು ದಾರರು ಪೂರ್ಣ ಸಹಕಾರ ನೀಡಿ ಸುಗಮ ವಹಿವಾಟು ನಡೆಸಲು ಮುಂದಾಗ ಬೇಕು. ಇಲಾಖೆ ಕೂಡ ಸೂಕ್ತ ಮಾರ್ಗದರ್ಶನ ನೀಡಿ ಸಹಕರಿಸಬೇಕು ಎಂದು ಈ ಸಂದರ್ಭದಲ್ಲಿ ಹೇಳಿದರು.


ಅಸೋಸಿಯೇಷನ್ ನ ಉಪಾಧ್ಯಕ್ಷರಾದ ಆರ್ ಪಿ. ರೆಡ್ಡಿ, ಪ್ರಧಾನ ಕಾರ್ಯದರ್ಶಿ ವೆಂಕಟೇಶ ಎಂ. ಕಡೇಚೂರ್, ಸನ್ನದು ದಾರರಾದ ಸುರೇಶ್ ಗುತ್ತೇದಾರ್ ಮಟ್ಟೂರ್, ಅಶೋಕ್ ಶಹಾಪುರಕರ್, ಚನ್ನವೀರಪ್ಪ ಪಾಟೀಲ್ ಧನ್ನೂರ್, ರಾಹುಲ್ ಗುತ್ತೇದಾರ್, ಶರಣು ಆಲಕೂಡ, ಯಲ್ಲಯ್ಯ ಗುತ್ತೇದಾರ್ ಮರಗೋಳ ಮತ್ತಿತರು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top