ಮಂಗಳೂರು: 25ರ ಸಂಭ್ರಮ ಯಾನದ ಹರ್ಷದಲ್ಲಿರುವ ಯಶಸ್ವಿ ಕಲಾವೃಂದ (ರಿ) ಕೊಮೆ, ತೆಕ್ಕಟ್ಟೆಯ ಶ್ವೇತ ಯಾನ- 76 ಕಾರ್ಯಕ್ರಮದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿಯಿಂದ ಪ್ರಶಸ್ತಿ ಭಾಜನರಾದ ಸಂಜೀವ ಸುವರ್ಣ, ವಿದ್ವಾನ್ ಗಣಪತಿ ಭಟ್, ಸುಜಯೀಂದ್ರ ಹಂದೆಯವರನ್ನು ಡಾ|| ತಲ್ಲೂರು ಶಿವರಾಮ ಶೆಟ್ಟರು ಹಾಗೂ ಗಣ್ಯರ ಉಪಸ್ಥಿತಿಯಲ್ಲಿ ಗೌರವಿಸಿ, ಅಭಿನಂದಿಸಲಾಯಿತು.
ಆರಂಭದಲ್ಲಿ, ಯಶಸ್ವೀ ಕಲಾವೃಂದದ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಂದ ಪಾರಂಪರಿಕ ಹೂವಿನ ಕೋಲು ಪ್ರದರ್ಶಿಸಲಾಯಿತು. ನಂತರ ರಜತ ಸಂಭ್ರಮದ ಹೊಸ್ತಿಲಲ್ಲಿರುವ ಕೋಡಿಕಲ್ಲ್ ನ ಸರಯೂ ಬಳಗ, ಮಕ್ಕಳ ಮೇಳದಿಂದ ನರಕಾಸುರ ಮೋಕ್ಷ - ತೆಂಕುತಿಟ್ಟು ಯಕ್ಷಗಾನ ಬಯಲಾಟ ನಡೆಯಿತು. ಯಕ್ಷ ಗುರು ರವಿ ಅಲೆವೂರಾಯ ವರ್ಕಾಡಿಯವರ ನಿರ್ದೇಶನವಿತ್ತು.
ಪುಂಡಿಕಾಯಿ ಗೋಪಾಲಕೃಷ್ಣ ಭಟ್, ಮುರಾರಿ ಕಡಂಬಳಿತ್ತಾಯ, ಸುಮಿತ್ ಆಚಾರ್ಯ, ಕಿನ್ನಿಕಂಬಳ, ನಿಹಾಲ್ ಪೂಜಾರಿ ಹಿಮ್ಮೇಳ ಸಹಕಾರವಿತ್ತರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ