ಅಬಕಾರಿ ವಲಯದ ಬೇಡಿಕೆ ಆಗ್ರಹಿಸಿ ಅ.25ರಂದು ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಪ್ರತಿಭಟನೆ

Upayuktha
0

ಸ್ವಚ್ಛ ಅಬಕಾರಿ ಅಭಿಯಾನ" ಪ್ರತಿಭಟನೆಗೆ 15 ಸಾವಿರ ಸನ್ನದುದಾರರು: ಹೆಗ್ಡೆ




ಕಲ್ಬುರ್ಗಿ: ಅಬಕಾರಿ ವ್ಯಾಪಾರಿಗಳ ಹಲವು ಬೇಡಿಕೆಗಳಿಗೆ ಶೀಘ್ರವೇ ರಾಜ್ಯ ಸರ್ಕಾರವು ಸ್ಪಂದಿಸಲು ಒತ್ತಾಯಿಸಿ ಅಕ್ಟೋಬರ್ 25 ರಂದು ಬೆಂಗಳೂರಿನಲ್ಲಿ" ಸ್ವಚ್ಛ ಅಬಕಾರಿ ಅಭಿಯಾನ"ಬೃಹತ್ ಪ್ರತಿಭಟನೆ ನಡೆಯಲಿದ್ದು 15,000ಕ್ಕೂ ಹೆಚ್ಚು ಸಣ್ಣದು ದಾರರು ಈ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಫೆಡರೇಶನ್ ಆಫ್ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್ ನ ರಾಜ್ಯ ಪ್ರಧಾನ ಕಾರ್ಯದರ್ಶಿ ಗೋವಿಂದರಾಜ ಹೆಗ್ದೆ ತಿಳಿಸಿದರು.


ಕಲ್ಬುರ್ಗಿಯ ಹೊರವಲಯದ ಅಳಂದ ರಸ್ತೆಯಲ್ಲಿರುವ ಕ್ರಿಸ್ಟಲ್ ಪಾಮ್ಸ್ ರೆಸಾರ್ಟ್ ಸಭಾಂಗಣದಲ್ಲಿ ಅಕ್ಟೋಬರ್ 15 ರಂದು ನಡೆದ ಕಲ್ಬುರ್ಗಿ ವಿಭಾಗ ಮಟ್ಟದ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್ ಸನ್ನದುದಾರರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಆಯೋಜಿಸಿರುವ "ಸ್ವಚ್ಛ ಅಬಕಾರಿ ಅಭಿಯಾನ"ಪ್ರತಿಭಟನಾ ಸಭೆಯ ಪೂರ್ವಭಾವಿಯಾಗಿ ವಿಭಾಗ ಮಟ್ಟದ ಮತ್ತು ಜಿಲ್ಲಾಮಟ್ಟದ ಸಭೆಗಳನ್ನು ಆಯೋಜಿಸಿ ಸನ್ನದುದಾರರ ಸಮಸ್ಯೆಗಳನ್ನು ಅಧ್ಯಯನ ಮಾಡಲಾಗುತ್ತಿದೆ. ಸನ್ನದುದಾರರು ಮುಕ್ತವಾಗಿ ಮತ್ತು ಕಾನೂನಿನ ಪ್ರಕಾರ ವ್ಯವಹಾರ ನಡೆಸಲು ನಾನಾ ರೀತಿಯ ತೊಂದರೆಗಳು ಎದುರಾಗುತ್ತಿದ್ದು ಅಬಕಾರಿ ಕ್ಷೇತ್ರದಲ್ಲಿ ತುಂಬಿರುವ ಭ್ರಷ್ಟಾಚಾರ, ವಿನಾಕಾರಣ ಪೊಲೀಸರ ಮಧ್ಯಪ್ರವೇಶದಿಂದ ಕಿರುಕುಳ, ಲಕ್ಷಾನುಗಟ್ಟಲೆ ತೆರಿಗೆ ತುಂಬುವ ಸನ್ನದುದಾರರಿಗೆ ವಿವಿಧ ಸರಕಾರಿ ರಜೆಗಳ ಹೆಸರಲ್ಲಿ ನಿರ್ಬಂಧ ಹೇರಿ ವ್ಯವಹಾರ ನಷ್ಟವಾಗುತ್ತಿರುವುದು, ಹತ್ತಾರು ಇಲಾಖೆಗಳ ಮಧ್ಯಪ್ರವೇಶದಿಂದ ಸನ್ನದುದಾರರಿಗೆ ಕಿರುಕುಳ ನೀಡುತ್ತಿರುವುದು ಮುಂತಾದ ಸಮಸ್ಯೆಗಳಿಗೆ ಸರಕಾರ ಶೀಘ್ರವೇ ಸ್ಪಂದನೆ ನೀಡಬೇಕು. ಈ ಹಿಂದೆ ಹಲವು ಬಾರಿ ಅಬಕಾರಿ ಸಚಿವರು ಹಾಗೂ ಮುಖ್ಯಮಂತ್ರಿಗಳ ಗಮನಕ್ಕೆ ತಂದರೂ ಬೇಡಿಕೆಯನ್ನು ಈಡೇರಿಸಲಿಲ್ಲ. ಈ ಬಾರಿ ಅಸೋಸಿಯೇಷನ್ "ಸ್ವಚ್ಛ ಅಬಕಾರಿ ಅಭಿಯಾನ"ದ ಮೂಲಕ ಸ್ವತಂತ್ರ ಹಾಗೂ ಮುಕ್ತ ವ್ಯಾಪಾರ ವಹಿವಾಟಿಗೆ ಅವಕಾಶ ನೀಡಲು ಆಗ್ರಹಿಸಲಾಗುವುದು. ಬೇಡಿಕೆ ಈಡೇರದಿದ್ದರೆ ಮುಂದಿನ ದಿನಗಳಲ್ಲಿ ತೀವ್ರ ಹೋರಾಟಕ್ಕೂ ಸಿದ್ಧ. ಜಿಲ್ಲೆಗಳ ಅಬಕಾರಿ ಅಧಿಕಾರಿಗಳು ಪರವಾನಿಗೆ ನವೀಕರಣಕ್ಕಾಗಿ ಹಣದ ಬೇಡಿಕೆ ಒಡ್ಡುತ್ತಿರುವುದು ಹಾಗೂ ಪ್ರತಿ ತಿಂಗಳ ಲಂಚ ವಸೂಲಿ ಮೂಲಕ ಸನ್ನದುದಾರರನ್ನು ಶೋಷಣೆ ಮಾಡಿ ಸಂಕಷ್ಟಕ್ಕೆ ಈಡು ಮಾಡುತ್ತಿರುವುದು ಗಮನಕ್ಕೆ ಬಂದಿದೆ ಎಂದು ಹೇಳಿದರು.


ಜೆಡಿಎಸ್ ನ ಕಲಬುರಗಿ ಜಿಲ್ಲಾಧ್ಯಕ್ಷರು ಹಾಗೂ ಯುವ ಮುಖಂಡರಾದ ಬಾಲರಾಜ್ ಗುತ್ತೇದಾರ್ ಮಾತನಾಡಿ, ರಾಜ್ಯದಲ್ಲಿ ಸನ್ನದುದಾರರ ಒಗ್ಗಟ್ಟು ಮತ್ತು ಸಂಘಟನಾ ಶಕ್ತಿಯಿಂದ ಸಮಸ್ಯೆ ನಿವಾರಣೆಗೆ ಮುಂದಾಗಬೇಕು ಹಾಗೂ ರಾಜ್ಯ ಸರಕಾರವು ಎಂ ಎಸ್ ಐ ಎಲ್ ಮದ್ಯದ ಅಂಗಡಿಗಳನ್ನು ಬೇಕಾಬಿಟ್ಟಿ ತೆರೆಯಲು ಅನುಮತಿ ನೀಡಿ ಸನ್ನದುದಾರರು ತೀವ್ರ ವ್ಯಾಪಾರ ಕುಸಿತ ಅನುಭವಿಸುತ್ತಿದ್ದು ಸರಕಾರ ಈ ಬಗ್ಗೆ ಮರುಚಿಂತನೆ ಮಾಡಬೇಕು ಎಂದು ಹೇಳಿದರು. ಅಸೋಸಿಯೇಷನ್ ನ ಕಲ್ಬುರ್ಗಿಯ ಜಿಲ್ಲಾಧ್ಯಕ್ಷರಾದ ಅಶೋಕ್ ಗುತ್ತೇದಾರ್ ಬಡದಾಳ ಅಧ್ಯಕ್ಷತೆ ವಹಿಸಿದ್ದರು.


ಫೆಡರೇಶನ್ ರಾಜ್ಯ ಅಧ್ಯಕ್ಷರಾದ ಗುರುಸ್ವಾಮಿ, ಕಲಬುರ್ಗಿ ಜಿಲ್ಲಾ ಗೌರವಾಧ್ಯಕ್ಷರಾದ ವೀರಯ್ಯ ಗುತ್ತೇದಾರ್, ಪ್ರಧಾನ ಕಾರ್ಯದರ್ಶಿ ವೆಂಕಟೇಶ ಎಂ. ಕಡೇಚೂರ್,ಬೀದರ್ ಜಿಲ್ಲಾ ಅಧ್ಯಕ್ಷ ನಾರಾಯಣ ರಾವ್,ಯಾದಗಿರಿ ಜಿಲ್ಲಾ ಅಧ್ಯಕ್ಷ ರಾಘವೇಂದ್ರ ವಡಗೇರಿ, ಕಾರ್ಯದರ್ಶಿ ಉಮೇಶ್, ರಾಯಚೂರು ಜಿಲ್ಲಾ ಅಧ್ಯಕ್ಷ ಮಂಜುನಾಥ್ ಹಾನಗಲ್,ವಿಭಾಗೀಯ ಅಧ್ಯಕ್ಷ ಜಿ. ರಾಮುಲು, ಕಲಬುರಗಿ ಜಿಲ್ಲಾ ಖಜಾಂಚಿ ತಿಮ್ಮಪ್ಪ ಗಂಗಾವತಿ,ಮಹಾದೇವ ಗುತ್ತೇದಾರ್,ರವಿ ಬೋರಾಳೆ,ಸುರೇಶ್ ಗುತ್ತೇದಾರ್ ಮಟ್ಟೂರು,ಅಮೋಘ ಗುತ್ತೇದಾರ್, ಸತ್ಯನಾರಾಯಣ ವಾಡಿ, ಸಾಯಬಣ್ಣ ಕಾಶಿ, ಶೇಖರ್ ಗುತ್ತೇದಾರ್ ಗಾರಂಪಳ್ಳಿ, ಸಿದ್ದು ಪಾಟೀಲ್ ಚಿಂಚೋಳಿ, ಹರ್ಷ ತೇರದಾಳ, ಬಿಎಸ್ ಪಾಟೀಲ್, ಹರ್ಷ ಅಶೋಕ್ ಗುತ್ತೇದಾರ್, ಮಂಜು ಗುತ್ತೇದಾರ್ ಚಿಗರಳ್ಳಿ , ಪವನ್ ಅಶೋಕ್ ಗುತ್ತೇದಾರ್,ರಾಜೇಶ್ ದತ್ತು ಗುತ್ತೇದಾರ್, ಶರಣಯ್ಯ ಗುತ್ತೇದಾರ್, ಅಂಬಯ್ಯ ಗುತ್ತೇದಾರ್ ಮತ್ತಿತರರಿದ್ದರು. ಕಲ್ಬುರ್ಗಿ ಜಿಲ್ಲಾ ವೈನ್ ಮರ್ಚೆಂಟ್ ಅಸೋಸಿಯೇಷನ್ ಉಪಾಧ್ಯಕ್ಷರಾದ ಆರ್. ಪಿ.ರೆಡ್ಡಿ ಸ್ವಾಗತಿಸಿ ರಾಮುಲು ರೆಡ್ಡಿ ಅವರು ವಂದನಾರ್ಪಣೆಗೆದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top