ಉಡುಪಿ: ಮಾ಼ಕ್ಸ್ ಮೀಡಿಯಾ ಉಡುಪಿ, ಇವರು ಸುರತ್ಕಲ್ ನ ಚಿರಂತನ ಚ್ಯಾರಿಟೇಬಲ್ ಟ್ರಸ್ಟ್ ಜೊತೆ ಸೇರಿ ಉಡುಪಿಯಲ್ಲಿ ಈ ತಿಂಗಳ 26 ನೆಯ ತಾರೀಕು ಶನಿವಾರ ಸಂಜೆ 4 ರಿಂದ ರಾತ್ರಿ 8 ರ ತನಕ ಹಿಂದುಸ್ಥಾನಿ ಸಂಗೀತ ಹಬ್ಬವನ್ನು ಆನಂದಿಸುವ ಸದವಕಾಶವನ್ನು ಉಡುಪಿಯ ಸಂಗೀತ ಪ್ರಿಯರಿಗೆ ಕಲ್ಪಿಸಿಕೊಡುತ್ತಿದ್ದಾರೆ.
ಉಡುಪಿಯ ಯಕ್ಷಗಾನ ಕಲಾರಂಗ ಇನ್ಫೋಸಿಸ್ ಸಭಾಂಗಣದಲ್ಲಿ ನಡೆಯಲಿರುವ ಈ ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮದಲ್ಲಿ ಕಲ್ಕತ್ತಾದ ಸಿತಾರ್ ಕಲಾವಿದರಾದ ಪಂಡಿತ್ ಪಾರ್ಥಾ ಬೋಸ್ ಕೆನಡಾದಲ್ಲಿ ನೆಲೆಸಿರುವ ಸರೋದ್ ಕಲಾವಿದ ಆರ್ನಮ್ ಚಕ್ರಬರ್ತಿ ಹಾಗೂ ಉಡುಪಿಯ ಯುವ ಗಾಯಕಿ ಕುಮಾರಿ ಅನುರಾಧಾ ಭಟ್ ಇವರುಗಳು ಗೋವಾದ ಮಾಯಾಂಕ್ ಬೆಡೇಕರ್, ವಿಘ್ನೇಶ್ ಕಾಮತ್ ಕೋಟೇಶ್ವರ, ದೀಪಕ್ ನಾಯಕ್ ಹರಿಕಂಡಿಗೆ ಹಾಗೂ ಉಡುಪಿಯ ಪ್ರಸಾದ್ ಕಾಮತ್ ಇವರ ಸಾತ್ ಸಂಗತ್‌ಗಳೊಂದಿಗೆ ಸಂಗೀತ ಸುಧೆಯನ್ನು ಹರಿಸಲಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ