ಹಾಸನ: ಮನೆ ಮನೆ ಕವಿಗೋಷ್ಠಿ ಇವರ ವತಿಯಿಂದ 323ನೇ ತಿಂಗಳ ಸಾಹಿತ್ಯ ಕವಿಗೋಷ್ಠಿ ಗಾಯನ ಕಾರ್ಯಕ್ರಮವು ಕವಿ ಗಾಯಕರು ಜಿ. ಆರ್. ಶ್ರೀಕಾಂತ್ ಇವರ ಪ್ರಾಯೋಜಕತ್ವದಲ್ಲಿ ಹಾಸನ ನಗರದ ಸಿಟಿ ಬಸ್ ನಿಲ್ದಾಣದ ವಾಣಿ ವಿಲಾಸ ರಸ್ತೆ ಪ್ರಾಚ್ಯ ವಸ್ತು ಸಂಗ್ರಹಾಲಯ ಪಕ್ಕದಲ್ಲೇ ಇರುವ ಹಾಸನಾಂಬ ಥಿಯಸಾಫಿಕಲ್ ಸೊಸೈಟಿ ಕಾರ್ಯಾಲಯದಲ್ಲಿ ನವೆಂಬರ್ 3ರಂದು ಭಾನುವಾರ ಮಧ್ಯಾಹ್ನ 3.30 ಗಂಟೆಗೆ ನಡೆಯುವುದು.
ಜಿಲ್ಲೆಯ ಹಿರಿಯ ಸಾಹಿತಿಗಳು, ನಾಟಕಕಾರರು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಗೌರವ ಕಾರ್ಯದರ್ಶಿ ಗೊರೂರು ಸೋಮಶೇಖರ್ ಇವರ ಸಾಹಿತ್ಯ ಕೃತಿಗಳು ಗೊರೂರು ನೆನಪುಗಳು ಮತ್ತು ಬಸವಣ್ಣನ ಪುರಾತ ದಾಸಿಮಯ್ಯ ಕುರಿತು ಗೊರೂರು ಶಿವೇಶ್, ನಿವೃತ್ತ ಆಂಗ್ಲ ಭಾಷಾ ಉಪನಾೃಸಕರು ಹಾಗೂ ಲೇಖಕರು ಇವರಿಂದ ಉಪನ್ಯಾಸ ಇರುವುದು.
ಡಾ. ಎಂ.ಆರ್. ಚಂದ್ರಶೇಖರ್, ಪ್ರಾಂಶುಪಾಲರು ಹಾಗೂ ಅಧ್ಯಕ್ಷರು, ಹಾಸನಾಂಬ ಥಿಯಸಾಫಿಕಲ್ ಸೊಸೈಟಿ, ಹಾಸನ ಇವರು ಗೊರೂರು ಸೋಮಶೇಖರ್ ಅವರ ಸಾಮಾಜಿಕ ಸೇವೆ ಸಾಹಿತ್ಯ ಪರಿಚಾರಿಕೆ ಕುರಿತಾಗಿ ಮಾತನಾಡುವರು.
ನಂತರ ಆಗಮಿತ ಕವಿಗಳಿಂದ ಕವಿಗೋಷ್ಠಿ, ಗಾಯಕ ಗಾಯಕಿಯರಿಂದ ಗಾಯನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸಾಹಿತ್ಯಾಸಕ್ತರು ಗಾಯಕರು ಭಾಗವಹಿಸಬೇಕೆಂದು ಮನೆ ಮನೆ ಕವಿಗೋಷ್ಠಿ ಸಂಚಾಲಕ ಗೊರೂರು ಅನಂತರಾಜುರವರು ಕೋರಿರುತ್ತಾರೆ.
ಸಂಪರ್ಕಕ್ಕಾಗಿ ಸಂಖ್ಯೆಗಳು: 94494 62879- ಗೊರೂರು ಅನಂತರಾಜು/ 9449311298-ಸಮುದ್ರವಳ್ಳಿ ವಾಸು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ