ಪ್ರೇಕ್ಷಕರ ಮನಸೆಳೆದ "ನೃತ್ಯ ವೈಭವ"

Upayuktha
0

 


ಬೆಂಗಳೂರು: ನಾಗರಬಾವಿ ಮುಖ್ಯರಸ್ತೆಯಲ್ಲಿರುವ ಕೆನರಾ ಬ್ಯಾಂಕ್ ಕಾಲೋನಿಯ ಶ್ರೀ ವರಸಿದ್ಧಿ ವಿನಾಯಕ ದೇವಾಲಯ ಮತ್ತು ಶ್ರೀ ಸುಮುಖ ಸಂಪದ ಚಾರಿಟೇಬಲ್ ಟ್ರಸ್ಟ್ ಇವುಗಳ ಸಂಯುಕ್ತಾಶ್ರಯದಲ್ಲಿ ನವರಾತ್ರಿ ಮಹೋತ್ಸವದ ಪ್ರಯುಕ್ತ ಅಕ್ಟೋಬರ್ ಎಂಟರಂದು ಸಂಜೆ ಗುರು ಡಾ|| ಶ್ರೀಮತಿ ದರ್ಶಿನಿ ಮಂಜುನಾಥ್ ಪಿ.ಎಚ್ ಡಿ., (ಪರ್ಫಾರ್ಮಿಂಗ್ ಆರ್ಟ್ಸ್ ನ ಸಂಶೋಧಕರು, ಮತ್ತು ನೃತ್ಯ  ಸಂಯೋಜಕರು) ಅವರ ನಿರ್ದೇಶನದಲ್ಲಿ ನೃತ್ಯ ದಿಶಾ ಟ್ರಸ್ಟ್ ನ ವಿದ್ಯಾರ್ಥಿಗಳಿಂದ ವಿಶೇಷ ನೃತ್ಯ ಪ್ರದರ್ಶನ ಕಾರ್ಯಕ್ರಮ ಜರಗಿತು. 


ದೇವಸ್ಥಾನದ ಪದಾಧಿಕಾರಿ  ಎಂ.ಟಿ. ಶ್ರೀನಿವಾಸನ್ ಕಲಾವಿದರನ್ನು ಸ್ವಾಗತಿಸಿದರು. ಮತ್ತೊಬ್ಬ ಪದಾಧಿಕಾರಿ ಶ್ರೀ ನರಸಿಂಹಮೂರ್ತಿ ವಂದನಾರ್ಪಣೆ ಮಾಡಿದರು. ನೃತ್ಯ ದಿಶಾ ಟ್ರಸ್ಟ್ ನ ಹಿರಿಯ ವಿದ್ಯಾರ್ಥಿಗಳಾದ ಕು|| ಉಮಾ ಮತ್ತು  ಕಾರ್ತೀಕ್  ಇವರಿಬ್ಬರೂ ಕಾರ್ಯಕ್ರಮದ ನಿರೂಪಣೆಯನ್ನು ಬಹಳ ಅಚ್ಚುಕಟ್ಟಾಗಿ ನಡೆಸಿಕೊಟ್ಟರು.  ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top