ಪುತ್ತೂರು: ನವರಾತ್ರಿಯ ಶುಭ ಸಂರ್ಭದಲ್ಲಿ ವಿವೇಕಾನಂದ ಕಾಲೇಜಿನಲ್ಲಿ ನವಯುಗಾರಂಭವಾಗಿದೆ. ನಮ್ಮ ಧರ್ಮ, ಸಂಸ್ಕೃತಿಯ ಬಗ್ಗೆ ಭಾರತೀಯರಾದ ನಾವು ಗೌರವ ತೋರಬೇಕು. ನಮ್ಮೊಳಗಿನ ಸ್ವಾಭಿಮಾನ ಜಾಗೃತವಾಗುವುದು ಅನಿವರ್ಯ. ಎಲ್ಲಾ ಕಡೆಗಳಲ್ಲೂ ರಾಷ್ಟ್ರೀಯತೆಯ ಚಿಂತನೆಯನ್ನು ಹರಿಯಬಿಡಬೇಕು. ಆ ವ್ಯವಸ್ಥೆಯನ್ನು ವಿವೇಕಾನಂದ ಕಾಲೇಜಿನಲ್ಲಿ ನಾವು ಕಾಣಬಹುದು. ಇದು ಹೆಮ್ಮೆಯು ವಿಚಾರ ಎಂದು ಪುತ್ತೂರು ವಿವೇಕಾನಂದ ವಿದ್ಯಾರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಹೇಳಿದರು.
ಇವರು ಪುತ್ತೂರು ವಿವೇಕಾನಂದ ಪದವಿಪರ್ವ ಕಾಲೇಜಿನಲ್ಲಿ ನಡೆದ ಇಂಗ್ಲೀಷ್ ವ್ಯಾಕರಣ ಮತ್ತು ಸಂವಹನ ಪಠ್ಯಪುಸ್ತಕದ ಅನಾವರಣ ಸಮಾರಂಭದಲ್ಲಿ ಮಾತನಾಡಿದರು.
ನಮ್ಮ ದೇಶದ ಸತ್ವವನ್ನು ಮುಂದಿನ ಪೀಳಿಗೆಗೆ ತಿಳಿಸಿಕೊಡುವುದು ಅಗತ್ಯ. ಇಂದಿನ ವಾತಾವರಣದ ನಡುವೆ ನಮ್ಮ ಹಿಂದುತ್ವವನ್ನು ಉಳಿಸಿಕೊಳ್ಳಲು ಹೆಣಗಾಡುವ ಪರಿಸ್ಥಿತಿ ಇದ್ದರೂ ಇದರ ನಡುವೆ ವಿವೇಕಾನಂದ ಕಾಲೇಜಿನಲ್ಲಿ ರಾಷ್ಟ್ರೀಯತೆಯ ಚಿಂತನೆಯನ್ನು ಬೆಳೆಸಿ ಪಸರಿಸುವ ಪ್ರಯತ್ನ ನಡೆಯುತ್ತಿದೆ ಎಂದರು.
ಕರ್ಯಕ್ರಮದ ಗೌರವ ಅತಿಥಿ ವಿವೇಕಾನಂದ ವಿದ್ಯಾರ್ಧಕ ಸಂಘದ ಕರ್ಯರ್ಶಿ ಡಾ. ಕೆ.ಎಮ್. ಕೃಷ್ಣ ಭಟ್ ಮಾತನಾಡಿ, ಪರಾವಲಂಬನೆಯ ಚಕ್ರವ್ಯೂಹದಲ್ಲಿ ನಾವಿರುವುದು ವಿಷಾದನೀಯ. ಇಂದು ಸ್ವಾವಲಂಬನೆಯ ಹಾದಿಯಲ್ಲಿ ಸಾಗುವ ರೀತಿಯನ್ನು ಪಠ್ಯಪುಸ್ತಕದಲ್ಲಿ ಉಲ್ಲೇಖಿಸಿರುವುದು ಪ್ರಶಂಸನೀಯ. ಈ ಕರ್ಯದಲ್ಲಿ ತೊಡಗಿಸಿಕೊಂಡ ಎಲ್ಲರಿಗು ಅಭಿನಂದನೆ. ಅದೇ ರೀತಿ ಈ ಉತ್ಸಾಹ ಮುಂದಿನ ದಿನಗಳಲ್ಲಿ ಮುಂದುವರಿಯಲಿ ಎಂದರು.
ಪಠ್ಯಪುಸ್ತಕ ತಯಾರಿಕೆಯಲ್ಲಿ ತೊಡಗಿಸಿಕೊಂಡ ಶಿಕ್ಷಕರಿಗೆ ಡಾ.ಪ್ರಭಾಕರ ಭಟ್ ಕಲ್ಲಡ್ಕ ಇವರ ಹಸ್ತಾಕ್ಷರ ಇರುವ ಭಗವದ್ಗೀತೆ ಪುಸ್ತಕವನ್ನು ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ವಿವಿಧ ವಿದ್ಯಾಸಂಸ್ಥೆಗಳ ಮುಖ್ಯಸ್ಥರು ಹಾಗೂ ಶಿಕ್ಷಕರು ಭಾಗವಹಿಸಿದರು.
ಇಂದ್ರಪ್ರಸ್ಥ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ರಚನಾ ಸ್ವಾಗತಿಸಿ, ಮುಖ್ಯ ಸಂಪಾದಕ ಸತೀಶ್ ಕುಮಾರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಇಂದ್ರಪ್ರಸ್ಥ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಸುಪ್ರೀತ ವಂದಿಸಿ, ಶ್ರೀರಾಮ ಕಲ್ಲಡ್ಕ ಶಾಲೆಯ ಸಹಾಯಕ ಪ್ರಾಧ್ಯಾಪಕಿ ರಾಜೇಶ್ವರಿ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ