ಮಂಗಳೂರು: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಕೇಂದ್ರ ಸಮಿತಿ ಹಾಗೂ ಮಹಾಸಭಾದ ದಕ್ಷಿಣ ಕನ್ನಡ ಜಿಲ್ಲಾ ಘಟಕ ಜಂಟಿಯಾಗಿ ಮಂಗಳೂರಿನ ಚಿತ್ರಾಪುರ ಮಠದ ಸಹಕಾರದೊಂದಿಗೆ ಅ. 26 ಮತ್ತು 27ರಂದು ನಡೆಸಲು ಉದ್ದೇಶಿಸಿದ ಗಾಯತ್ರಿ ಸಂಗಮ ಸಾಂಘಿಕ ಕೋಟಿ ಗಾಯತ್ರೀ ಜಪಯಜ್ಞದ ಚಪ್ಪರ ಮುಹೂರ್ತ ಮತ್ತು ಯಜ್ಞ ಕುಂಡದ ಮುಹೂರ್ತ ಕಾರ್ಯಕ್ರಮ ಅ. 16ರಂದು ಬೆಳಗ್ಗೆ 10.00 ಗಂಟೆಗೆ ನಡೆಯಲಿದೆ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯ ಉಪಾಧ್ಯಕ್ಷ ನ್ಯಾಯವಾದಿ ಮಹೇಶ್ ಕಜೆ ತಿಳಿಸಿದ್ದಾರೆ.
ಚಿತ್ರಾಪುರ ಮಠಾಧೀಶರಾದ ಶ್ರೀ ವಿದ್ಯೇಂದ್ರ ತೀರ್ಥ ಶ್ರೀಪಾದರು ಉಪಸ್ಥಿತಿಯಲ್ಲಿ, ವೇ.ಮೂ ಕುಡುಪು ಕೃಷ್ಣರಾಜ ತಂತ್ರಿಗಳ ಚಪ್ಪರ ಮುಹೂರ್ತ ಹಾಗೂ ಯಜ್ಞಕುಂಡ ಮುಹೂರ್ತ ನಡೆಯಲಿದೆ.
ಬ್ರಾಹ್ಮಣ ಸಮುದಾಯದ ಎಲ್ಲ ಜ್ಞಾನಿಗಳು, ವಿದ್ವಾಂಸರು, ವಿಪ್ರರು, ಮುಂದಾಳುಗಳು, ಹಿರಿಯರು, ಯುವಸಮುದಾಯ, ಮಕ್ಕಳು, ಮಹಿಳೆಯರು ಹೀಗೆ ಎಲ್ಲರೂ ಸೇರಿ ಸಾಮರಸ್ಯದಿ ಜಗವ ಬೆಳಗುವ ಬ್ರಹ್ಮತೇಜದ ಬೆಳಕಲಿ ಎಂಬ ಸದಾಶಯದೊಂದಿಗೆ ಕಡಲ ಕಿನಾರೆ ಚಿತ್ರಾಪುರ ಶ್ರೀ ದುರ್ಗಾಪರಮೇಶ್ವರಿ ದೇವಳದಲ್ಲಿ ಕೋಟಿ ಗಾಯತ್ರಿ ಜಪಯಜ್ಞ ಕೈಗೆತ್ತಿಕೊಂಡಿರುತ್ತಾರೆ. ಮಾತೆಯರು ಸರ್ವ ಮಂಗಳ ಮಾಂಗಲ್ಯ ಸ್ತೋತ್ರ ಪಠಣ ಸಂಕಲ್ಪ ಮಾಡಿ ಯಶಸ್ವಿಯಾಗಿ ನಡೆಯುತ್ತಿದೆ. ಮನೆ ಮನೆಗಳಲ್ಲಿ ಜಪ ನಡೆಯುತ್ತಿದೆ. ಇದೊಂದು ಬೃಹತ್ ಅಭಿಯಾನವಾಗಿ ಮುನ್ನಡೆಯುತ್ತಿದೆ ಎಂದು ಪ್ರಧಾನ ಸಂಚಾಲಕ ಶ್ರೀಧರ ಹೊಳ್ಳ ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ದೇವಾಲಯದ ಅರ್ಚಕರು, ಜಿಲ್ಲೆಯ ಎಲ್ಲ ಪುರೋಹಿತರು, ಸಹಾಯಕ ಪುರೋಹಿತರು, ಸಂಸ್ಕೃತ ಶಿರೋಮಣಿಗಳು, ವೇದಜ್ಞರು ಬೆಂಬಲ ಸೂಚಿಸಿದ್ದು, ಅಭಿಯಾನ ಯಶಸ್ವಿಯಾಗಿ ನಡೆಯುತ್ತಿದೆ. ಹೋಮಕ್ಕೆ ಬೇಕಾದ ಸಮಿತಿ, ಉಪ ಸಮಿತಿಗಳನ್ನು ರಚಿಸಿದ್ದು, ಸಕ್ರಿಯವಾಗಿ ಸೇವೆಯಲ್ಲಿ ತೊಡಗಿಸಿಕೊಳ್ಳಲು ಉದ್ದೇಶಿಸಿರುವ ಆಸಕ್ತರು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ