ಭೂಮಿ ಉಳಿಸೋಣ ಬನ್ನಿ- ನವರಾತ್ರಿ ಉತ್ಸವದಲ್ಲಿ ಕೃಷಿ ಕಾರ್ಯಕ್ರಮ

Upayuktha
0


ಕೊಪ್ಪ: ಕೊಪ್ಪ ತಾಲೂಕು ಹೆಗ್ಗಾರು ಕೊಡುಗೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಅ.12ರಂದು ನವರಾತ್ರಿ ಉತ್ಸವದ ಪ್ರಯುಕ್ತ ಆದರ್ಶ ಹೆಗ್ಗಾರು ಕೊಡುಗೆ ಅವರ ಸಂಯೋಜಕತ್ವದಲ್ಲಿ ಏರ್ಪಡಿಸಿದಂತಹ "ಭೂಮಿ ಉಳಿಸೋಣ ಬನ್ನಿ" ಎಂಬ ಶೀರ್ಷಿಕೆ ಅಡಿಯಲ್ಲಿ ಕೃಷಿ ಸಂವಾದ ಮತ್ತು ಸಾವಯವ ಕೃಷಿ ಚಿಂತನ ಮಂಥನ ಹಾಗೂ ಉತ್ತಮ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಯಿತು. 


ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಆದರ್ಶ ಹೆಗ್ಗಾರುಕೊಡಿಗೆ ಅವರು ಪ್ರಾಸ್ತಾವಿಕವಾಗಿ ಕೃಷಿ ಸಾಧಕ ಬಾಧಕಗಳ ಬಗ್ಗೆ ಅದ್ಭುತವಾಗಿ ಮಾತನಾಡಿದರು. 


ಮಳೆನಾಡು ಪ್ರಾಂತ್ಯದ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ತಲುವಾನೆ ಪ್ರಕಾಶ್ ಇವರು ಅವೈಜ್ಞಾನಿಕ ಅರಣ್ಯ ಕಾಯ್ದೆಗಳ ಸಾಧಕ ಬಾಧಕಗಳ ಬಗ್ಗೆ ಮಾತನಾಡಿ ರೈತರಿಗೆ ಆತ್ಮವಿಶ್ವಾಸ ತುಂಬಿದರು. 


ನಂತರ ಕೆ ವಿ ವಿಜಯರಂಗ ಕೋಟೆ ತೋಟ ಅವರು ಅಡಿಕೆ ಹಳದಿ ಎಲೆ ರೋಗ, ಎಲೆ ಚುಕ್ಕೆ ಯೋಗ ರೋಗ ಇವುಗಳ ಬಗ್ಗೆ ಸವಿಸ್ತಾರವಾಗಿ ಮಾತನಾಡಿದರು. 


ಅರವಿಂದ್ ಸಿಗದಾಳ್, ಮೇಲ್ಕೊಪ್ಪ ಇವರು ಪ್ರಸಕ್ತ ಕೃಷಿಯಲ್ಲಿ ತಾಂತ್ರಿಕ ಅಭಿವೃದ್ಧಿ ಮತ್ತು ತೊಡಕುಗಳು ಹಾಗೂ ಪರಿಹಾರ ಇವುಗಳ ಬಗ್ಗೆ ಜನರಿಗೆ ಮಾಹಿತಿ ನೀಡಿದರು. 


ಗಣೇಶ್ ಕೆ. ಆರ್ ಕೊನೋಡಿ ಇವರು ಸಾವಯವ ಕೃಷಿ ಹಾಗೂ ಆಹಾರ ಪದ್ಧತಿಯ ಬಗ್ಗೆ ಉಪನ್ಯಾಸ ಮಾಡಿದರು. 


ರಂಜಿತ್ ನ್ಯೂಸ್ ಮಲ್ನಾಡ್ ಶೃಂಗೇರಿ ಇವರು ಕಸ್ತೂರಿರಂಗನ್ ವರದಿ ಹಾಗೂ ಮಾರಕ ಅರಣ್ಯ ಕಾಯ್ದೆ ಬಗ್ಗೆ ಸವಿಸ್ತಾರವಾಗಿ ಮಾತನಾಡಿದರು.


ಪ್ರಶಾಂತ ಜಾಲ್ಮರ್ ಇವರು ಇವತ್ತಿನ ಮಧ್ಯಮ ವರ್ಗದ ರೈತರ ಸ್ಥಿತಿ ಗತಿಗಳ ಬಗ್ಗೆ ಹಾಗೂ ನೊಂದು ಆತ್ಮಹತ್ಯೆಗೆ ಶರಣಾಗುವಂತಹ ರೈತರಿಗೆ ಆತ್ಮಸ್ಥೈರ್ಯವನ್ನು ತುಂಬಿ ಬದುಕು ಸಾಗಿಸುವ ಬಗ್ಗೆ ಮಾತನಾಡಿದರು.


ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸತ್ಯನಾರಾಯಣ ಮತ್ತು ತಂಡ ಮೇಗೂರು ಇವರಿಂದ ಗೀತ ಗಾಯನ ಕಾರ್ಯಕ್ರಮ. ಕೃಷಿ ಜಾನಪದ ಪರಿಷತ್ ಮೇಗುಂದ ಹೋಬಳಿ ಇವರಿಂದ ಜಾನಪದ ಕಾರ್ಯಕ್ರಮ ಹಾಗೂ ನಾಟ್ಯ ವೈಭವ ನೃತ್ಯ ಅಕಾಡೆಮಿಯ ಕುಮಾರಿ ನಿಕಿತಾ ಶೃಂಗೇರಿ ಇವರಿಂದ ನೃತ್ಯ  ಕಾರ್ಯಕ್ರಮ ನೆಡೆಯಿತು.


ಸ್ಥಳೀಯ ಕಲಾವಿದೆ ಕುಮಾರಿ ಸೃಷ್ಟಿ ಇವರಿಂದ ಗಾಯನ ಹಾಗೂ ಸ್ಥಳೀಯ ಮಕ್ಕಳಿಂದ ನೃತ್ಯ ಕಾರ್ಯಕ್ರಮವೂ ಸೇರಿದ್ದ ರೈತರ, ಭಕ್ತಾದಿಗಳ ಮನ ಸೆಳೆಯಿತು.


ದೇವಸ್ಥಾನದ ಸಂಸ್ಥೆಯವರು ಹಾಗೂ ಸ್ಥಳೀಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸ್ವಾಗತ ವೇಣುಗೋಪಾಲ್ ಕೊಗ್ರೆ, ನಿರೂಪಣೆ ಪ್ರಶಾಂತ್ ಜಾಳ್ಮರ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಯಶಸ್ವಿಗೊಂಡಿತು.


إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top