ಏತಡ್ಕ: ಶಿವಾರ್ಪಣಂ ಎನ್ನುವುದು ಒಂದು ವಿನೂತನ ಪರಿಕಲ್ಪನೆ. ದೇವಸ್ಥಾನದ ಸುತ್ತ ಮುತ್ತಲಿನ ನೂರಾರು ಮನೆಗಳು ಬ್ರಹ್ಮ ಕಲಶೋತ್ಸವ ನೆವದಲ್ಲಿ ಒಟ್ಟುಗೂಡಿ ದೇವರ ಸೇವೆ ಮಾಡುವ ಪರಿಸರ ಸ್ನೇಹಿ ಯೋಜನೆಯಾಗಿದೆ. ಭಕ್ತರಿಗೆ ಈ ಯೋಜನೆಯಲ್ಲಿ ವಿವಿಧ ಆಯ್ಕೆಗಳಿರುವುದು ವಿಶೇಷತೆಯಾಗಿದೆ. ಪಾರಂಪರಿಕ ಕೌಶಲ್ಯದ ಮರು ಸ್ಥಾಪನೆಯ ಉದ್ದೇಶವನ್ನೊಳಗೊಂಡಿದೆ. ಈ ಯೋಜನೆಗೆ ಎಲ್ಲೆಡೆಯಿಂದ ಭಕ್ತರ ಉತ್ಸಾಹದ ಪ್ರತಿಸ್ಪಂದನಗಳು ಬರುತ್ತಿವೆ" ಎಂದು ಬ್ರಹ್ಮಕಲಶೋತ್ಸವ ಸಮಿತಿಯ ಸಂಯೋಜಕರಲ್ಲೊಬ್ಬರಾದ ಡಾ.ವೈ.ವಿ. ಕೃಷ್ಣಮೂರ್ತಿ ನುಡಿದರು.
ಏತಡ್ಕ ಶ್ರೀ ಸದಾಶಿವ ದೇವಸ್ಥಾನದ ಬ್ರಹ್ಮಕಲಶೋತ್ಸವ 25 ಇದರ ಅಂಗವಾಗಿ ಶಿವಾರ್ಪಣಂ ಯೋಜನೆಯ ಕಾರ್ಯಾಗಾರವೊಂದು ಪಡ್ರೆ ಗ್ರಾಮದ ವಾಣೀನಗರದಲ್ಲಿ ನಿನ್ನೆ ನಡೆಯಿತು.
ಬ್ರಹ್ಮ ಕಲಶೋತ್ಸವ ಸಮಿತಿಯ ಪದಾಧಿಕಾರಿಗಳಾದ ಡಾ. ವೈ.ವಿ. ಕೃಷ್ಣ ಮೂರ್ತಿ, ಡಾ.ಪ್ರಕಾಶ ವೈ.ಎಚ್, ಡಾ.ಅನ್ನಪೂರ್ಣೇಶ್ವರಿ, ಗೌರಿ ಕೆ.ಎಸ್. ಹಾಗೂ ಸುಧಾ ಮುರಳಿ ಮಾಣಿತ್ತೋಡಿ ಮುಂತಾದವರು ಸಂಪನ್ಮೂಲ ವ್ಯಕ್ತಿಗಳಾಗಿ ಶಿವಾರ್ಪಣಂ ಯೋಜನೆಯ ಪಂಚಾಕ್ಷರಿ ಜಪಲಿಪಿ ಯಜ್ಞ, ಬಟ್ಟೆ ತುಣುಕಿನಿಂದ ಆಲಂಕಾರಿಕ ಮಾಲೆ ಮಾಡುವುದು, ಮಡಲು ಮೊಡೆದು ಚಪ್ಪರದ ತಟ್ಟಿ ಮಾಡುವುದರ ಬಗ್ಗೆ, ದೇಶೀ ದನದ ಸೆಗಣಿಯ ಬೆರಣಿಯಿಂದ ಶುದ್ಧ ಭಸ್ಮ ತಯಾರಿ, ಉತ್ಸವ ಸಂದರ್ಭ ಬಳಕೆಗಾಗಿ ತರಕಾರಿ ಬೆಳೆಯುವುದು, ಬಟ್ಟೆಯ ಚೀಲ ತಯಾರಿ, ಶ್ರಮದಾನಗಳ ಮಹತ್ವದ ಕುರಿತು ವಿವರ ಪ್ರಾತ್ಯಕ್ಷಿಕೆ ನೀಡಿದರು.
ಈ ಸಂದರ್ಭದಲ್ಲಿ ವಾಣೀನಗರದ ಚೈತನ್ಯ ಕುಟುಂಬ ಶ್ರೀ ಕುತ್ತಾಜೆ, ಜನನೀ ಕುಟುಂಬಶ್ರೀ, ಶ್ರೀ ಲಕ್ಷ್ಮೀ ಕುಟುಂಬಶ್ರೀಯ ಮಾತೆಯರು ಉತ್ಸಾಹದಿಂದ ಪಾಲ್ಗೊಂಡರು ಮತ್ತು ಸಮಿತಿಯವರು ಒದಗಿಸಿದ ತರಕಾರಿ ಗಿಡ ಹಾಗೂ ಸಲಕರಣೆಗಳನ್ನು ಸ್ವೀಕರಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ