ಬಳ್ಳಾರಿ:ಬಳ್ಳಾರಿ ನಗರದ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ ಒಂದು ರೀತಿಯ ಸಂಭ್ರಮದ ವಾತಾವರಣ ಉಂಟಾಗಿತ್ತು, ಕಾರಣ ಇದೆ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿ ರಾಜ್ಯ ಮತ್ತು ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿ ಭಾರತವನ್ನು ಪ್ರತಿನಿಧಿಸಿದ ರಾಷ್ಟ್ರಮಟ್ಟದ ಅಥ್ಲೆಟಿಕ್ ಸುಧೀಕ್ಷಾ ವಿ ಇವರಿಗೆ ದಿನಾಂಕ 20.09.2024 ರಂದು ಸನ್ಮಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.
ವಿದ್ಯಾರ್ಥಿನಿ ಸುಧೀಕ್ಷಾ ವಿ ಈ ಶಾಲೆಯಲ್ಲಿ 6ನೇ ತರಗತಿಯಿಂದ ನಡೆದು ಬಂದ ಹಾದಿಯನ್ನು ಹಾಗೂ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟಕೇರಿದ ಸಾಧನೆಯನ್ನು ಶ್ರೀಮತಿ ಬಸವ ಜ್ಯೋತಿ ಕೆ ಗಣಿತ ಶಿಕ್ಷಕರು ಸ್ಮರಿಸಿದರು. ಈ ಸಂದರ್ಭದಲ್ಲಿ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಸುದೀಕ್ಷಾ ತಾನು ಈ ಮಟ್ಟಕ್ಕೆ ಸಾಧನೆ ಮಾಡಲು ತನ್ನ ತಂದೆ-ತಾಯಿ ಹಾಗೂ ಗುರುಗಳು ಮತ್ತು ಮುಖ್ಯ ಶಿಕ್ಷಕರು ಮುಖ್ಯವಾದ ಕಾರಣ ನಾನು ಈ ಶಾಲೆಯ ವಿದ್ಯಾರ್ಥಿನಿಯಾಗಿ ಇದೇ ಶಾಲೆಯಲ್ಲಿ ಬಂದು ಸನ್ಮಾನವನ್ನು ಸ್ವೀಕರಿಸುತ್ತಿರುವುದು ತುಂಬಾ ಸಂತಸವನ್ನು ತಂದಿದೆ ಎಂದು ನುಡಿದರು.
ನಾನು ನಿಮ್ಮಂತೆ ಇದೇ ಸಾಲಿನಲ್ಲಿ ಆಗ ವಿದ್ಯಾರ್ಥಿಯಾಗಿ ಕುಳಿತು ಕೊಳ್ಳುತ್ತಿದ್ದೆ ಈಗ ರಾಷ್ಟ್ರಮಟ್ಟಕ್ಕೆ ಹೋಗಲು ಹಗಲು ರಾತ್ರಿ ಎನ್ನದೆ ಸತತ ಪರಿಶ್ರಮದಿಂದ ಈ ಸಾಧನೆಯನ್ನು ಮಾಡಲು ಸಾಧ್ಯವಾಯಿತು ಎಂದರು. ಈ ಸಂದರ್ಭದಲ್ಲಿ ಸುಧೀಕ್ಷಾಳ ತಂದೆಗೂ ಸನ್ಮಾನ ಮಾಡಲಾಯಿತು, ಅಂತಿಮವಾಗಿ ಶಾಲೆಯ ಮುಖ್ಯೋಪಾಧ್ಯಾಯರಾದ ಸತ್ಯನಾರಾಯಣ ರವರು ಮಾತನಾಡಿ ನಮ್ಮ ಶಾಲೆ ಶೈಕ್ಷಣಿಕ ಪಾಠ ಬೋಧನೆ ಅಷ್ಟೇ ಅಲ್ಲದೆ ಕ್ರೀಡಾಕೂಟ.
ಸಾಂಸ್ಕೃತಿಕ ಕಲೆಗಳಿಗೂ ಸಹಿತ ಹೆಚ್ಚಿನ ಹೊತ್ತುಕೊಟ್ಟು ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಹೊರ ತರಲು ಸತತ ಶ್ರಮಿಸುತ್ತದೆ ಅದರ ಪರಿಣಾಮವಾಗಿ ಈ ದಿನ ನಿಮ್ಮ ಮುಂದೆ ಸುದೀಕ್ಷಾ ರಾಷ್ಟ್ರಮಟ್ಟದ ಪ್ರತಿಭೆಯಾಗಿ ಹೊರಹೊಮ್ಮಿರುವುದು ಸಾಕ್ಷಿಯಾಗಿದೆ ಹಾಗೂ ನಮ್ಮ ಶಾಲೆಯ ಈ ಪ್ರತಿಭೆ ಒಲಂಪಿಕ್ಸ್ನಲ್ಲಿ ಸಹಿತ ಪದಕ ಗಳಿಸುವಂತಾಗಲಿ ಎಂದು ಆಶಯದ ನುಡಿಯನ್ನು ವ್ಯಕ್ತಪಡಿಸಿದರು. ಈ ಸರಳ ಸಮಾರಂಭಕ್ಕೆ ಶಾಲೆಯ ಎಲ್ಲಾ ಶಿಕ್ಷಕರು. ಎಸ್ ಡಿ ಎಂ ಸಿ ಸದಸ್ಯರು ಮತ್ತು ವಿದ್ಯಾರ್ಥಿಗಳು ಸಾಕ್ಷಿಯಾದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ