ಬಳ್ಳಾರಿ: ಪುರಾಣ ಕಾರ್ಯಕ್ರಮ

Upayuktha
0

ಹಾನಗಲ್ ಕುಮಾರ ಶಿವಯೋಗಿಗಳ 157 ಜಯಂತ್ಯೋತ್ಸವ ಹಾಗೂ ಜಗದ್ಗುರು ಡಾ.ಸಂಗನಬಸವ ಮಹಾಸ್ವಾಮಿಗಳ 86ನೇ ಜಯಂತೋತ್ಸವ




ಬಳ್ಳಾರಿ: 
ಬಳ್ಳಾರಿ ನಗರದ ಕೊಟ್ಟೂರು ಸ್ವಾಮಿ ಮಠದಲ್ಲಿ 10 ದಿನಗಳ ಕಾಲ ಹಮ್ಮಿಕೊಂಡಿರುವ ಹಾನಗಲ್ಲಿನ ಕುಮಾರ ಶಿವಯೋಗಿಗಳ ಜೀವನ ದರ್ಶನದ ಪ್ರವಚನವನ್ನು ಹಮ್ಮಿಕೊಂಡಿದೆ. ಮಠದ ಶ್ರೀಗಳಾದ ಬಸವಲಿಂಗ ಶ್ರೀಗಳ ಸಾನಿಧ್ಯದಲ್ಲಿ ಪ್ರತಿದಿನ ಸಂಜೆ 7 ರಿಂದ 8.30 ರವರೆಗೆ ಹಾನಗಲ್ ಕುಮಾರ ಶಿವಯೋಗಿಗಳ 157 ಜಯಂತ್ಯೋತ್ಸವ ಹಾಗೂ ಜಗದ್ಗುರು ಡಾ.ಸಂಗನಬಸವ ಮಹಾಸ್ವಾಮಿಗಳ 86ನೇ ಜಯಂತೋತ್ಸವದ ಅಂಗವಾಗಿ ಈ ಪ್ರವಚನ (ಪುರಾಣ) ನಡೆಯುತ್ತಿದೆ. ಹತ್ತು ದಿನಗಳ ಕಾರ್ಯಕ್ರಮಕ್ಕೆ ಮಠದಶ್ರಿಗಳು ದೀಪ ಬೆಳಗಿಸಿ ಚಾಲನೆ ನೀಡಿದರು.


ಕುರುಗೋಡಿನ ನಿರಂಜನ ಪ್ರಭುಶ್ರೀಗಳು, ಬೂದುಗುಂಪದ ಶ್ರೀಗಳು, ಸೋಮಸಮುದ್ರ ಸಿದ್ದಲಿಂಗ ಶ್ರೀಗಳು, ಮಸೀದಿಪುರದ ಸಿದ್ದರಾಮನಗೌಡ, ಪತ್ರಕರ್ತ ಎನ್.ವೀರಭದ್ರಗೌಡ ಭಾಗವಹಿಸಿದ್ದರು. ಡೋಣಿಯ ಶಶಿಧರ ಶಾಸ್ತ್ರಿಗಳು ಪ್ರವಚನ ನೀಡುತ್ತಿದ್ದು. ಸಂಗೀತಗಾರರಾಗಿ ಡಿ.ಕಗ್ಗಲ್ಲಿನ ದೊಡ್ಡ ಬಸವ ಗವಾಯಿ, ತಬಲ ವಾದಕರಾಗಿ ತೋಟೇಂದ್ರ ಕರಡಕಲ್ ಅವರು ಪುರಾಣ ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರವಚನ ನೀಡಿದ ಶಶಿಧರ ಶ್ರೀಗಳು ಭಕ್ತಿ, ಕಾಯಕದ ಮಹತ್ವ ತಿಳಿಸಿದರು. 


ನಂತರ ಮಠದ ಶ್ರೀಗಳಾದ ಬಸವಲಿಂಗ ಶ್ರೀಗಳು, ಇಂದಿನ ಯಾಂತ್ರಿಕ ಬದುಕಿನಲ್ಲಿ ಜನತೆ ನೆಮ್ಮದಿಯನ್ನು ಕಳೆದುಕೊಳ್ಳುತ್ತಿದ್ದಾರೆ. ಇಂತಹ ಸಮಯದಲ್ಲಿ ಜನತೆ, ಭಕ್ತ ಸಮೂಹ ಪುರಾಣ ಪ್ರವಚನಗಳಲ್ಲಿ ಭಾಗವಹಿಸಿ ಯಾಂತ್ರಿಕ ಬದುಕಿನಿಂದ ದೂರವಾಗಿ ಶಾಂತಿ ನೆಮ್ಮದಿ ಪಡೆಯಲು ಮುಂದಾಗಿ. ಜೊತೆಗೆ ಬದುಕಿನಲ್ಲಿ ಮತ್ತೊಬ್ಬರಿಗೆ ಸಹಾಯ ಮಾಡುವ ಗುಣ ಬೆಳಸಿಕೊಳ್ಳಬೇಕು. ದುಡಿಮೆಯಲ್ಲಿ ಹಂಚಿಕೊಂಡು ತಿನ್ನುವ ಕೆಲಸ ನಮ್ಮದಾಗಬೇಕು ಎಂದು ಹೇಳಿದರು.


ಪುರಾಣಕ್ಕೆ ಆಗಮಿಸುವ ಭಕ್ತರಿಗೆ ಇಲ್ಲಿನ ಬಸವೇಶ್ವರನಗರ, ತಾಲೂಕಿನ ಶ್ರೀಧರಗಡ್ಡೆ ಮತ್ತು ಸೋಮ ಸಮುದ್ರ ಗ್ರಾಮದಿಂದ ಬಸ್  ವ್ಯವಸ್ಥೆ ಕಲ್ಪಿಸಿದೆ ಜೊತೆಗೆ ಪುರಾಣದ ನಂತರ ಪ್ರಸಾದದ ವ್ಯವಸ್ಥೆ ಸಹ ಮಾಡಲಾಗಿದೆ ಎಂದು ತಿಳಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top