ಬಳ್ಳಾರಿ: ರೈಲ್ವೆ ಬಳಕೆದಾರರ ಸಮಿತಿ ಸದಸ್ಯರಾಗಿ ಸೊಂತ ಗಿರಿಧರ್ ನೇಮಕ

Chandrashekhara Kulamarva
0


ಬಳ್ಳಾರಿ: 
ನೈಋತ್ಯ (ಸೌತ್ ವೆಸ್ಟ್ರನ್) ರೈಲ್ವೇ ವಿಭಾಗದ ರೈಲ್ವೇ ಬಳಕೆದಾರರ ಸಲಹಾ ಸಮಿತಿ ಸದಸ್ಯರನ್ನಾಗಿ ಬಳ್ಳಾರಿಯ ಸೊಂತ ಗಿರಿಧರ್  ಅವರನ್ನು ನೇಮಕ ಮಾಡಲಾಗಿದೆ. ರೈಲ್ವೇ ವಿಭಾಗದ ವಾಣಿಜ್ಯ ವಿಭಾಗದ ವ್ಯವಸ್ಥಾಪಕರು ಈ ನೇಮಕ ಆದೇಶ ನೀಡಿದ್ದು. 16-8 2024 ರಿಂದ ಎರಡು ವರ್ಷಗಳ ಅವಧಿಗೆ ಇದು ಜಾರಿಯಲ್ಲಿರುತ್ತದೆಂದು ಹೇಳಿದ್ದಾರೆ. ಇವರ ನೇಮಕಕ್ಕೆ ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಶಿಪಾರಸ್ಸು ಮಾಡಿತ್ತು.


ತಮ್ಮ ನೇಮಕದ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಸೊಂತ ಗಿರಿಧರ್  ಅವರು. ಪ್ರಧಾನಿ ಮೋದಿ ಅವರ ಆಡಳಿತ ಅವಧಿಯಲ್ಲಿ ದೇಶದಲ್ಲಿ ರೈಲ್ವೇ ವ್ಯವಸ್ಥೆ ಉತ್ತಮವಾಗಿ ಅಭಿವೃದ್ಧಿ ಯಾಗುತ್ತಿದ್ದು ಈ ಭಾಗದ ರೈಲ್ವೇ ಸೌಕರ್ಯ ಮತ್ತು ಗ್ರಾಹಕರ ಸೌಲಭ್ಯಗಳಿಗಾಗಿ ಪ್ರಯತ್ನಿಸಲಿದೆಂದು ಹೇಳಿದ್ದಾರೆ. ಇವರ ನೇಮಕಕ್ಕೆ ಜಿಲ್ಲಾ ವಾಣಿಜ್ಯೋದ್ಯಮ ಸಂಘದ ಪದಾಧಿಕಾರಿಗಳು ಮತ್ತು ಬಳ್ಳಾರಿ ನಗರ ಪ್ರಜೆಗಳು ಹರ್ಷ ವ್ಯಕ್ತಪಡಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
To Top