ಪ್ರತಿಯೊಬ್ಬರೂ ದೈವದತ್ತವಾದ ಪ್ರತಿಭೆಯನ್ನು ಹೊಂದಿರುತ್ತಾರೆ.ಹಾಗೆಯೇ ಪ್ರತಿಯೊಬ್ಬರು ತಮ್ಮದೇ ಆದ ಸಾಮರ್ಥ್ಯವನ್ನು ಕೂಡಾ ಹೊಂದಿರುತ್ತಾರೆ. ಆದರೆ. ಅದನ್ನು ನಮ್ಮ ವ್ಯಕ್ತಿತ್ವದ ಬೆಳವಣಿಗೆಗೆ ತಕ್ಕಂತೆ ಅನ್ವಯಿಸುವುದು ನಮಗೆ ಬಿಟ್ಟಿರುತ್ತದೆ.
ನಮ್ಮ ಸಾಮರ್ಥ್ಯವನ್ನು ವಿಸ್ತರಿಸಿಕೊಳ್ಳದೇ ಇದ್ದರೆ ನಾವು ಶಾಪಗ್ರಸ್ತ ಹನುಮಂತರಾಗಿ ಬಿಡುತ್ತೇವೆ. ಜಾಂಬುವಂತನು ಹನುಮಂತನಿಗೆ ಅವನ ಸಾಮರ್ಥ್ಯದ ಬಗ್ಗೆ ತಿಳಿ ಹೇಳದಿದ್ದರೆ ಬಹುಶಃ ಹನುಮಂತನಿಗೆ ಅವನ ಸಾಮರ್ಥ್ಯದ ಅರಿವು ಆಗುತ್ತಲೇ ಇರಲಿಲ್ಲ. ಅವನು ತನ್ನ ಸಾಮರ್ಥ್ಯವನ್ನು ವಿಸ್ತರಿಸಿ ಕೊಂಡಾಗಲೇ ಅವನಿಗೆ ಲಂಕೆಗೆ ಹಾರಲು ಸಾಧ್ಯವಾಯಿತು. ಬಹುಶಃ ನಾವೆಲ್ಲರೂ ಶಾಪಗ್ರಸ್ತ ಹನುಮಂತ ತರಹ ಆಗಿದ್ದೇವೆ ಮತ್ತು ನಮ್ಮ ಸಾಮರ್ಥ್ಯದ ಅರಿವಿಲ್ಲದೆ ಸಂಕುಚಿತ ಭಾವನೆಯ ಮತ್ತು ಬಾವಿಯೊಳಗಿನ ಕಪ್ಪೆಯಂತೆ ನಮ್ಮ ಮಿತಿಯಲ್ಲಿ ಇರುತ್ತೇವೆ.
ಚಹಾ ಮಾರುವ ವ್ಯಕ್ತಿ ನಮ್ಮ ಪ್ರಧಾನಿ ಆಗಿದ್ದು ಮತ್ತು ಅಮೆರಿಕದ ಶ್ವೇತ ಭವನದ ಮುಂದೆ ಐಸ್ ಕ್ಯಾಂಡಿ ಮಾರಿದ ಬರಾಕ್ ಒಬಾಮಾ ಅಮೆರಿಕದ ಅಧ್ಯಕ್ಷ ನಾಗಿದ್ದು ಈಗ ಇತಿಹಾಸ.
ಬರಾಕ್ ಒಬಾಮಾ ತಮ್ಮ ಜೀವನದಲ್ಲಿ ಸಾಧಿಸಲು ಪ್ರೇರಣೆ ಆಗಿದ್ದು "I Can" ಎಂಬ ಸ್ಪೂರ್ತಿ. ನಾವು ಕೂಡ ನಮ್ಮ ಜೀವನದಲ್ಲಿ "I Can" ಎಂಬ ಸ್ಪೂರ್ತಿಯನ್ನು ಅನ್ವಯಿಸಿಕೊಂಡು ಶಾಪಗ್ರಸ್ತ ಹನುಮಂತ ನಾಗದೇ ನಮ್ಮ ಪರಿಧಿಯನ್ನು ದಾಟಿ ಬೃಹದಾಕಾರವಾಗಿ ಬೆಳೆದು ತೋರಿಸೋಣ.
ಮತ್ತೆ ಭೇಟಿಯಾಗೋಣ.
- ಗಾಯತ್ರಿ ಸುಂಕದ, ಬದಾಮಿ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ
-