ಉಜಿರೆ: ಜೀವನದಲ್ಲಿ ಹೊಂದಾಣಿಕೆ ಗುಣ ಬಹಳ ಮುಖ್ಯವಾಗಿದೆ. ಈಗಿನ ಪೀಳಿಗೆಯಲ್ಲಿ ಹೊಂದಾಣಿಕೆ ಎಂಬುದು ಮರೆಯಾಗಿದೆ ಎಂದು ಉಜಿರೆಯ ರುಡ್ಸೆಟ್ ಸಂಸ್ಥೆಯ ಹಿರಿಯ ಉಪನ್ಯಾಸಕ ಅಬ್ರಹಾಂ ಜೇಮ್ಸ್ ಹೇಳಿದರು.
ಉಜಿರೆಯ ಶ್ರೀ ಧ. ಮಂ. ಸ್ವಾಯತ್ತ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗದ ಐಟಿ ಕ್ಲಬ್ ಆಯೋಜಿಸಿದ್ದ ಅಂತರ್ ತರಗತಿ ಸ್ಪರ್ಧೆ ‘ಇನ್ಫೋತ್ಸವ’ ಉದ್ಘಾಟಿಸಿ ಅವರು ಮಾತನಾಡಿದರು.
“ಸೋಲು ಗೆಲುವು ಜೀವನದಲ್ಲಿ ಸಾಮಾನ್ಯ. ಆದರೆ ಅದನ್ನು ಎದುರಿಸುವ ಸಾಮರ್ಥ್ಯವನ್ನು ನಾವು ಬೆಳೆಸಿಕೊಳ್ಳಬೇಕಿದೆ. ತಮ್ಮ ತಂದೆ ತಾಯಿಯರ ಕಷ್ಟಗಳನ್ನು ಅರಿಯದಂತಹ ಸ್ಥಿತಿಗೆ ಇಂದಿನ ಪೀಳಿಗೆ ತಲುಪಿರುವುದು ಬೇಸರದ ಸಂಗತಿ. ಪರಿಸ್ಥಿತಿ ಅರಿತು, ಹೊಂದಿಕೊಂಡು ಜೀವನದಲ್ಲಿ ಯಶಸ್ಸು ಗಳಿಸಬೇಕು” ಎಂದರು.
“ಎಸ್ ಡಿ ಎಂ ಎಂಬ ಬ್ರಾಂಡ್ ನಲ್ಲಿ ಕಲಿಯುವುದು ನಿಮ್ಮೆಲ್ಲರ ಭಾಗ್ಯ. ಏಕೆಂದರೆ, ಇಲ್ಲಿನ ಶಿಕ್ಷಣ ಹಾಗೂ ಸಂಸ್ಕೃತಿ ಒಬ್ಬ ವಿದ್ಯಾರ್ಥಿಯಲ್ಲಿ ಜೀವನದ ಮೌಲ್ಯವನ್ನು ತುಂಬುವಂತಹ ಕೆಲಸವನ್ನು ಮಾಡುತ್ತದೆ. ಜೀವನಕ್ಕೆ ಅಗತ್ಯವಿರುವುದು ಮೌಲ್ಯಾಧಾರಿತ ಶಿಕ್ಷಣ. ವಿದ್ಯಾರ್ಥಿ ಜೀವನದಲ್ಲಿ ಇದರ ಪ್ರಾಮುಖ್ಯ ಅರಿವಾಗುವುದಿಲ್ಲ. ಒಮ್ಮೆ ಜವಾಬ್ದಾರಿಗಳು ಹೆಗಲೇರಿದಾಗ ಜೀವನ ಪಾಠ ಕಲಿಸುತ್ತದೆ” ಎಂದು ಅವರು ಕಿವಿಮಾತು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಡಾ. ಬಿ. ಎ. ಕುಮಾರ ಹೆಗ್ಡೆ ಮಾತನಾಡಿ, ಕಂಪ್ಯೂಟರ್ ಸೈನ್ಸ್ ವಿಭಾಗವು ಒಂದು ಕ್ರಿಯಾಶೀಲ ವಿಭಾಗವಾಗಿದ್ದು, ಡಿಗ್ರಿ ಮುಗಿದ ಬಳಿಕ ವೃತ್ತಿ ಜಗತ್ತಿಗೆ ಕಾಲಿಡುವ ಸಂದರ್ಭದಲ್ಲಿ ವಿದ್ಯಾರ್ಥಿಗಳು ಹಲವಾರು ಸವಾಲುಗಳನ್ನು ಎದುರಿಸಬೇಕಾಗಿ ಬರುತ್ತದೆ. ಇಂತಹ ಕಾರ್ಯಕ್ರಮಗಳು ನಿಮ್ಮ ಮುಂದಿನ ವೃತ್ತಿ ಜೀವನಕ್ಕೆ ಸಹಾಯಕವಾಗುತ್ತವೆ” ಎಂದರು.
ಕಂಪ್ಯೂಟರ್ ಸೈನ್ಸ್ ವಿಭಾಗ ಮುಖ್ಯಸ್ಥ ಶೈಲೇಶ್ ಕುಮಾರ್, ಸಹಾಯಕ ಪ್ರಾಧ್ಯಾಪಕಿ, ಐಟಿ ಕ್ಲಬ್ ಸಂಯೋಜಕಿ ದಿವ್ಯ ಯಾದವ್, ವಿದ್ಯಾರ್ಥಿ ಪ್ರತಿನಿಧಿ ಸುಹಾಸ್, ಕಾರ್ಯದರ್ಶಿ ಅಂಶಿತಾ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಶ್ರೇಯಾ ಮತ್ತು ತಂಡದವರು ಪ್ರಾರ್ಥಿಸಿದರು. ಕೃಷ್ಣೇಂದು ಸ್ವಾಗತಿಸಿದರು. ಹೇಮಾ ವಂದಿಸಿದರು. ಭವ್ಯಾ ಕಾರ್ಯಕ್ರಮ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ