‘ಅಖಿಲ ಭಾರತ ಥಲ್ ಸೈನಿಕ್ ಕ್ಯಾಂಪ್’ನಲ್ಲಿ ಉಜಿರೆ ಎಸ್‌ಡಿಎಂ ವಿದ್ಯಾರ್ಥಿಯ ಸಾಧನೆ

Upayuktha
0




ಉಜಿರೆ: 
ಉಜಿರೆಯ ಶ್ರೀ ಧ. ಮಂ. ಕಾಲೇಜಿನ ದ್ವಿತೀಯ ಬಿ.ಬಿ.ಎ. ವಿದ್ಯಾರ್ಥಿ, ಎನ್.ಸಿ.ಸಿ. ಭೂದಳದ ಕೆಡೆಟ್ ಕಾರ್ಪೊರಲ್ ಶಿಶಿರ್ ಎಸ್. ಶೆಟ್ಟಿ (Cpl Shishir S. Shetty) ಎನ್.ಸಿ.ಸಿ. ಥಲ್ ಸೈನಿಕ್ ಕ್ಯಾಂಪ್ (All India Thal Sainik Camp 2024)ನಲ್ಲಿ ಭಾಗವಹಿಸಿದ್ದಾರೆ.


ಅಲ್ಲದೆ, ಶಿಬಿರದ ವಿವಿಧ ಸ್ಪರ್ಧೆಗಳಲ್ಲಿ ಕರ್ನಾಟಕ & ಗೋವಾ ನಿರ್ದೇಶನಾಲಯವನ್ನು ಪ್ರತಿನಿಧಿಸಿದ ಶಿಶಿರ್ ಅವರನ್ನೊಳಗೊಂಡ ತಂಡವು ದೆಹಲಿಯಲ್ಲಿ ನಡೆದ ಅಂತಿಮ ಹಂತದ ಶಿಬಿರದಲ್ಲಿ ‘ಮ್ಯಾಪ್ ರೀಡಿಂಗ್’ ಸ್ಪರ್ಧೆಯಲ್ಲಿ ನಾಲ್ಕನೇ ಸ್ಥಾನ ಗಳಿಸಿದೆ.


ಎನ್.ಸಿ.ಸಿ. ಭೂದಳದ ರಾಷ್ಟ್ರಮಟ್ಟದ ಶಿಬಿರ ಇದಾಗಿದ್ದು, ದೇಶದ ಹದಿನೇಳು ಎನ್.ಸಿ.ಸಿ. ನಿರ್ದೇಶನಾಲಯಗಳಿಂದ ಸಾವಿರಕ್ಕೂ ಅಧಿಕ ಕೆಡೆಟ್’ಗಳು ಭಾಗವಹಿಸಿದ್ದರು. ಆರಂಭಿಕ ಹಂತದಲ್ಲಿ ತರಬೇತಿ ಮತ್ತು ಆಯ್ಕೆ ಶಿಬಿರಗಳು ಶಿವಮೊಗ್ಗ, ಎನ್.ಐ.ಟಿ.ಕೆ. ಸುರತ್ಕಲ್ ಮತ್ತು ಮೈಸೂರಿನಲ್ಲಿ ನಡೆದಿದ್ದವು. 


ವಿದ್ಯಾರ್ಥಿಯನ್ನು ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲ ಡಾ. ಬಿ.ಎ. ಕುಮಾರ ಹೆಗ್ಡೆ, ಎನ್ ಸಿ ಸಿ ಭೂದಳದ ಮುಖ್ಯಸ್ಥ ಲೆಫ್ಟಿನೆಂಟ್ ಭಾನುಪ್ರಕಾಶ್ ಬಿ.ಇ. ಹಾಗೂ ಆಫೀಸರ್ ಇನ್ ಚಾರ್ಜ್ ಶೋಭಾ ಅಭಿನಂದಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top