ಶ್ರೀ ಸತ್ಯಾತ್ಮವಾಣಿ– 50: ಪರಮಾತ್ಮನ ಮಹಿಮೆ ಮತ್ತು ಕಾರುಣ್ಯ ಅನಂತ ಮತ್ತು ಅಪಾರ

Upayuktha
0



ಗವಂತನ ದಿವ್ಯವಾದ ಅದ್ಭುತವಾದ ಅಂಚಿತ್ಯವಾದ ಮಹಿಮೆಯನ್ನು ಶ್ರೀಮದ್‌ ಭಾಗವತ ತಿಳಿಸಿಕೊಟ್ಟಿದೆ. ಅವರವರ ಯೋಗ್ಯತೆಗೆ ತಕ್ಕಷ್ಟು ಉಳಿಸಿಕೊಳ್ಳಬಹುದು. ಅನಂತ ಗುಣಪೂರ್ಣನಾದವನು ಭಗವಂತ ಅದನ್ನು ಸ್ವಯಃ ಭಗವಂತನೇ ಭಾಗವತದಲ್ಲಿ ತಿಳಿಸಿಕೊಟ್ಟಿದ್ದಾನೆ. ವೇದ ಪುರಾಣ ಇತಿಹಾಸಗಳಲ್ಲಿ ವರ್ಣನೆ ಕೇಳುತ್ತೇವೆ. ಭಗವಂತ ಏಕೆ ಅನಂತ ಎಂದರೆ ಅವನ ಎಲ್ಲವೂ ಅನಂತವೇ ದೇಶಕಾಲಗಳ ಮಿತಿ ಇಲ್ಲದೇ ಅನಂತ ಅವ್ಯಾಕತ ಆಕಾಶದಲ್ಲಿ ಕೂಡ ತುಂಬಿದ್ದಾನೆ. ಅನಾದಿ ಕಾಲದಿಂದಲೂ ಅನಂತಕಾಲದವರೆಗೂ ಭಗವಂತ ಇದ್ದಾನೆ. ಅನಂತ ಗುಣಪೂರ್ಣನಾದವನು ಭಗವಂತ. ಅನಂತ ಪರಮಾತ್ಮ ಶ್ರೀಮದಾಚಾರ್ಯರು ಭಗವಂತನ ಮಹಿಮೆಯನ್ನು ಗುಣವನ್ನು ತಿಳಿಯಲು ಸಣ್ಣದಾದ ಮಾರ್ಗ ತಿಳಿಸಿಕೊಡುತ್ತಾರೆ. ಸಣ್ಣ ವಸ್ತುವನ್ನು ನಿರ್ಮಾಣ ಮಾಡಬೇಕಾದರೆ ಅದರ ಬಗ್ಗೆ ಸಂಪೂರ್ಣ ಜ್ಞಾನ ಇರಬೇಕು. ಯಾವುದರಿಂದ ವಸ್ತುವಿನ ನಿರ್ಮಾಣ ಆಗುತ್ತದೆ ಎಂಬ ಜ್ಞಾನ ಇರಬೇಕು. ಮನುಷ್ಯನಿಗೆ ಇರುವ ಪದಾರ್ಥಗಳಿಂದ ಉತ್ಪತ್ತಿಯಾಗಿದ್ದೇ ಇರುತ್ತವೆ. ಆದರೆ ಪರಮಾತ್ಮನಿಗೆ ಎಲ್ಲವನ್ನೂ ಆಗಲೇ ಹುಟ್ಟಿಸಿ ತಯಾರು ಮಾಡಿಕೊಂಡೇ ಬಳಸಬೇಕು. ಅನಂತ ಭಗವಂತನ ಗುಣಗಳನ್ನು ಹೊಗಳಿದ ಜ್ಞಾನವನ್ನು ತಿಳಿಯಬೇಕು. ಪರಮಾತ್ಮನಿಗೆ ಎಲ್ಲದರ ಜ್ಞಾನವೂ ಇರುತ್ತದೆ. 



ಒಂದು ವಸ್ತುವನ್ನು ತಿಳಿಯಲು ಪರಿಪೂರ್ಣ ಗುಣಗಳನ್ನು ತಿಳಿಯಬೇಕಾಗುತ್ತದೆ ಆದರೆ ಭಗವಂತನಿಗೆ ಅನಂತ ಪದಾರ್ಥಗಳ ಬಗೆಗೆ ಜ್ಞಾನ ಇದೆ ಅವುಗಳನ್ನು ಉತ್ಪತ್ತಿ ಮಾಡುವ ಮನಸ್ಸು ಕೂಡ ಬೇಕು ಹೀಗೆ ಒಂದೊಂದು ಗುಣಗಳೂ ಅನಂತ ಜ್ಞಾನಾದಿ ಗುಣಗಳಿಂದ ಪರಿಪೂರ್ಣ. ಅವನು ಅನಂತ ಕ್ರಿಯೆಗಳನ್ನು ದೇವರು ತಾನೇ ಮಾಡಿಸುತ್ತಾನೆ. ಒಂದು ಪರಮಾಣು ಇರುವರಲ್ಲಿ ಅನಂತ ಅಚಿಂತ್ಯ ಜೀವಗಳು ಇದ್ದಾರೆ. ಅನಂತಾನಂತ ಜೀವರಿದ್ದಾರೆ ಅವರು ಮಾಡುವ ಕ್ರಿಯೆಗಳು ಅನಂತವಾಗಿವೆ. ಒಬೊಬ್ಬರಲ್ಲೂ ನಡೆಯುವ ಅನಂತ ಗುಣಗಳನ್ನು ಅವನೇ ಮಾಡಿಸುತ್ತಾರೆ. ಕರ್ಮಗಳನ್ನು ಮಾಡಿಸಿ ಫಲಗಳನ್ನು ಕೂಡ ಕೊಡುತ್ತಾನೆ. ಪರಮಾತ್ಮ ಅನಾದಿ ಕಾಲದಿಂದಲೂ ಅನಂತಕಾಲದವರೆಗೆ ಅನಂತ ಕ್ರಿಯೆಗಳಿವೆ ಒಬ್ಬ ಜೀವನೊಳಗೆ ಅನಂತ ಕ್ರಿಯೆಗಳನ್ನು ಪರಮಾತ್ಮ ತಾನೇ ಸ್ವತಃ ನಿಂತು ಮಾಡಿಸುತ್ತಾನೆ.


ಪರಮಾತ್ಮನ ಗುಣಗಳು ಅನಂತ ಅವು ಅಪಾರ ಅನಂತದೇಶ, ಕಾಲದಲ್ಲಿ ವ್ಯಾಪ್ತನಾಗಿದ್ದಾನೆ. ಅನಂತ ಫಲಗಳನ್ನು ಕೊಡುತ್ತಾನೆ. ನಾವು ಮಾಡಿದ ಕರ್ಮಗಳು ನಮಗೆ ಗೊತ್ತಿರುವುದಿಲ್ಲ. ಹಿಂದೆ ಮಾಡಿದ ಕರ್ಮಗಳಿಗೆ ಫಲವನ್ನು ಅನುಭವಿಸುತ್ತಾ ಇರುತ್ತೇವೆ. ಪರಮಾತ್ಮನಿಗೆ ಎಲ್ಲ ಜೀವರ ಕರ್ಮಗಳು ತಿಳಿದಿವೆ ಅವುಗಳ ಫಲವನ್ನು, ಕಾಲಕಾಲಕ್ಕೆ ಅವರವರ ಪುಣ್ಯ ಪಾಪಗಳಿಗೆ ತಕ್ಕ ಫಲವನ್ನೇ ಸರಿಯಾಗಿ ಕೊಟ್ಟು ಅನುಗ್ರಹ ಮಾಡುತ್ತಾನೆ. ಜೀವರು ಮಾಡಿದ ಕರ್ಮಗಳಿಗೆ ಅನ್ನ, ವಸ್ತ್ರ, ನೀರು, ಬೆಳಕು ಪ್ರೀತಿ -ವಿಶ್ವಾಸ, ಅಧಿಕಾರ ನಾನಾವಿಧವಾದ ಸೌಭಾಗ್ಯಗಳನ್ನು ಪರಮಾತ್ಮ ಕಾಲಕಾಲಕ್ಕೆ ಕೊಡುತ್ತಾನೆ. ಅನಂತ ಕರ್ಮಗಳು ಗೊತ್ತು ಅನಂತ ಫಲಗಳನ್ನು ಅಷ್ಟೇ ಕಾರುಣ್ಯದಿಂದ ಯಾರಿಗೆ ಏನು ಕೊಡಬೇಕೆಂದು ಅವನಿಗೆ ತಿಳಿದಿದೆ. ಅದಕ್ಕೆ ಪ್ರೀತಿ ಮತ್ತು ದಯೆಯಿಂದ ಕೊಡುವುದರಿಂದ ನಾವೆಲ್ಲ ಬದುಕಿದ್ದೇವೆ, ಸುಖವಾಗಿದ್ದೇವೆ, ಮೋಕ್ಷವನ್ನು ಹೊಂದುವವರೆಗೂ ಹೊಂದಿದ ಮೇಲೆ ಕೂಡ ಭಗವಂತನ ಕರುಣೆ ಬೇಕು. ಭಗವಂತನನ್ನು ಮಹಿಮೆಯನ್ನು ಮತ್ತು ಕಾರುಣ್ಯದ ಬಗೆಗೆ ನಮಗೆ ಊಹಿಸಲು ಸಾಧ್ಯವಿಲ್ಲ ಎಂದು ತಿಳಿಯುವುದೇ ಅನಂತ ಅವನ ಗುಣಗಳಲ್ಲೆವೂ ಉತ್ತಮ ಕರ್ಮಗಳನ್ನು ಮಾಡಿದ ಮೇಲೆ ಅಚ್ಯುತಾಯ ನಮಃ ಅನಂತಾಯ ನಮಃ ಗೋವಿಂದಾಯ ನಮಃ ಅಂತ ಹೇಳಿ ಶಾಸ್ತ್ರಜ್ಞರು ತಿಳಿಸಿಕೊಟ್ಟಿದ್ದಾರೆ. ನಾವು ಯಾವುದೇ ರೀತಿ ಚ್ಯುತರಾಗದಂತೆ ಕೆಲಸ ಮಾಡಿದ್ದು ನಿನ್ನ ಅನುಗ್ರಹದಿಂದ ಈ ಕರ್ಮಗಳಿಗೆ ನೀನು ಅನಂತವಾದ ಫಲವನ್ನು ಕೊಡಬೇಕು, ಕೊಡುತ್ತೀಯೆ ಎಂದು ಅನಂತ ಎಂಬುದಾಗಿ ನಾನು ವೇದಗಳ, ಶ್ರಾಸ್ತ್ರಗಳ ಮೂಲಕ ತಿಳಿದು ಅಲ್ಲಿನ ಮಂತ್ರಗಳ ಶ್ಲೋಕಗಳ ಪಠಣ ಮಾಡಿದ್ದೇನೆ ಎಲ್ಲ ಗೋ ಶಬ್ದಗಳ ಅರ್ಥತಿಳಿದು ಅನ್ನುವ ಪರಮಾತ್ಮನಾದ ಗೋವಿಂದ ನೀನು ಪರಮಾತ್ಮನಿಗೆ ಸಮರ್ಪಣೆ ಮಾಡಬೇಕು ಎಂದು ಶಾಸ್ತ್ರ ತಿಳಿಸಿದೆ.


ಅಕ್ಷರ ರೂಪ: ಶ್ರೀಮತಿ ಮಾಧುರಿ ದೇಶಪಾಂಡೆ, ಬೆಂಗಳೂರು


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top