ಸುವರ್ಣ ಸಂಭ್ರಮದೊಂದಿಗೆ ಶ್ರೀ ಸತ್ಯಾತ್ಮವಾಣಿ ಅಂಕಣಕ್ಕೆ ತೆರೆ

Upayuktha
0


ನ್ನಡ ಡಿಜಿಟಲ್ ಪತ್ರಿಕೋದ್ಯಮದಲ್ಲಿ ಹೊಸ ಸಂಚಲನ ಮೂಡಿಸಿರುವ ಉಪಯುಕ್ತ ನ್ಯೂಸ್‌ನಲ್ಲಿ ಭಾರತೀಯ ಸನಾತನ ಪರಂಪರೆಯ ಹಿರಿಮೆ ಗರಿಮೆಗಳನ್ನು ಸಾರುವ ಶ್ರೀ ಸತ್ಯಾತ್ಮವಾಣಿ ನಿತ್ಯಾಂಕಣಕ್ಕೆ ಇದೀಗ ಸುವರ್ಣ ಸಂಭ್ರಮ.


ಶ್ರೀ ಜಗದ್ಗುರು ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ ಉತ್ತರಾದಿ ಮಠದ ಪರಮಪೂಜ್ಯ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದರು ಮುಂಬೈ ಮಹಾನಗರದ ಸತ್ಯ ಧ್ಯಾನ ವಿದ್ಯಾಪೀಠದಲ್ಲಿ ಕೈಗೊಂಡಿರುವ 29ನೆಯ ಚಾತುರ್ಮಾಸ್ಯ ಮಹೋತ್ಸವದಲ್ಲಿ ಪ್ರತಿನಿತ್ಯ ನೀಡುತ್ತಿದ್ದ ಅಮೃತೋಪದೇಶದ ಅಕ್ಷರ ರೂಪವನ್ನು ಬರೆಯಲು ಪರಮಾನುಗ್ರಹ ಮಾಡಿದ ಪರಮಪೂಜ್ಯ ಶ್ರೀಪಾದರ ಚರಣಾರವಿಂದಗಳಲ್ಲಿ ಶ್ರದ್ಧಾ ಭಕ್ತಿ ಪೂರ್ವಕ ಅಭಿವಂದನೆಗಳನ್ನು, ಅರ್ಪಿಸುತ್ತೇನೆ.


ಸತತ 50 ದಿನ ನಿರಂತರವಾಗಿ ಸಜ್ಜನ ಓದುಗ ಭಕ್ತರಿಗೆ ಜ್ಞಾನಾಮೃತವನ್ನು ತಮ್ಮ ಉಪಯುಕ್ತ ನ್ಯೂಸ್ ಮುಖಾಂತರ ಉಣಬಡಿಸಿದ ಸಂಪಾದಕರಾದ ಚಂದ್ರಶೇಖರ ಕುಳಮರ್ವರವರ ಸಾರಸ್ವತ ಕೈಂಕರ್ಯಕ್ಕೆ ಹೃತ್ಪೂರ್ವಕ ಧನ್ಯವಾದಗಳು ಅರ್ಪಿಸುತ್ತೇನೆ. ಬರೆಯಲು ಪ್ರೇರೇಪಿಸಿದ ಸನ್ಮಿತ್ರ ಡಾ. ಗುರುರಾಜ ಪೋಶೆಟ್ಟಿಹಳ್ಳಿ ರವರಿಗೆ ಚಿರಋಣಿ.


ಯಥಾಮತಿ ನನಗೆ ತಿಳಿದಷ್ಟು ಅರ್ಥವಾದಷ್ಟು ಬರೆದಿದ್ದೇನೆ. ಹಂಸಕ್ಷೀರ ನ್ಯಾಯದಂತೆ ಓದುಗರು ಸ್ವೀಕರಿಸಿ ಆಶೀರ್ವದಿಸಬೇಕೆಂದು ಕೋರುತ್ತೇನೆ.


ಹರಿವಾಯು ಗುರುಗಳ ಅನುಗ್ರಹದಿಂದ ಸದ್ಯದಲ್ಲೇ ಲೇಖನದ ಸಂಗ್ರಹವನ್ನು ಪುಸ್ತಕದ ರೂಪದಲ್ಲಿ ಪ್ರಕಟಿಸುವ ಉದ್ದೇಶವಿದೆ.


-ಮಾಧುರಿ ದೇಶಪಾಂಡೆ, ಬೆಂಗಳೂರು


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top