ಶ್ರೀ ಸತ್ಯಾತ್ಮವಾಣಿ- 35: ಭಗವಂತನ ಅನುಸಂಧಾನ

Upayuktha
0


ಶ್ರೀ ಕೃಷ್ಣ ಪರಮಾತ್ಮನ ಪರಮ ಭಕ್ತನಾದ ಅರ್ಜುನ, ಶ್ರೀಕೃಷ್ಣನ ದಿವ್ಯಮಯವಾದ ಕರುಣೆಯನ್ನು ವರ್ಣನೆಯನ್ನು ಮಾಡುತ್ತಾನೆ, ಹಿಂದಿನ ಜನ್ಮದ ಈ ಜನ್ಮದ ಗುಣಗಳ ವರ್ಣನೆ ಅನುಸಂಧಾನ ಮಾಡುತ್ತಾ ಹೇಳುತ್ತಾನೆ, ಪರಮಾತ್ಮನ ಗುಣಗಳ ವರ್ಣನೆ ಅನುಸಂಧಾನ ಮಾಡಿದರೆ ಅನುಗ್ರಹ ವಾಗುತ್ತದೆ ಎಂದು ತಿವಿಕ್ರಮ ಪಂಡಿತಾಚಾರ್ಯರು ಹೇಳಿದ್ದಾರೆ. ಶ್ರೀ ಕೃಷ್ಣನ ಹಿಂದಿನ ಅವತಾರದಲ್ಲಿ ವಾಮನನಾಗಿದ್ದ ಪೃಷ್ಣಿಗರ್ಭನಾಗಿದ್ದ, ಅದನ್ನು ಅರ್ಜುನ ನೆನಪು ಮಾಡಿಕೊಳ್ಳುತ್ತಾನೆ, ಬಲಿ ಮಹಾರಾಜನ ಗುಣಗಳನ್ನು ಸ್ಮರಿಸುತ್ತಾನೆ, ಬಲಿ, ಪ್ರಹ್ಲಾದರಾಜರು ಸ್ವಭಾತಃ ಸಜ್ಜನರು ಆದರೆ ಯಾವುದೋ ಒಂದು ಕಾರಣಕ್ಕಾಗಿ ಅಸುರ ಕುಲದಲ್ಲಿ ಹುಟ್ಟಿದರೂ ಪರಮಾತ್ಮನ ಪರಮ ಭಕ್ತರು ಅವರ ಸಾಧನೆ ಮಾಡಿದ ನಂತರ ಅವರ ಯೋಗ್ಯತೆ ತಕ್ಕ ಫಲವನ್ನು ಕೊಡುತ್ತಾನೆ ಯಾರಿಗೂ ಅನ್ಯಾಯ ಮಾಡುವುದಿಲ್ಲ.


ಮಾಡಿದ ಸಾಧನೆಯು ಪಕ್ವವಾಗದೇ ಇದ್ದರೆ ಫಲ ಕೊಡುವುದಿಲ್ಲ. ಮುಂದಿನ ಸಾವರ್ಣಿ ಮನ್ವಂತರದಲ್ಲಿ ಬಲಿ ಚಕ್ರವರ್ತಿ ಇಂದ್ರನಾಗುತ್ತಾನೆ. ಪರಮಾತ್ಮ ಅವರವರ ಯೋಗ್ಯತೆಗೆ ತಕ್ಕಂತೆ ಕೊಡುತ್ತಾನೆ ಫಲ ಕೊಡುತ್ತಾನೆ. ಸಮಯ ಬಂದಾಗ ಸಾಧನೆಗೆ ತಕ್ಕಷ್ಟು ಕೊಟ್ಟೇ ಕೊಡುತ್ತಾನೆ. ಶ್ರೀ ಕೃಷ್ಣನ ಕುರಿತು ಅರ್ಜನ ಯಾಕೆ ಸ್ಮರಣೆ ಮಾಡುತ್ತಾನೆ ಎಂದರೆ ಬಲಿ ಚಕ್ರವರ್ತಿಯಿಂದ ನನಗೆ ಕೊಟ್ಟಿದ್ದೀಯ ಈಗ ವನವಾಸ ಇದ್ದರೂ ನಮಗೆ ಯೋಗ್ಯವಾದುದನ್ನು ಕೊಟ್ಟೆ ಕೊಡುತ್ತೀಯೆ ಎಂಬ ವಿಶ್ವಾಸ ಇದೆ ಎಂದು ಅರ್ಜುನ ಅನುಸಂಧಾನ ಮಾಡುತ್ತಾನೆ. ಜೀವರಲ್ಲಿ ಉತ್ತಮರಲ್ಲಿ ಬ್ರಹ್ಮ ದೇವರು, ವಿಭೂತಿ ರೂಪದ ಚಿಂತನೆ ಭಗವದ್ಗೀತೆ ಮಾತ್ರವಲ್ಲ ಅನೇಕ ಭಾಗವತ ಪುರಾಣಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ಇದೆ. ವಿಭೂತಿ ಎಂದರೆ ಬೆಳಕು ಕೊಡುವ ವಸ್ತುಗಳಲ್ಲಿ ಸೂರ್ಯ ದೊಡ್ಡವ ಅವನಲ್ಲಿ ದೇವರು ವಿಶೇಷ ರೂಪ ಸನ್ನಿಧಾನ ಇರುತ್ತದೆ ಹೀಗೆ ಎಲ್ಲ ಪದಾರ್ಥ, ಗುಂಪಿನಲ್ಲಿ ವಿಶೇಷವಾಗಿ ದೇವರ ಸನ್ನಿಧಾನ ಇಟ್ಟಿರುತ್ತಾನೆ ಅದು ವಿಭೂತಿ ರೂಪದಲ್ಲಿರುತ್ತಾನೆ. ಭಗವಂತ ಬೇರೆ ಬೇರೆ ರೂಪದಲ್ಲಿ ಬೇರೆ ಬೇರೆ ದೇವತೆಗಳಲ್ಲಿ ಇದ್ದು ಅವರಿಂದ ಕೆಲಸ ಮಾಡಿಸಿ ಅವರಿಗೆ ಪ್ರಸಿದ್ಧಿಯನ್ನು ಕೊಡುತ್ತಾನೆ. ನೀನೆ ಒಳ ಹೊರಗೆ ಇದ್ದು ತಾನೆ ಮಾಡಿ ಮಾಡಿಸುತ್ತಾನೆ.


ವೃಷಭನಾಭ ನಾಮಕನಾದ ಪರಮಾತ್ಮ ಪಂಚಮ ಸ್ಕಂದದಲ್ಲಿ ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ ಹಾಘೂ ಸನ್ಯಾಸ ಆಶ್ರಮದಲ್ಲಿ ಹೇಗಿರಬೇಕೆಂದು ಉದಾಹರಣೆಯನ್ನು ಕೊಟ್ಟು ತೋರಿಸುತ್ತಾನೆ. ಸುಮಧ್ವ ವಿಜಯ ಮಹಾಕಾವ್ಯದಲ್ಲಿ ಮಧ್ವಾಚಾರ್ಯರ ಅನೇಕ ಗುಣಗಳ ವರ್ಣನೆ ಇದೆ. ಆದರೆ ಅದು ಸಂಪೂರ್ಣವಾಗಿಲ್ಲ ಭಕ್ತರಿಗೆ ತಿಳಿಯಬಹುದಾದಷ್ಟು ಮಾತ್ರ ಹೇಳಿದ್ದಾನೆ ಎಂದು ಹೇಳುತ್ತಾರೆ.


ಅರ್ಜುನ ಹಿಂದೆ ಬಲಿ ಚಕ್ರವರ್ತಿಯಿಂದ ಇಂದ್ರ ಪದವಿಯನ್ನು ಪುನಃ ಕೊಡಿಸಿದ್ದು ಮಾತ್ರವಲ್ಲದೇ ಭಕ್ತಿಯ ಕಾರಣವನ್ನು ವಿವರಿಸಿ ಹೇಳುತ್ತಾನೆ, ಅವತಾರ ಮಾಡಿದ ಕೆಲವೇ ಕ್ಷಣದಲ್ಲಿಯೇ ಸಂಪೂರ್ಣ ಜಗತ್ತನ್ನು ವ್ಯಾಪಿಸಿದವ ಎಂಬುದನ್ನು ಅಅನ ಅಂಚಿತ್ಯ ಅದ್ಭುತ ಮಹಿಮೆಯವನ್ನು ಅರ್ಜುನ ಪ್ರಾರ್ಥಿಸುತ್ತಾನೆ. ವಿಷ್ಣು ಎಂಬ ಶಬ್ದ ವಾಮನನಿಗೆ ವಿಶೇಷವಾಗಿ ಕರೆಯುತ್ತಾರೆ. ಏಕೆಂದರೆ ವಾಮನ ತನ್ನ ಪಾದದಿಂದ ಜಗತ್ತನ್ನು ವ್ಯಾಪಿಸಿದ ಕಾರಣ ವಿಷ್ಣು ಎಂದು ಹೇಳಿದ್ದಾರೆ. ಜ್ಞಾನ ಬೇಕು ಎಂದು ನೂರಾರು ಜನ ಜ್ಞಾನವಂತರನ್ನು ಭೇಟಿ ಮಾಡಿ ಪಡೆಯಲು ಹೋಗಿ ಬಂದವ ಬೇರೆಯವರಿಗಿಂತ ಜ್ಞಾನಕ್ಕಾಗಿ ಅಲೆದಾಡಿದ ದೇವರು ಪ್ರಪಂಚವನ್ನು ತನ್ನ ಪಾದದಿಂದ ಈಡೀ ಜಗತ್ತನ್ನು ವ್ಯಾಪಿಸಿದ. ಎಲ್ಲ ಜಗತ್ತು ಪರಮಾತ್ಮನ ಕಾಲಿಗೆ ಧೂಳುಅಂಟಿಕೊಂಡಂತೆ ಅಂಟಿಕೊಂಡಿತ್ತು. ಸರ್ವೋತ್ತಮ ವ್ಯಕ್ತಿತ್ವ ಪರಮಾತ್ಮನದು ಎಂದು ಹೇಳುತ್ತಾರೆ.


ತ್ರಿವಿಕ್ರಮನಾಗಿ ಜಗತ್ತನ್ನು ವ್ಯಾಪಿಸಿದಿ ಎಂದು ಪ್ರಾರ್ಥಿಸುತ್ತಾರೆ. ಸಾವಿರಾರು ಪ್ರಾದುರ್ಭಾವ ರೂಪಗಳು ಅನಂತ ರೂಪಗಳಲ್ಲಿ ವ್ಯಾಪಿಸುವ ನಿನ್ನನ್ನು ಹೇಗೆ ಮರೆಯುವುದು ಎಂದು ಅರ್ಜುನನು ಪ್ರಾರ್ಥಿಸುತ್ತಾನೆ. ನಾವು ಕೂಡ ಜೀವನದ ವನವಾಸದಲ್ಲಿ ಸಿಲುಕಿ ಒದ್ದಾಡುತ್ತಿರುವಾಗ ಒಂದು ಬಾರಿ ಮಧ್ವಾಚಾರ್ಯರ ಸ್ಮರಣೆ ಸಾಲದೇ ಎಂದು ಹೇಳುವಂತೆ ಭಗವಂತನ ಸ್ಮರಣೆ ಮಾಡುತ್ತಲೇ ಇರಬೇಕು. ದೊಡ್ಡವರ ಸ್ಮರಣೆ ತಾಪ ಪರಿಹಾರಕ ವಾದುದು ಎಂಬುದನ್ನು ಅರ್ಜುನ ಸ್ಮರಿಸುತ್ತಾನೆ. ಇಂದು ಮನಸ್ಸಿನ ಒಳಗೆ ಹೊರಗೆ ದುಷ್ಟ ಕರ್ಮ ದುಷ್ಟ ವಿಚಾರಗಳು ತುಂಬಿವೆ ಅವೇ ಅಸುರರು ಇವತ್ತಿಗೂ ಇಂತಹ ಅಸುರರ ಸಂಹಾರ ಮಾಡಲು ನಾವು ಕೂಡ ಅರ್ಜುನನಂತೆ ನಾವು ಕೂಡ ಸ್ಮರಣೆ ಮಾಡಬೇಕು. ಅರ್ಜುನ ಪರಮಾತ್ಮನಿಗೆ ಕೇಳುತ್ತಾನೆ, ನಿನಗೆ ಸಿಟ್ಟಿಲ್ಲ, ದ್ವೇಷವಿಲ್ಲ ಅಷ್ಟಿದ್ದರೂ ಕೊಂದಿರುವೆ ಅಧರೂ ಕೊಲ್ಲುತ್ತಿಯೇ, ದೇವರು ಎಂದೂ ಸುಳ್ಳು ಹೇಳುವುದಿಲ್ಲ ಎಂದು ಸತ್ಯಧರ್ಮರು ಹೇಳುತ್ತಾರೆ ಕೃಷ್ಣ ಎಂದಿಗೂ ಸುಳ್ಳು ವಂಚನೆ ಮೋಸ ಮಾಡಿಲ್ಲ.


ಶ್ರೀಕೃಷ್ಣ ಪಾಂಡವರನ್ನೆ ಸಮಾಧಾನ ಮಾಡಲಿಕ್ಕೆ ಬಂದಿರುತ್ತಾನೆ, ದುರ್ಯೋಧನನ ಮೇಲೆ ಸಿಟ್ಟಾಗುತ್ತಾನೆ ಪರಮಾತ್ಮನಿಗೆ ಕ್ರೋಧ ಇಲ್ಲ ಸಂತಾಪ ರೂಪದ ಕ್ರೋಧವಿಲ್ಲ. ಆದರೆ ತಪ್ಪು ಮಾಡಿದವರಿಗೆ ಶಿಕ್ಷೆ ಕೊಡುವ ದೇವರಿಗೆ ಇದೆ ಸಂತಾಪ ಎಂಬ ಕ್ರೋಧ ದೋಷ ಆ ದೋಷ ಪರಮಾತ್ಮನಿಗೆ ಇಲ್ಲ, ಸಂಕೃದ್ಧ ಎಂದರೆ ಒಳ್ಳಯದನ್ನು ಮಾಡುವ ಕ್ರೋಧ ಇದೆ. ಶ್ರೀಮದಾಚಾರ್ಯರು ಪರಮಾತ್ಮನಿಗೆ ಕ್ರೋಧ ಇಲ್ಲ ಎಂದು ಹೇಳುತ್ತಾರೆ, ಪರಮಾತ್ಮನ ಅನುಗ್ರಹ ಇರುವಾಗ ಯಾರೂ ಯಾರೂ ನಮಗೆ ಕಷ್ಟ ಕೊಡಲು ಸಾಧ್ಯವಿಲ್ಲ, ಬ್ರಹ್ಮರುದ್ರಾದಿಗಳೇ ನಿನ್ನ ಸೇವೆ ಮಾಡುತ್ತಾ ನಿಂತಿರುತ್ತಾರೆ. ನಿರಂತರ ಸೇವೆ ಮಾಡಿದ ಬ್ರಹ್ಮದೇವರೇ ಇನ್ನು ಹೆಚ್ಚಿನ ಸೇವೆ ಮಾಡಲು ಉತ್ಸುಕರಾಗಿರುತ್ತಾರೆ. ಬಾಲ ಆಗಿದ್ದರೂ ಮಹಾಬಲ ಹಿಂದೆ ಯಾರೂ ಮಾಡಿಲ್ಲ ಮುಂದೂ ಮಾಡಲು ಆಗುವುದಿಲ್ಲ ಎಂಧು ಅರ್ಜುನ ವರ್ಣನೆ ಮಾಡುತ್ತಾನೆ. ನೀನು ಇರುವಾಗ ಯಾವ ಚಿಂತೆ ಇಲ್ಲ ಎಂದು ಸುಖವಾಗಿ ಇರುತ್ತೇವೆ ಎಂದು ಹೇಳುತ್ತಾನೆ.


ಅಕ್ಷರ ರೂಪ: ಶ್ರೀಮತಿ ಮಾಧುರಿ ದೇಶಪಾಂಡೆ, ಬೆಂಗಳೂರು


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top