ಶಿವಮೊಗ್ಗ : ಸೆ.15: ವಿಶ್ವವಿಖ್ಯಾತ ತಬಲ ವಾದಕರಾದ ಉಸ್ತಾದ್ ಫಜಲ್ ಖುರೇಷಿ ಶಿವಮೊಗ್ಗಕ್ಕೆ

Upayuktha
0


ಶಿವಮೊಗ್ಗ :
ವಿಶ್ವವಿಖ್ಯಾತ ತಬಲವಾದಕರಾದ ಉಸ್ತಾದ್ ಅಲ್ಲಾರಖಾ ಖಾನ್ ರವರ ಹೆಮ್ಮೆಯ ಮಗನಾದ ಹಾಗೂ ವಿಶ್ವವಿಖ್ಯಾತ ಉಸ್ತಾದ್ ಝಾಕಿರ್ ಹುಸೈನ್ ರವರ ಪ್ರೀತಿಯ ತಮ್ಮನಾದ ಉಸ್ತಾದ್ ಫಜಲ್ ಖುರೇಷಿಯವರು ಇದೇ ಭಾನುವಾರ ಶಿವಮೊಗ್ಗದಲ್ಲಿ ಬೆಂಗಳೂರಿನ ಸಪ್ತಕ ಸಂಸ್ಥೆ ಅರ್ಪಿಸುವ ಸ್ವರ - ಲಯ - ವಿನ್ಯಾಸ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ.


ದೇಶದಾದ್ಯಂತ ಹಿಂದುಸ್ತಾನಿ ಸಂಗೀತವನ್ನು ಪ್ರಚಾರ ಪಡಿಸುತ್ತಿರುವ ಬೆಂಗಳೂರಿನ ಸಪ್ತಕ ಸಂಸ್ಥೆಯ ಸಂಚಾಲಕರಾದ ಜಿ.ಎಸ್.ಹೆಗಡೆಯವರು ಇದುವರೆಗೂ ಸುಮಾರು 500 ಕ್ಕೂ ಹೆಚ್ಚು ಹಿಂದುಸ್ತಾನಿ ಸಂಗೀತ ಕಚೇರಿಗಳನ್ನು ಉಚಿತವಾಗಿ ಏರ್ಪಡಿಸಿ ಶೋತೃಗಳ ಮನ ಸೆಳೆದಿದ್ದಾರೆ. 


ಸಾಗರದ ಹೆಮ್ಮೆಯ ತಬಲವಾದಕರಾದ ವಿನಾಯಕ್ ಸಾಗರ್ ರವರು ಮುಂಬೈನಲ್ಲಿ ಉಸ್ತಾದ್ ಫಜಲ್ ಖುರೇಷಿಯವರ ಬಳಿ ಸುಮಾರು 8 ವರ್ಷಗಳಿಂದ ತಬಲವನ್ನು ಅಭ್ಯಾಸಮಾಡುತ್ತಿದ್ದಾರೆ.  ಗುರುಗಳ ಮೇಲಿರುವ ಅಪಾರ ಭಕ್ತಿಯಿಂದ ಜೊತೆಗೆ ಅವರನ್ನು ಶಿವಮೊಗ್ಗಕ್ಕೆ ಕರೆಸಬೇಕು ಎಂಬ ಹಂಬಲದಿಂದ ಸಪ್ತಕ ಜಿ.ಎಸ್.ಹೆಗಡೆಯವರ ಸಹಕಾರದೊಂದಿಗೆ ಈ ಕಾರ್ಯಕ್ರಮವನ್ನು ಏರ್ಪಡಿಸಿದ್ದಾರೆ.


ಸಂಗೀತ ಶೋತೃಗಳಿಗೆ ಸಂಗೀತವನ್ನು ಆಸ್ವಾದಿಸಲು ಇದೊಂದು ಒಳ್ಳೆಯ ಅವಕಾಶ. ಕಾರ್ಯಕ್ರಮಕ್ಕೆ ಪ್ರವೇಶವು ಉಚಿತವಾಗಿದ್ದು ಇಂತಹ ದಿಗ್ಗಜರ ಕಾರ್ಯಕ್ರಮವನ್ನು ಕೇಳಿ ಮನದುಂಬಿಸಿಕೊಳ್ಳಲು ಇದೇ ಸೆಪ್ಟೆಂಬರ್ 15 ರ ಭಾನುವಾರ ಸಂಜೆ 05:30 ಕ್ಕೆ ಶಿವಮೊಗ್ಗದ ಸುವರ್ಣ ಸಂಸ್ಕೃತಿ ಭವನಕ್ಕೆ ಸಂಗೀತ ಶೋತೃಗಳು ಹಾಗೂ ಸಾರ್ವಜನಿಕರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಪ್ರಕಟಣೆಯಲ್ಲಿ ಕೋರಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಪ್ತಕದ ಜಿ.ಎಸ್.ಹೆಗಡೆ 7019434992 ಹಾಗೂ ವಿನಾಯಕ್ ಸಾಗರ್ 8277009354 ರವರನ್ನು ಸಂಪರ್ಕಿಸಲು ಕೋರಲಾಗಿದೆ.                                                                                                                                                                                                                                                      ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter                                                                                                                                                        

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top