ಸೈಬರ್ ಅಪರಾಧ; ತ್ವರಿತ ಮಾಹಿತಿ ನೀಡಿ

Upayuktha
0

ಸೈಬರ್ ಜಾಗೃತಿ ಕಾರ್ಯಕ್ರಮದಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್



ಬೆಂಗಳೂರು: ಸೈಬರ್ ಅಪರಾಧ ನಡೆದಾಗ ತ್ವರಿತವಾಗಿ ದೂರು ನೀಡಿದಷ್ಟೂ ಪ್ರಕರಣಗಳನ್ನು ಪತ್ತೆ ಹಚ್ಚಲು ಅನುಕೂಲವಾಗುತ್ತದೆ  ಎಂದು ನಗರದ ಪೊಲೀಸ್ ಆಯುಕ್ತ ಬಿ. ದಯಾನಂದ್ ಹೇಳಿದರು. 


ಬೆಂಗಳೂರು ಆಕಾಶವಾಣಿ ವತಿಯಿಂದ, ಮೀಡಿಯಾ ಅಲೂಮ್ನಿ ಅಸೋಸಿಯೇಷನ್ ಆಫ್ ಮಂಗಳಗಂಗೋತ್ರಿ (ಮಾಮ್), ಶಾರದಾ ವಿಕಾಸ ಟ್ರಸ್ಟ್ ಸಹಯೋಗದಲ್ಲಿ ಬಸವನಪುರದ ರಾಕ್‌ವುಡ್ ಗ್ರೀನ್ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಗುರುವಾರ ನಡೆದ ಸೈಬರ್ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.


ಸೈಬರ್ ಅಪರಾಧಗಳಿಗೆ ಹೆಚ್ಚು ಬಲಿಯಾಗುವವರು ಸುಶಿಕ್ಷಿತರೇ ಆಗಿದ್ದಾರೆ. 18ರಿಂದ 30ರ ವಯೋಮಾನದ ಅನೇಕರು ಆನ್ಲೈನ್ ಮೂಲಕ ವಿವಿಧ ಪ್ರಭಾವಗಳಿಗೆ ಒಳಗಾಗುತ್ತಾರೆ. ಆದರೆ ಸಾಮಾನ್ಯ ಮಾರುಕಟ್ಟೆಯಲ್ಲಿ ಖರೀದಿ ಸಂದರ್ಭ ಮಾಡುವ ಎಚ್ಚರಿಕೆಯನ್ನು ಆನ್ಲೈನ್ನಲ್ಲಿ ವ್ಯವಹರಿಸುವಾಗ ವಹಿಸುವುದಿಲ್ಲ. ಸಣ್ಣ ನಿರ್ಲಕ್ಷ್ಯ ದೊಡ್ಡ ಪ್ರಮಾದಕ್ಕೆ ಕಾರಣವಾಗುತ್ತದೆ. ಆನ್ಲೈನ್ ಜಗತ್ತಿನಲ್ಲಿ ಯಾರನ್ನೂ ನಂಬುವಂತಿಲ್ಲ. ಅಪರಾಧ ನಡೆದ ತಕ್ಷಣವೇ 1930 ಸಹಾಯವಾಣಿಗೆ ಕರೆ ಮಾಡಿ ದೂರು ಸಲ್ಲಿಸಬೇಕು ಎಂದು ಅವರು ಸಲಹೆ ಮಾಡಿದರು.


ಬೆಂಗಳೂರು ಆಕಾಶವಾಣಿಯ ಸಹಾಯಕ ನಿರ್ದೇಶಕ, ಕಾರ್ಯಕ್ರಮ ವಿಭಾಗದ ಮುಖ್ಯಸ್ಥ ಡಾ.ಎ.ಎಸ್. ಶಂಕರನಾರಾಯಣ ಮಾತನಾಡಿ, ‘ದೈಹಿಕ ಅಪರಾಧಗಳಂತೆಯೇ ಬೌದ್ಧಿಕ ಅಪರಾಧಗಳೂ ಹೆಚ್ಚಳವಾಗಿವೆ. ಸೈಬರ್ ಅಪರಾಧ ಈ ಪ್ರಕಾರದಲ್ಲಿ ಬೌದ್ಧಿಕ ಅಪರಾಧಗಳ ಸ್ವರೂಪ ಹೊಂದಿದೆ. ಆಕಾಶವಾಣಿಯು ತನ್ನ ‘ಬೈಂಡ್’ ಕಾರ್ಯಕ್ರಮದ  ಅಡಿ ಅನೇಕ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಈ ಹಿಂದೆ ಸೈಬರ್ ಅಪರಾಧಗಳಿಗೆ ಒಳಗಾದ ಸಂತ್ರಸ್ತರು ಮತ್ತು ತನಿಖಾಧಿಕಾರಿಗಳ ಅನುಭವ ಸರಣಿ ‘ಪಾತಾಳ ಗರಡಿ’ ಪ್ರಸಾರ ಮಾಡಿತ್ತು. ಅಂಥ ಜಾಗೃತಿ ಸರಣಿಯ ಮುಂದುವರಿದ ಭಾಗವಾಗಿ ‘ಸೈಬರ್ ಜಾಗೃತಿ’ ಹಮ್ಮಿಕೊಂಡಿದ್ದೇವೆ’ ಎಂದರು.


ಏವಿಯೇಷನ್ ಅಕಾಡೆಮಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಲತಾ ದಿವಾಕರ್ ಮಾತನಾಡಿದರು.


ಶಾರದಾ ವಿಕಾಸ ಟ್ರಸ್ಟ್ ಅಧ್ಯಕ್ಷ, ಆಡಳಿತ ನಿರ್ದೇಶಕ ಡಿ.ವಿ. ವೆಂಕಟಾಚಲಪತಿ ಅಧ್ಯಕ್ಷತೆ ವಹಿಸಿದ್ದರು. ಮಾಮ್ ಅಧ್ಯಕ್ಷ ನವೀನ್ ಅಮ್ಮೆಂಬಳ ಸ್ವಾಗತಿಸಿದರು. ಜೊಹಾನಾ ಕಾರ್ಯಕ್ರಮ ನಿರೂಪಿಸಿದರು. ಆಕಾಶವಾಣಿ ಕಾರ್ಯಕ್ರಮ ನಿರ್ವಾಹಕಿ ಫ್ಲೋರಿನ್ ರೋಜ್ ವಂದಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top