ಕಣಚೂರು ಆಯುರ್ವೇದ ಆಸ್ಪತ್ರೆಯಲ್ಲಿ ಓಣಂ ಆಚರಣೆ

Upayuktha
0


ನಾಟೆಕಲ್ಲು: ಮಂಗಳೂರಿನ ನಾಟೆಕಲ್ಲಿನಲ್ಲಿರುವ ಕಣಚೂರು ಆಯುರ್ವೇದ ಕಾಲೇಜು ಆಸ್ಪತ್ರೆಯಲ್ಲಿ ಸೆ.12ರಂದು ಓಣಂ ಹಬ್ಬದ ಆಚರಣೆ ಮಾಡಲಾಯಿತು.


ಸಮಾರಂಭವನ್ನು ಸಂಸ್ಥೆಯ ನಿರ್ದೇಶಕ ಅಬ್ದುಲ್ ರೆಹಮಾನ್ ರವರು ದೀಪ ಬೆಳಗಿಸಿ ಉದ್ಘಾಟಿಸಿದರು. ಅವರು ಮಾತನಾಡುತ್ತಾ ಎಲ್ಲಾ ಹಬ್ಬಗಳಿಗೂ ಗೌರವ ಕೊಡುವುದಲ್ಲದೇ ಎಲ್ಲ ಜಾತಿ ಮತ ಧರ್ಮದವರೂ ಸೇರಿ ಕಲೆಯುವುದು ಭಾರತೀಯರ ಸಂಸ್ಕಾರವಾಗಿದ್ದು ಅಂತಹವುಗಳಲ್ಲಿ ಕೇರಳದ ವೈಭವದ ಓಣಂ ಹಬ್ಬವೂ ಒಂದಾಗಿದೆ. 


ಅವರು ಮುಂದುವರಿದು ಇತ್ತೀಚೆಗೆ ಭೂಮಿಸ್ಫೋಟಕ್ಕೊಳಗಾದ ವಯನಾಡಿನ ಪರಿಸ್ಥಿತಿಯಾಗಲೀ ಇತರ ನೋವುಗಳಾಗಲೀ ಯಾರಿಗೂ ಬಾರದಿರಲಿ ಎಂಬ ಆಂತರ್ಯದ ಪ್ರಾರ್ಥನೆ ನಮ್ಮದಾಗಿರಲಿ. ನಮ್ಮ ಕಣಚೂರು ಸಂಕಲಿತ ವಿದ್ಯಾಲಯಗಳ ಸಮೂಹದಲ್ಲಿ ಒಂದಾದ ಆಯುರ್ವೇದ ಆಸ್ಪತ್ರೆಯು ಕೂಡಾ ಉತ್ತಮ ಸೇವೆಯನ್ನು ಮಾಡುತ್ತಾ ಬಂದಿದೆ. ಈ ಕೈಂಕರ್ಯದಲ್ಲಿ ಸಿಬ್ಬಂದಿ ವರ್ಗದ್ದೇ ಭೀಮ ಪಾಲು ಎಂದು ಸಕಲರಿಗೂ ಶುಭ ಹಾರೈಸಿದರು.


ಆಸ್ಪತ್ರೆಯ ಮುಖ್ಯ ವೈದ್ಯಕೀಯ ನಿರ್ದೇಶಕ, ಸಲಹೆಗಾರ ಡಾ ಸುರೇಶ ನೆಗಳಗುಳಿಯವರು ಎರಡಲ್ಲ ಒಂದು ಎಂಬ ಪದದ‌ ಹಾಗೆ ಎಲ್ಲರೊಡನೊಂದಾಗುವಂತೆ ಮಾಡುವ ಈ ಓಣಂ ಹಬ್ಬವು ಸಕಲರ ಶ್ರೇಯಸ್ಸಿಗೆ ಕಾರಣವಾಗಲಿ ಎನ್ನುತ್ತಾ ಓಣಂ ಮಹತ್ವ ಸಾರುವ ಸ್ವರಚಿತ ಗಜಲ್ ವಾಚಿಸಿದರು.


ಪ್ರಾಚಾರ್ಯ ಡಾ ವಿದ್ಯಾಪ್ರಭಾ ಮಾತನಾಡಿ, ಉತ್ತಮ ಸ್ಪಂದನವಿರುವ ಸಂಸ್ಥೆಯ ಮುಖ್ಯಸ್ಥರಾದಿ ಯಾಗಿ ಎಲ್ಲಾ ವೈದ್ಯರೂ ಪ್ರಾಮಾಣಿಕವಾಗಿ ದುಡಿದು ಸಂಸ್ಥೆಯ ಹೆಸರನ್ನು ಇನ್ನಷ್ಟು ಎತ್ತರಕ್ಕೇರಿಸುವ ಬಗೆಗೆ ತನಗೆ ಹೆಮ್ಮೆಯಿದೆ. ಸಿಬ್ಬಂದಿ ವರ್ಗದವರ ಉತ್ಸಾಹವೇ ಇದಕ್ಕೆಲ್ಲ ಕಾರಣ ಎಂದರು.


ಅಂದದ ಪೂಕಳದ ಸುತ್ತಲೂ ಓಣಂ ಹಬ್ಬದ ಗೀತೆ ಹಾಗೂ ವೈದ್ಯ ಹಾಗೂ ವೈದ್ಯಕೇತರ ಸಿಬ್ಬಂದಿಗಳಿಂದ ತಿರುವಾದಿರ ನರ್ತನ ಸಹಿತ ವಿನೋದಾವಳಿಗಳು ನಡೆದುವು.


ಬಳಿಕ ಓಣಂ ಹಬ್ಬದ ವಿಶಿಷ್ಠ ವ್ಯಂಜನ ಸಹಿತದ ಭೋಜನ ನಡೆದು ಕಾರ್ಯಕ್ರಮ ಮುಕ್ತಾಯವಾಯಿತು.


ಆಸ್ಪತ್ರೆಯ ಮಖ್ಯ ವೈದ್ಯರಾದ ಡಾ ಜೈನುದ್ದೀನ್, ಡಾ ಸಲೀಮಾ, ಡಾ ಚರಣ್, ಡಾ ಗಾಯತ್ರಿ, ಡಾ ಸೌಮ್ಯಾ ಅಶೋಕ್, ಡಾ ಅತೀರಾ ಡಾ ರಾಜೇಶ್, ಡಾ ಅಂಜಲಿ ಅಶೂರಾ ಮತ್ತಿತರ ಸಿಬ್ಬಂದಿಗಳೂ ಅಭಿಯಂತರ ಶಮೀರ್, ಸಂಪರ್ಕಾಧಿಕಾರಿ ಫೈಜಲ್ ಮತ್ತಿತರರು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top