ಬಳ್ಳಾರಿ: ಬಳ್ಳಾರಿಯ ವಿಭೂತಿಗುಡ್ಡ ಮೈನ್ಸ್ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಎಸ್.ಕೆ ಮೋದಿ ಅವರು ಸಮುದಾಯ ಭವನ ಮತ್ತು ಎಸ್‌ಸಿ ಮಹಿಳೆಯರಿಗೆ ಶೌಚಾಲಯಗಳ ನಿರ್ಮಾಣ, ಧಾರ್ಮಿಕ ಸ್ಥಳಗಳ ನವೀಕರಣ, ಉಚಿತ ಶಿಕ್ಷಣವನ್ನು ಒದಗಿಸುತ್ತಿದ್ದಾರೆ. ಇದರ ಜೊತೆಗೆ, ಶಾಲೆಗಳಿಗೆ ಅಗತ್ಯ ಸಾಮಗ್ರಿಗಳ ದಾನ, ನೇತ್ರ ಶಿಬಿರಗಳ ಆಯೋಜನೆ, ಉಚಿತ ವೈದ್ಯಕೀಯ ನೆರವು ನೀಡುತ್ತಿದ್ದಾರೆ. ವಿಮ್ಸ್ ವೈದ್ಯಕೀಯ ಕಾಲೇಜಿಗೆ ಸ್ಕ್ಯಾನಿಂಗ್ ಯಂತ್ರಗಳ ದಾನ, ಪಂಪ್‌ಗಳನ್ನು ಸ್ಥಾಪಿಸಿದ್ದಾರೆ.
ನೀರಿನ ಟ್ಯಾಂಕ್‌ಗಳ ನಿರ್ಮಾಣ, ಪೊಲೀಸ್ ಇಲಾಖೆಗೆ ಮತ್ತು ನಗರ ನಿಗಮಕ್ಕೆ ವಾಹನಗಳನ್ನು ಒದಗಿಸುವುದು, ಅಕ್ಷಯ ಪಾತ್ರಾ ಫೌಂಡೇಶನ್‌ಗೆ ಅಡುಗೆ ಮನೆಯನ್ನು ನಿರ್ಮಿಸಿ, ಮಧ್ಯಾಹ್ನದ ಊಟ ವಿತರಣೆಗೆ ವಾಹನಗಳನ್ನು ಒದಗಿಸಿದ್ದಾರೆ. ಇವರ ಮಾಲೀಕತ್ವದ ಮಾರುತಿ ಸುಜುಕಿ ಡೀಲರ್‌ಶಿಪ್‌ನಲ್ಲಿ ಹಲವಾರು ಪ್ಲಾಟಿನಂ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಇವರ ಅನನ್ಯ ಸೇವೆಗಳು ಮತ್ತು ಸಮಾಜ ಸೇವೆಗಳನ್ನು ಪರಿಗಣಿಸಿ ಎಸ್.ಕೆ. ಮೋದಿಯವರಿಗೆ ಗೌರವ ಡಾಕ್ಟರೇಟ್ ನೀಡಲಾಗುತ್ತದೆ ಎಂದು ವಿಜಯನಗರ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಪತಿ ಮುನಿರಾಜು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ