ಬಳ್ಳಾರಿ: ಪ್ರತಿವರ್ಷ ಸೆಪ್ಟೆಂಬರ್ 8 ರಂದು ವರ್ಲ್ಡ್ ಫಿಜಿಯೋಥೆರಪಿ ದಿನವನ್ನು ಆಚರಿಸಲಾಗುತ್ತದೆ. ಇದರ ಅಂಗವಾಗಿ ಫಿಜಿಯೋಥೆರಪಿ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಉಚಿತ ಫಿಜಿಯೋಥೆರಪಿ ಶಿಬಿರವನ್ನು ಸೆ 8 ರಂದು ಕೌಲ್ ಬಜಾರ್‌ನ ರೇಡಿಯೋ ಪಾರ್ಕ್ ಬಳಿ ಇರುವ ಕೆಕೆಎನ್ ಫಿಜಿಯೋಥೆರಪಿ ಕ್ಲಿನಿಕಲ್ಲಿ ಆಯೋಜಿಸಲಾಗಿದೆ. ಇದರಲ್ಲಿ ಉಚಿತ ಫಿಜಿಯೋಥೆರಪಿ ಕನ್ಸಲ್ಟೇಶನ್, ಉಚಿತ ಫಿಜಿಯೋಥೆರಪಿ ಚಿಕಿತ್ಸೆ, ಉಚಿತ ಬೋನ್ ಡೆನ್ಸಿಟಿ ಪರೀಕ್ಷೆ, ಬಿಪಿ ಮತ್ತು ಶುಗರ್ ಟೆಸ್ಟ್ ಮಾಡಲಾಗುವುದೆಂದು ಡಾ. ಪ್ರಣತಿ ಫಿಜಿಯೋಥೆರಪಿಸ್ಟ್ ಮತ್ತು ಡಾ. ಪ್ರೀತಿ ಫಿಜಿಯೋಥೆರಪಿಸ್ಟ್ ಅವರು ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಫಿಜಿಯೋಥೆರಪಿಯಿಂದ ವಿವಿಧ ತರಹದ ಉಪಯೋಗಗಳಿವೆ ಕೀಲು, ಎಲುಬು ಮಾಂಸಕಂಡಗಳಿಗೆ ಸಂಬಂಧಪಟ್ಟಿರುವ ಎಂತಹ ನೋವಿಗಾದರೂ ಈ ಚಿಕಿತ್ಸೆಯನ್ನು ನೀಡಬಹುದು. ಮಹಿಳೆಯರು ಗರ್ಭ ಧರಿಸಿದ ನಂತರ, ಹೆರಿಗೆಯಾದ ನಂತರ ಅವರಲ್ಲಿ ಕಂಡುಬರುವ ಬೆನ್ನು ನೋವು, ಇನ್ನೂ ಸಣ್ಣಪುಟ್ಟ ನೋವುಗಳಿಗೂ ನಿರ್ಲಕ್ಷ್ಯ ಮಾಡುವುದರಿಂದ ಸ್ಲಿಪ್ ಡಿಸ್ಕ್ ನರಗಳ ಸಮಸ್ಯೆಗೆ ಗುರಿಯಾಗುತ್ತಾರೆ. ಇಂತಹ ಸಮಸ್ಯೆಗಳಿಂದ ದೂರವಾಗಲು ನಾವು ಮೊದಲೇ ಮಾಹಿತಿಯನ್ನು ಅರಿತು ಮೊದಲೇ ಫಿಜಿಯೋಥೆರಪಿ ಚಿಕಿತ್ಸೆ ಪಡೆಯಬಹುದು.
ನರಕ್ಕೆ ಸಂಬಂಧಪಟ್ಟ ರೋಗಗಳು ಉದಾಹರಣೆಗೆ ಲಕ್ವಾ, ಬೆಲ್ಸ್ ಪ್ಯಾಲಸಿ, ಸಯಾಟಿಕ ಇತ್ಯಾದಿಗಳಿಗೆ ಫಿಜಿಯೋಥೆರಪಿ ಉಪಯೋಗಕಾರಿ ಆಗುತ್ತದೆ ಎಂದರು. ಚಿಕ್ಕ ಮಕ್ಕಳಲ್ಲಿ ಬೆಳವಣಿಗೆಯಲ್ಲಿ ಕುಂಠಿತ, ಬುದ್ಧಿಮಾಂದ್ಯ ಇಂದ ಬಳಲುತ್ತಿರುವವರು ಫಿಜಿಯೋಥೆರಪಿಯಿಂದ ಲಾಭ ಪಡೆಯಬಹುದು ಎಂದರು. ಹೃದಯ ಮತ್ತು ಉಸಿರಾಟಕ್ಕೆ ಸಂಬಂಧಪಟ್ಟ ಸಮಸ್ಯೆಗಳನ್ನು ಪಿಜಿಯೊಥೆರಪಿಯಿಂದ ಬಗೆಹರಿಸ ಬಹುದು, ಯಾವುದೇ ನೋವು ಸಮಸ್ಯೆಗಳು ಇಲ್ಲದೆ ಇರುವವರು ಸಹ ಫಿಜಿಯೋಥೆರಪಿ ಪಡೆಯ ಬಹುದು ಹೇಗಂದರೆ ಭವಿಷ್ಯದಲ್ಲಿ ಸಂಧಿವಾತ, ಆರ್ಥರೈಟಿಸ್, ಸ್ಲಿಪ್‌ಡಿಸ್ಕ್ ಇತ್ಯಾದಿ ರೋಗಗಳನ್ನು ತಡೆಗಟ್ಟಲು ಮುಂಚಿತವಾಗಿ ಜಾಗೃತಗೊಂಡು ಫಿಸಿಯೋಥೆರಪಿಸ್ಟ್ ಅನ್ನು ಸಂಪರ್ಕಿಸಬಹುದು ಎಂದರು.
ಫಿಜಿಯೋಥೆರಪಿಸ್ಟ್ ನಿಮ್ಮ ದೇಹದ ಸಂಚಲನೆ ಮಾಂಸ ಖಂಡಗಳ ಬಲ ಮತ್ತು ಪೋಶ್ಚರ್ ಅನಾಲಿಸಿಸ್ ಪರೀಕ್ಷೆ ಮಾಡಿ ಭವಿಷ್ಯದಲ್ಲಿ ಎಂತಹ ತೊಂದರೆಗಳು ಉಂಟಾಗಬಹುದು ಎಂಬುದನ್ನು ಅರಿತು ನಿಮಗೆ ತಿಳಿಸಿ ಅದನ್ನು ತಡೆಗಟ್ಟುವುದಕ್ಕೆ ಬೇಕಾಗುವಂತಹ ವ್ಯಾಯಾಮ ಪ್ರಕ್ರಿಯೆಗಳನ್ನು ನಿಮಗೆ ಕೊಡುತ್ತಾರೆ. ಕಾರಣ ಸೆಪ್ಟೆಂಬರ್ 8ರಂದು ವರ್ಲ್ಡ್ ಫಿಜಿಯೋಥೆರಪಿ ಡೇ ಅಂಗವಾಗಿ ಕೆಕೆಎನ್ ಫಿಜಿಯೋಥೆರಪಿ ಕ್ಲಿನಿಕ್ ವತಿಯಿಂದ ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 3:00 ವರೆಗೆ ಜನರಿಗಾಗಿ ಉಚಿತ ಫಿಜಿಯೋಥೆರಪಿ ಕ್ಯಾಂಪನ್ನು ನಡೆಸಲಾಗುತ್ತದೆ,
ಇದರ ಸದುಪಯೋಗವನ್ನು ಪಡೆಯಬೇಕೆಂದು, ಇವತ್ತಿನ ಫಿಜಿಯೋಥೆರಪಿ ಕಡೆಗೆ ಒಂದು ಹೆಜ್ಜೆ ಭವಿಷ್ಯದ ಆರೋಗ್ಯಕ್ಕೆ ನಾಂದಿಯಾಗುತ್ತದೆ ಎಂದು ಡಾಕ್ಟರ್ ಪ್ರೀತಿ ಗೊನ್ಸಾಲ್ವಿಸ್, ಡಾಕ್ಟರ್ ಪ್ರಣತಿ ಕಾರ್ತಿಕ್ ಅವರು ತಿಳಿಸಿದರು. ಹೆಚ್ಚಿನ ಮಾಹಿತಿಗಾಗಿ 76187 51489 ಅನ್ನು ಸಂಪರ್ಕಿಸಲು ಕೋರಿದ್ದಾರೆ. ಈ ಸಂದರ್ಭದಲ್ಲಿ ಸಿಬ್ಬಂದಿಗಳಾದ ಮುಜಾಕೀರ್, ಈಶ್ವರ್, ನಾಗರತ್ನಮ್ಮ, ಫಿರ್ದೊಸ್, ವಿಷ್ಣು ಮತ್ತಿತರರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ