ಬೆಂಗಳೂರು:ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್ ವತಿಯಿಂದ ರಾಜಾಜಿನಗರದ ಇ.ಎಸ್.ಐ. ಹಾಸ್ಪಿಟಲ್ ಬಸ್ ನಿಲ್ದಾಣದ ಹತ್ತಿರ ಇರುವ ಶ್ರೀ ನರಸಿಂಹ ಪ್ರವಚನ ಮಂದಿರದಲ್ಲಿ ಸೆಪ್ಟೆಂಬರ್ 10 ರಿಂದ 13ರ ವರೆಗೆ ಧಾರ್ಮಿಕ/ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದು, ಅವುಗಳ ವಿವರಗಳು ಈ ರೀತಿ ಇವೆ :
ಭಜನಾ ಕಾರ್ಯಕ್ರಮ : (ಪ್ರತಿದಿನ ಸಂಜೆ 6 ರಿಂದ 7) ಸೆಪ್ಟೆಂಬರ್ 10 : ಅಂಭ್ರಣಿ ಭಜನಾ ಮಂಡಳಿ, ರಾಜಾಜಿನಗರ, ಸೆಪ್ಟೆಂಬರ್ 11 : ಅಲಕನಂದ ಭಜನಾ ಮಂಡಳಿ, ಬಸವೇಶ್ವರನಗರ, ಸೆಪ್ಟೆಂಬರ್ 12 : ಶ್ರೀ ಲಕ್ಷ್ಮೀ ವೆಂಕಟೇಶ್ವರ ಭಜನಾ ಮಂಡಳಿ, ಮತ್ತಿಕೆರೆ.
ಪ್ರವಚನ ಕಾರ್ಯಕ್ರಮ : ಸೆಪ್ಟೆಂಬರ್ 10, 11 ಮತ್ತು 12 (ಪ್ರತಿದಿನ ಸಂಜೆ 7 ರಿಂದ 8) ಪ್ರವಚನಕಾರರು : ಡಾ|| ಹೆಚ್. ಸತ್ಯನಾರಾಯಣಾಚಾರ್ಯ. ವಿಷಯ : ಶ್ರೀ ಜಗನ್ನಾಥದಾಸರ ವಿರಚಿತ "ಫಲವಿದು ಬಾಳ್ದುದಕೆ"
ಹರಿನಾಮ ಸಂಕೀರ್ತನೆ : ಸೆಪ್ಟೆಂಬರ್ 13, ಶುಕ್ರವಾರ (ಸಂಜೆ 6-30 ರಿಂದ 8-00). "ಹರಿನಾಮ ಸಂಕೀರ್ತನೆ : ಗಾಯನ : ಶ್ರೀಮತಿ ರೂಪಾ ಪ್ರಭಂಜನ, ಹಾರ್ಮೋನಿಯಂ : ಕು|| ಸೃಷ್ಟಿ ದೇಸಾಯಿ, ತಬಲಾ : ಶ್ರೀ ಋತುಪರ್ಣ ದೇಸಾಯಿ.
ಈ ಎಲ್ಲಾ ಕಾರ್ಯಕ್ರಮಗಳಲ್ಲೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಟಿ.ಟಿ.ಡಿ. ಹೆಚ್.ಡಿ.ಪಿ.ಪಿ. ಸಂಚಾಲಕರಾದ ಡಾ|| ಪಿ. ಭುಜಂಗರಾವ್ ವಿನಂತಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ