ಅ.26-27ರಂದು ಚಿತ್ರಾಪುರ ಮಠದಲ್ಲಿ ಕೋಟಿ ಗಾಯತ್ರಿ ಜಪ ಯಜ್ಞ

Upayuktha
0
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾದಿಂದ ಆಯೋಜನೆ



ಮಂಗಳೂರು: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾ ದ.ಕ ಜಿಲ್ಲೆಯ ವತಿಯಿಂದ ತ್ರಿಮತಸ್ಥ ಬ್ರಾಹ್ಮಣ ಸಮಾಜವನ್ನೂ ಒಟ್ಟು ಸೇರಿಸಿ, ಸಮಸ್ತ ಬ್ರಾಹ್ಮಣ ಸಂಘಟನೆಗಳ ಸಹಕಾರದೊಂದಿಗೆ ಶ್ರೀ ಶ್ರೀ ವಿದ್ಯೇಂದ್ರ ಶ್ರೀಪಾದರು ಚಿತ್ರಾಪುರ ಮಠ ಕುಳಾಯಿ, ಇವರ ಮಾರ್ಗದರ್ಶನದೊಂದಿಗೆ ಕೋಟಿ ಗಾಯತ್ರಿ ಜಪ ಯಜ್ಞವನ್ನು ಅಕ್ಟೋಬರ್ ತಿಂಗಳ 26 ಮತ್ತು 27ರಂದು ಚಿತ್ರಾಪುರ ಮಠದಲ್ಲಿ ಆಯೋಜಿಸಲು ಉದ್ದೇಶಿಸಲಾಗಿದೆ.


ಬ್ರಹ್ಮ ತೇಜೋ ಬಲಂ ಬಲಂ ಎಂಬ ವಿಶ್ವಾಮಿತ್ರರ ಮಾತಿನಂತೆ ಬ್ರಾಹ್ಮಣ್ಯದಲ್ಲಿ ಅಡಗಿದ್ದ ಬ್ರಹ್ಮ ತೇಜಸ್ಸು ಪುನಃ ಉದ್ದೀಪನಗೊಂಡು, ಬ್ರಾಹ್ಮಣ್ಯದ ಶ್ರೇಷ್ಟತೆಗಾಗಿ ಅವರವರ ಮನೋಭೀಷ್ಟೆಗಾಗಿ, ಬ್ರಾಹ್ಮಣ ಸಂಘಟನೆಯನ್ನು ಲೋಕಕ್ಕೆ ತೋರಿಸುವ ನಿಟ್ಟಿನಲ್ಲಿ, ಪ್ರಾಕೃತಿಕ ವಿಪ್ಲವಗಳ ರಕ್ಷೆಗಾಗಿ, ಲೋಕ ಕಲ್ಯಾಣಕ್ಕಾಗಿ ಕೋಟಿ ಗಾಯತ್ರಿ ಜಪ ಯತಜ್ಞ ನಡೆಸಲಾಗುತ್ತಿದೆ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಸಂಚಾಲಕರಾದ ಶ್ರೀಧರ ಹೊಳ್ಳ ನುಡಿದರು.


ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಉಪಾಧ್ಯಕ್ಷ ಮಹೇಶ್ ಕಜೆಯವರು ಗಾಯತ್ರಿ ಯಜ್ಞದ ಬಗ್ಗೆ ಮಾಹಿತಿ ನೀಡಿದರು. ಶ್ರೀ ಶ್ರೀ ವಿದ್ಯೇಂದ್ರ ಶ್ರೀಪಾದರು ಸಂಪೂರ್ಣ ಸಹಕಾರ ನೀಡುವುದಾಗಿ ಘೋಷಿಸಿದರು.


ವಿದ್ವಾನ್ ಶ್ರೀಹರಿನಾರಾಯಣ ದಾಸ  ಆಸ್ರಣ್ಣ ಕಟೀಲು ಅವರು ಮಾನವನನ್ನು ಪ್ರಜ್ಞಾಶಕ್ತಿಯ ಪರಾಕಾಷ್ಟೆಗೆ ತಲುಪಿಸುವ ಸಾಧನವೇ ಗಾಯತ್ರಿ ಉಪಾಸಣೆ ಅದು ಮಾನವನ ಆಧ್ಯಾತ್ಮಿಕ ಔನ್ನತ್ಯಕ್ಕೆ ಅಡ್ಡಿ ಆತಂಕವನ್ನುಂಟು ಮಾಡುವ ಜನ್ಮಜನ್ಮಾಂತರಗಳ ದುಷ್ಕೃತ್ಯ ಶೇಷವನ್ನು, ವಿಪರೀತ ತಾಮಸ ಶಕ್ತಿಗಳನ್ನು ಮೆಟ್ಟಿ ನಿಲ್ಲಬಲ್ಲ ಪ್ರಚಂಡ ಸಾತ್ವಿಕ ಶಕ್ತಿಯೂ ಹೌದು ಎಂದರು.


ಸಭೆಯಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯ ಪದಾಧಿಕಾರಿಗಳಾದ ಸೂರ್ಯನಾರಾಯಣ ಕಶೆಕೋಡಿ, ಪೊಳಲಿ ಗಿರಿಪ್ರಕಾಶ್ ತಂತ್ರಿ, ಕೃಷ್ಣ ಭಟ್ ಕದ್ರಿ ಜ್ಯೋತಿಷಿ ಶ್ರೀರಂಗ ಐತಾಳ್ ಕದ್ರಿ, ಸುಬ್ರಮಣ್ಯ ಪ್ರಸಾದ್ ಕೊರಿಯರ್, ಉಮಾ ಸೋಮಯಾಜಿ, ಚೇತನಾ ದತ್ತಾತ್ರೇಯ,  ಕಾತ್ಯಾಯಿನಿ ಸೀತಾರಾಮ್, ಮತ್ತು ತಾಲೂಕು ಪದಾಧಿಕಾರಿಗಳು, ವೇದಮೂರ್ತಿ ಬಪ್ಪನಾಡು ಶ್ರೀಪತಿ ಉಪಾಧ್ಯಾಯ ಕರ್ಗಿ ಶ್ರೀನಿವಾಸ ಆಚಾರ್,  ಸುರೇಶ್ ರಾವ್ ಚಿತ್ರಾಪುರ, ಶೋಭಾ ಚಿತ್ರಾಪುರ ಮೊದಲಾದವರು ಉಪ್ಥಿತರಿದ್ದರು


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top