ದ್ರೌಪದಿ ದೇವಿಯ ಮಹತ್ವ ಅವಳ ಪಾವಿತ್ರ್ಯತೆಯಲ್ಲಿದೆ. ಐದು ಜನ ಪಂಚಕನ್ಯೆಯರಲ್ಲಿ ದ್ರೌಪದಿಯೂ ಒಬ್ಬಳು. ಪಂಚ ಪಾಂಡವರನ್ನು ಮದುವೆ ಆದರೂ ಅವಳು ನಿತ್ಯ ಕನ್ಯೆಯನ್ನಾಗಿ ಪೂಜಿಸಿವುದು ಅವಳ ಸತೀತ್ವ ಹಾಗೂ ಪವಿತ್ರತೆಗೆ. ದ್ರೌಪದಿ ದೇವಿಯ ಭಕ್ತಿ ಮತ್ತು ಅವಳ ಮೇಲೆ ಪರಮಾತ್ಮನ ಅನುಗ್ರಹವನ್ನು ವಸ್ತ್ರಾಪಹರಣದಿಂದ ನೋಡಬಹುದು. ದುರ್ಯೋಧನನ ಕುಯುಕ್ತಿಯಿಂದ ದೂರ್ವಾಸರು ವನವಾಸದಲ್ಲಿ ಪಾಂಡವರ ಆಶ್ರಮಕ್ಕೆ ಬಂದಾಗ ಕೂಡ ಪರಮಾತ್ಮನು ತಂಗಿ ಭಕ್ತೆಯೆಂಬ ಭಾವನೆಯಿಂದ ಬಂದು ರಕ್ಷಣೆ ಮಾಡಿದ್ದು ಅವಳ ಅಪೂರ್ವ ವ್ಯಕ್ತಿತ್ವ ಹಾಗೂ ಅನನ್ಯ ಭಕ್ತಿಯನ್ನು ಪ್ರದರ್ಶಿಸುತ್ತದೆ. ದ್ರೌಪದಿ ದೇವಿಯ ವ್ಯಕ್ತಿತ್ವ ಎಂತದ್ದು ಎಂಬದುನ್ನು ಮಹಾಭಾರತದಲ್ಲಿ ಬರುವ ಒಂದೇ ಒಂದು ಸಂಭಾಷಣೆಯಿಂದ ತಿಳಿಯಬಹು ದಾಗಿದೆ. ದ್ರೌಪದಿ ದೇವಿ ವನವಾಸದಲ್ಲಿರುವಾಗ ಒಮ್ಮೆ ಸತ್ಯಭಾಮೆಯನ್ನು ಶ್ರೀ ಕೃಷ್ಣ ಪರಮಾತ್ಮನು ಕರೆದುಕೊಂಡು ಬಂದಿರುತ್ತಾನೆ, ಆಗ ಅವರಿಬ್ಬರ ನಡುವೆ ನಡೆಯುವ ಸಂವಾದದಲ್ಲಿ ಸತ್ಯಭಾಮೆಯು ದ್ರೌಪದಿ ದೇವಿಯು ಪತಿಯ ಪ್ರೀತಿ ಪಾತ್ರಳಾಗಲು ಏನೆಲ್ಲಾ ಮಾಡಬೇಕು ಎಂಬುದನ್ನು ಹೇಳುತ್ತಾಳೆ, ಈ ಘಟನೆಯಲ್ಲಿ ದ್ರೌಪದಿಯಲ್ಲಿ ಧರ್ಮ ಮಾರ್ಗದಿಂದ ನಡೆಯುವ ಅವಳ ನಿಷ್ಠೆ ಕಾಣುತ್ತದೆ.
ವನವಾಸದಲ್ಲಿ ಜಯದ್ರಥನು ಪಾಂಡವರು ಇಲ್ಲದೇ ಇದ್ದಾಗ ಪಾಂಡವರ ಆಶ್ರಮಕ್ಕೆ ಬಂದಾಗ ದ್ರೌಪದಿ ದೇವಿಯು ಅತಿಥಿ ಸತ್ಕಾರ ಮಾಡಲು ಆಶ್ರಮದ ಒಳಗೆ ಕರೆದಾಗ ಅವಳನ್ನು ಅಪಹರಿಸುವ ಕಾರ್ಯವನ್ನು ಮಾಡುತ್ತಾನೆ. ದ್ರೌಪದಿ ದೇವಿಯ ಧರ್ಮಾಚರಣೆಯ ಉದಾಹರಣೆಯನ್ನು ಕೂಡ ಇದರಿಂದ ನೋಡಬಹುದು.
ಸತಿಯಾದವಳು ಪತಿಗೆ ಪ್ರೇರಕಳಾಗಿ ನಿಲ್ಲಬೇಕು ಅವರ ತಪ್ಪುಗಳನ್ನು ಎತ್ತಿ ತೋರಿಸಿದರೂ ಅವಮಾನ ಮಾಡದೇ ಅವರನ್ನು ಜಯಶಾಲಿಗಳಾಗುವ ಕಾರ್ಯವನ್ನು ಮಾಡಬೇಕು ಎಂಬುದಕ್ಕೆ ದ್ರೌಪದಿ ದೇವಿಯು ವಸ್ತ್ರಾಪಹರಣದ ನಂತರ ತನ್ನ ಮುಡಿಯನ್ನು ಕಟ್ಟದೇ ಕೌರವರ ಅನ್ಯಾಯವನ್ನು ಪ್ರತಿಭಟಿಸಿ, ಪಾಂಡವರಿಗೆ ಅವರು ಕೌರವರಿಂದ ಆದ ಅವಮಾನವನ್ನು ನೆನಪಿಸಿಕೊಂಡು ಬದುಕುವಂತೆ ಮೌನವಾಗಿ ಮಾಡಿದವಳು.
ಮಹಾಭಾರತದಲ್ಲಿ ದ್ರೌಪದಿ ದೇವಿಯಲ್ಲಿ ಶಚಿ ದೇವಿಯ ಅಂಶ ಹೆಚ್ಚಿನದ್ದು ಎಂದು ಹೇಳುತ್ತಾರೆ. ಮಹಾಭಾರತ ಯುದ್ಧಕಾಲದಲ್ಲಿ ಯುದ್ಧದ ಆರಂಭದ ಮೊದಲು ಧನುರ್ಮಾಸ ಕಾಲದಲ್ಲಿ ಮುಂಜಾನೆ ಯುದ್ದಕ್ಕೆ ಮೊದಲು ಪತಿಯರಿಗೆ ಸೈನಿಕರಿಗೆ ಅಡುಗೆ ಮಾಡಿ ಊಟ ಬಡಿಸುವ ದಕ್ಷ ರಾಣಿ ದ್ರೌಪದಿ ದೇವಿಯನ್ನು ಕೆಟ್ಟ ದೃಷ್ಟಿಯಿಂದ ಅವಮಾನ ಮಾಡಿದ ಕಾರಣ ದುರ್ಯೋಧನಾದಿಗಳಿಗೆ ಶಿಕ್ಷೆಯಾಗಿ ರಾಜ್ಯವನ್ನು ಮತ್ತೂ ಪ್ರಾಣವನ್ನು ಕಳೆದುಕೊಳ್ಳುವ ಪ್ರಸಂಗ ಬರುತ್ತದೆ.
ಬೆಂಗಳೂರಿನಲ್ಲಿ ದ್ರೌಪದಿ ದೇವಿಯ ಪೂಜೆಯನ್ನು ಮಾಡುವ ಕರಗವು ಚೈತ್ರ ಮಾಸದಲ್ಲಿ ನಡೆಯುತ್ತದೆ. ಭಾರತದ ಆದ್ಯಂತ ಮತ್ತು ಹೊರ ದೇಶಗಳಲ್ಲಿ ಸೇರಿ 400 ಗುಡಿಗಳು ಇವೆ. ಅವಳನ್ನು ಕಾಳಿಯ ರೂಪವೆಂದು ಕೂಡ ಪೂಜಿಸುತ್ತಾರೆ.
ದ್ರೌಪದಿಯ ಪಾತ್ರದಿಂದ ನಾವು ಕಲಿಯುವ ಬಹಳಷ್ಟು ಗುಣಗಳಿವೆ. ಎಲ್ಲರೊಂದಿಗೂ ಪ್ರೀತಿ ವಿಶ್ವಾಸದೊಂದಿಗೆ ಇರುವುದು, ನಮ್ಮ ಕರ್ತವ್ಯವನ್ನು ತಪ್ಪದೇ ಮಾಡುವುದು ಎಲ್ಲರಲ್ಲೂ ಸಮನಾದ ಸ್ನೇಹವನ್ನು ತೋರುವುದು ಭಾಗವತದಲ್ಲಿ ಹೇಳಿದ ಧರ್ಮಗಳನ್ನು ಚಾಚೂ ತಪ್ಪದೇ ಪಾಲಿಸುವುದು. ಧರ್ಮದ ಮಾರ್ಗಗಳನ್ನು ಉಪದೇಶಿಸುವುದಲ್ಲಿದೇ ಅಳವಡಿಸಿಕೊಂಡು ಹೋಗುವುದನ್ನು ಕಲಿಯಬೇಕು.
ಮಾಧುರಿ ದೇಶಪಾಂಡೆ, ಬೆಂಗಳೂರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ