ಕರ್ನಾಟಕ ಯಕ್ಷಗಾನ ಅಕಾಡೆಮಿ ಸಹಯೋಗ
ಮಂಗಳೂರು: ಅಷ್ಟಮಿ ಪ್ರಯುಕ್ತ ಕುಳಾಯಿಯ ಶ್ರೀವಿಷ್ಣುಮೂರ್ತಿ ದೇವಾಲಯದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಾಯೋಜಿತ ಯಕ್ಷಗಾನ ಬಯಲಾಟ 'ಭೂಮಿಪುತ್ರ ಭೌಮಾ ಸುರ' ವನ್ನು ಸರಯೂ ಬಾಲ ಯಕ್ಷ ವೃಂದ (ರಿ) ಕೋಡಿಕಲ್ ಮಕ್ಕಳ ಮೇಳವು ನಡೆಸಿಕೊಡಲಿದೆ.
ಆ.26ರ ಸಂಜೆ 5.30ಕ್ಕೆ ನಡೆಯುವ ಸಭಾ ಕಾರ್ಯಕ್ರಮವನ್ನು ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕರ್ನಾಟಕ ಯಕ್ಷಗಾನ ಅಕಾಡೆಮಿಯ ರಿಜಿಸ್ಟ್ರಾರ್ ಎನ್. ನಮ್ರತಾ' ಸದಸ್ಯರಾದ ಮೋಹನ್ ಕೊಪ್ಪಲ, ಜಿ. ಎಸ್ ಉಳ್ಳಾಲ್, ಸತೀಶ್ ಅಡಪ, ಸಂಕಬೈಲು, ದೇವಳದ ಅನುವಂಶಿಕ ಮೊಕ್ತೇಸರ ಕೃಷ್ಣ ಹೆಬ್ಬಾರ್, ವಿಷ್ಣುಮೂರ್ತಿ ಯಕ್ಷಗಾನ ಮಂಡಳಿಯ ಸಂಚಾಲಕ ವಾಸುದೇವ ಆಚಾರ್ಯ, ಭಜನಾ ಮಂಡಳಿಯ ಅಧ್ಯಕ್ಷ ಎಂ.ಸದಾಶಿವ, ಸಂಘಟಕ- ಕಲಾವಿದ ಮಧುಕರ ಭಾಗವತ್ ಭಾಗವಹಿಸಲಿದ್ದಾರೆ ಎಂದು ಸರಯೂ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ