ಮಂಗಳೂರು: ಪಾಣೆಮಂಗಳೂರು ಸಮೀಪದ ನಾಯಿಲ ನರಿಕೊಂಬು ಗ್ರಾಮದ ಓಂ ಶ್ರೀ ಗೆಳೆಯರ ಬಳಗದ ಆಶ್ರಯದಲ್ಲಿ ಕೆಸರ್‌ದ ಕಂಡೊಡು ಗೊಬ್ಬುದ ಕೂಟ ಕಾರ್ಯಕ್ರಮಇತ್ತೀಚೆಗೆ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಮ್ ಗಣೇಶ್ ಮಾಲಕ ಉಮೇಶ್ ನೆಲ್ಲಿಗುಡ್ಡೆ ವಹಿಸಿದರು. ಮುಖ್ಯ ಅತಿಥಿಗಳಾಗಿ ಪ್ರವೀಣ್ ಸ್ವಾಮೀಜಿ ಮಾರುತಿನಗರ, ಲೋಕಸಭಾ ಸದಸ್ಯ ಕ್ಯಾಪ್ಟನ್ ಬ್ರಿಜೇಶ್ ಚೌಟ, ಮಾಜಿ ಸಚಿವ ರಮಾನಾಥ ರೈ, ದಾಸ್ ಪ್ರಮೋಷನ್ ಆಡಳಿತ ನಿರ್ದೇಶಕ ಅನಿಲ್ ದಾಸ್, ಓಂ ಶ್ರೀ ಗೆಳೆಯರ ಬಳಗದ ಅಧ್ಯಕ್ಷ ಕಿರಣ್ ಅಟ್ಲೂರು, ಜಿಲ್ಲಾ ಪಂ. ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಮಾಜಿ ತಾ.ಪಂ ಸದಸ್ಯ ಸಂಜೀವ ಪೂಜಾರಿ ಮತ್ತು ಪದ್ಮನಾಭ ರೈ, ಗುತ್ತಿಗೆದಾರ ಸಂಘದ ಅಧ್ಯಕ್ಷ ಶೈಲೇಶ್ ಪೂಜಾರಿ, ಗ್ರಾ.ಪಂ ಸದಸ್ಯ ಉಷಾ ರಮಾನಂದ, ನ್ಯಾಯವಾದಿ ಕಾವ್ಯಶ್ರೀ ಉಮೇಶ್, ಹರೀಶ್, ದಿನೇಶ್ ಕುಲಾಲ್, ಸಂಚಾಲಕ ಶುಭಕರ ನಾಲ ಉಪಸ್ಥಿತರಿದ್ದರು.
ಕೆಸರು ಗದ್ದೆಯಲ್ಲಿ ವಾಲಿಬಾಲ್ ಮುಂತಾದ ಆಟೋಟ ಸ್ಫರ್ಧೆಗಳನ್ನು ಆಯೋಜಿಸಲಾಗಿತ್ತು. ಅಲ್ಲದೆ ಕಂಬಳದ ಕೋಣ ಆಕರ್ಷಣೆಯಾಗಿತ್ತು.
ವಿಶೇಷ ಸ್ಪರ್ಧೆಯಾಗಿ ಕೆಸರಿನಲ್ಲಿ ನಡೆದ ಹಗ್ಗ ಜಗ್ಗಾಾಟದ ಪ್ರಥಮ ಬಹುಮಾನವನ್ನು ಜಾನಕಿ ಕನ್‌ಸ್ಟ್ರಕ್ಷನ್ ಶೇಡಿಗುರಿ ಹಾಗೂ ದ್ವಿಿತೀಯ ಬಹುಮಾನವನ್ನು ಮಿತ್ತಮಜಲ್ಸ್ ಫ್ರೆಂಡ್ಸ್ ಪಡೆದುಕೊಂಡಿತು. ಓಂ ಶ್ರೀ ಗೆಳೆಯರ ಬಳಗದ ಅಧ್ಯಕ್ಷ ಕಿರಣ್ ಅಟ್ಲೂರು ಸ್ವಾಾಗತಿಸಿದರು. ಸತೀಶ್ ಹೊಸ್ಮಾಾರು ಕಾರ್ಯಕ್ರಮ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ