ಪತ್ರಕರ್ತರಿಗೆ ಮಣಿಪಾಲ ಅರೋಗ್ಯ ಕಾರ್ಡ್ ವಿತರಣೆ

Chandrashekhara Kulamarva
0

ಮಂಗಳೂರು: ಮಣಿಪಾಲ ಅರೋಗ್ಯ ಕಾರ್ಡ್ ಯೋಜನೆಯ 2024:ನೇ ಸಾಲಿನ ನೋಂದಾವಣೆ ಆರಂಭವಾಗಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಕೆ ಎಂ ಸಿ ಆಸ್ಪತ್ರೆ ಡೀನ್ ಡಾ. ಉನಿಕೃಷ್ಣನ್ ತಿಳಿಸಿದರು.


ಮಂಗಳೂರು ಪತ್ರಿಕಾ ಭವನದಲ್ಲಿ ಪತ್ರಕರ್ತರಿಗೆ ಮಣಿಪಾಲ ಅರೋಗ್ಯ ಕಾರ್ಡ್ ನ್ನು ಮಾಹೆ ಟೀಚಿಂಗ್ ಹಾಸ್ಪಿಟಲ್ ಚೀಫ್ ಒಪರೇಟಿಂಗ್ ಆಫೀಸರ್ ಆನಂದ್ ವೇಣುಗೋಪಾಲ್  ಹಾಗೂ ಉನಿಕೃಷ್ಣ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಅವರಿಗೆ ಹಸ್ತಾಂತರಿಸಿದರು. ಮಾಹೆ ಸಂಸ್ಥಾಪಕ ದಿವ0ಗತ ಡಾ. ಟಿಎಂಎ ಪೈ ಅವರ ಕನಸಿನಂತೆ 2000ರ ಇಸವಿಯಲ್ಲಿ ಈ ಯೋಜನೆ ಆರಂಭಿಸಲಾಗಿದೆ. ಎಲ್ಲರಿಗೂ ಕೈಗೆಟಕುವ ದರದಲ್ಲಿ ಇದು ಲಭ್ಯವಿದೆ ಎಂದು ಆನಂದ್ ವೇಣುಗೋಪಾಲ್ ತಿಳಿಸಿದರು.


ಕೆಎಂಸಿ ಆಸ್ಪತ್ರೆಯ ಅತ್ತಾವರ ವೈದ್ಯಕೀಯ ಅಧೀಕ್ಷಕ ಡಾ. ಚಕ್ರಪಾಣಿ ಮಾತನಾಡಿ, ಈ ಯೋಜನೆಯು ಒಂದು ವರ್ಷ ಮತ್ತು ಎರಡು ವರ್ಷದ ಅವಧಿ ಹೊಂದಿದೆ. ಈ ಅರೋಗ್ಯ ಕಾರ್ಡ್ ಹೊಂದಿದವರು ಕೆಎಂಸಿ ಆಸ್ಪತ್ರೆ ಅತ್ತಾವರ, ಕೆಎಂಸಿ ಆಸ್ಪತ್ರೆ ಜ್ಯೋತಿ, ದುರ್ಗಾ ಸಂಜೀವಿನಿ ಮಣಿಪಾಲ ಆಸ್ಪತ್ರೆ ಕಟೀಲ್, ಕೆಎಂಸಿ ಆಸ್ಪತ್ರೆ ಮಣಿಪಾಲ, ಡಾ ಟಿ ಎಂ ಎ ಪೈ ಉಡುಪಿ ಹಾಗೂ ಕಾರ್ಕಳ, ಗೋವಾ ಗಳಲ್ಲಿ ರಿಯಾಯತಿ ಸೌಲಭ್ಯ ಪಡೆಯಬಹುದು. ಕಾರ್ಡ್ ಹೊಂದಿದವರು ಮಣಿಪಾಲ ಕಾಲೇಜು ಒಫ್ ಡೆಂಟಲ್ ಸೈನ್ಸಸ್ ಮಂಗಳೂರು ಹಾಗೂ ಮಣಿಪಾಲದಲ್ಲಿ ರಿಯಾಯತಿ ಪಡೆದುಕೊಳ್ಳಬಹುದು ಎಂದು ಹೇಳಿದರು.


ದುರ್ಗಾ ಸಂಜೀವಿನಿ ಮಣಿಪಾಲ ಆಸ್ಪತ್ರೆ ಕಟೀಲ್ ಆಸ್ಪತ್ರೆ ಮುಖ್ಯ ಆಡಳಿತ ಅಧಿಕಾರಿ ಡಾ. ಶಿವಾನಂದ ಪ್ರಭು ಮಾತನಾಡಿ ಈ ಕಾರ್ಡ್ ಮೂಲಕ ತಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಕೊಂಡಿದ್ದಾರೆ. ಬಡ ವರ್ಗದ ಜನರಿಗೆ ಈ ಕಾರ್ಡ್ ಅನುಕೂಲಕರ ವಾಗಿದೆ ಎಂದು ಹೇಳಿದರು.


ಕೆಎಂಸಿ ಆಸ್ಪತ್ರೆ ಮಂಗಳೂರು ಚೀಫ್ ಆಪರೇಟಿಂಗ್ ಆಫೀಸರ್ ಮಾತನಾಡಿ, ಒಂದು ವರ್ಷದ ಕಾರ್ಡ್ ನ ಸದಸ್ಯತ್ವ ಒಬ್ಬರಿಗೆ 350 ರೂಪಾಯಿ ಆಗಿದೆ, ಕುಟುಂಬಕ್ಕೆ 700 ರೂಪಾಯಿ,ಎರಡು ವರ್ಷದ ಯೋಜನೆಯಲ್ಲಿ ಒಬ್ಬರಿಗೆ 600 ರೂಪಾಯಿ ಕುಟುಂಬಕ್ಕೆ 950 ರೂಪಾಯಿ ಆಗಿದೆ ಎಂದು ಹೇಳಿದರು.


ಕೆಎಂಸಿ ಮಾರುಕಟ್ಟೆ ವಿಭಾಗದ ಮುಖ್ಯ ವ್ಯವಸ್ಥಾಪಕ ಸಚಿನ್ ಕಾರಂತ್ ಮಾತನಾಡಿ ಕೆಎಂಸಿ ಆಸ್ಪತ್ರೆಗಳಲ್ಲಿ ಕಾರ್ಡ್ ನೋಂದಣಿ ಮಾಡಬಹುದಾಗಿದೆ ಎಂದು ತಿಳಿಸಿದರು.


ಕೆಎಂಸಿ ಆಸ್ಪತ್ರೆ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ರಾಕೇಶ್, ಮಾರ್ಕೆಟಿಂಗ್ ವಿಭಾಗದ ಪ್ರತಿನಿಧಿ ಕಾರ್ತಿಕ್ ನಾಯಕ್, ಹುಬರ್ಟ್ ಉಪಸ್ಥಿತರಿದ್ದರು. ದುರ್ಗಾ ಸಂಜೀವಿನಿ ಮಣಿಪಾಲ ಆಸ್ಪತ್ರೆ ಕಟೀಲ್ ಇದರ ಸಾರ್ವಜನಿಕ ಸಂಪರ್ಕ್ ಅಧಿಕಾರಿ ನಿತೇಶ್ ಶೆಟ್ಟಿ ಎಕ್ಕಾರು ಕಾರ್ಯಕ್ರಮ ನಿರೂಪಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top