ವನಿತಾ ಕಥನ-11 ದ್ರೌಪದಿ ದೇವಿ-1

Upayuktha
0



ದ್ರೌಪದಿ ದೇವಿಯ ಪಾತ್ರ ಮಹಾಭಾರತದ ಸಂಪೂರ್ಣ ಕಥೆಯಲ್ಲಿ ಮಹತ್ವದ ಪಾತ್ರ. ದ್ರೌಪದಿಯನ್ನು ದ್ರುಪದ ರಾಜನ ಕುವರಿಯಾದರಿಂದ ದ್ರೌಪದಿಯಂದು ಪಾಂಚಾಲ ದೇಶದ ರಾಜಕುಮಾರಿಯಾದ್ದರಿಂದ ಪಾಂಚಾಲಿ ಎಂದು, ಯಜ್ಞದ ಕುಂಡದಿಂದ ಬಂದವಳಾದ್ದರಿಂದ ಯಜ್ಞಸೇನಿ ಎಂಬ ಹೆಸರಿನಿಂದ ಬಂದವಳು. ನೋಡಲು ಕೃಷ್ಣ ವರ್ಣದವಳಾದ್ದರಿಂದ ಕೃಷ್ಣಾ  ಎಂದು ಕೂಡ ಕರೆಯಲ್ಪಟ್ಟವಳು. ನೇರವಾಗಿ ಯಜ್ಞ ಕುಂಡದಿಂದ ಬಂದವಳಾದ್ದರಿಂದ ಅವಳನ್ನು ಅಯೋನಿಜಾ ಎಂದು ಕೂಡ ಕರೆಯುತ್ತಾರೆ.



ದ್ರುಪದ ರಾಜನಿಗೆ ದ್ರೋಣಾಚಾರ್ಯರಿಂದ ಅರ್ಜುನನ ಮೂಲಕ ಅವಮಾನವಾದ ನಂತರ ದ್ರುಪದ ರಾಜನು ಹೋಮವನ್ನು ಮಾಡಿ ಅರ್ಜುನನನ್ನು ವರಿಸ ತಕ್ಕ ಮಗಳನ್ನು ಮತ್ತು ದ್ರೋಣರನ್ನು ವಧಿಸುಂತಹ ಧೃಷ್ಟದ್ರುಮ್ನನನ್ನು ಭಗವಂತನಲ್ಲಿ ಬೇಡಿ ಪಡೆದನು. ಮಹಾಭಾರತದ ಆದಿ ಪರ್ವದಲ್ಲಿ ಬರುವಂತೆ ದ್ರೌಪದಿ ದೇವಿಯು ಯಮಧರ್ಮನ ಪತ್ನಿ ಶ್ಯಾಮಲಾ ದೇವಿ, ಇಂದ್ರ ಪತ್ನಿ ಶಚಿ, ವಾಯು ಪತ್ನಿ ಭಾರತಿದೇವಿ, ಅಶ್ವಿನಿ ದೇವತೆಗಳ ಪತ್ನಿಯಾದ ಉಷಾ ಮೊದಲಾದ ದೇವತೆಗಳ ಅಂಶವನ್ನು ಹೊತ್ತು ಬಂದವಳು ಎಂದು ವೇದವ್ಯಾಸರು ಹೇಳುತ್ತಾರೆ. ಹೀಗಾಗಿ ಐದು ಜನ ಪತಿಯರಿದ್ದರೂ ಕೂಡ ಮಹಾನ್ ಸಾಧ್ವಿ ಹಾಗೂ ಅವಳ ಆದರ್ಶಗಳು ಇಂದಿಗೂ ಪ್ರಸ್ತುತ.



ದ್ರೌಪದಿ ದೇವಿಯ ಹಿಂದಿನ ಜನ್ಮದ ಕಥೆಯನ್ನು ಹೇಳುತ್ತಾರೆ. ಒಮ್ಮೆ ದೇವತಾ ಕನ್ಯೆಯೊಬ್ಬಳು ತಪಸ್ಸನ್ನು ಆಚರಿಸಿ ಐದು ಬಾರಿ ಪತಿಯನ್ನು ಬೇಡಿದಾಗ ದೇವರು ಐದು ಬಾರಿಯು ತಥಾಸ್ತು ಎಂದ ಕಾರಣ ಐದು ಕನ್ಯೆಯರ ಸನ್ನಿಧಾನದಿಂದ ದ್ರೌಪದೀ ದೇವಿಯಾಗಿ ಭೂಲೋಕಕ್ಕೆ ಬಂದು ಐದು ಜನ ಪತಿಯರ ಪತ್ನಿಯಾಗುತ್ತಾಳೆ.


ದ್ರೌಪದಿ ದೇವಿಯು ಉತ್ತಮ ಮಗಳು ಆಸೆ ಆಗುವದರ ಜೊತೆಗೆ ತನ್ನ ಸವತಿಯರೊಂದಿಗೆ ಪ್ರೀತಿಯಿಂದ ಇರುವ ಹೆಣ್ಣುಮಗಳು ಕೂಡ ಆಗಿದ್ದಳು. ರಾಜ್ಯವಿದ್ದಾಗ ರಾಜ್ಯಭಾರದ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಳು. ವನವಾಸದಲ್ಲಿ ಕೂಡ ಪತಿಯಂದಿರ ಜೊತೆಯಲ್ಲಿ ಇದ್ದು ಅವರ ಜೊತೆಗೆ ಕಷ್ಟ ಸುಖ ಎರಡರಲ್ಲೂ ಭಾಗಿಯಾದವಳಾಗಿದ್ದಳು.



ಧರ್ಮ ಮಾರ್ಗದಲ್ಲಿ ಹೇಗೆ ನಡೆಯಬೇಕು ಪತಿಯ ಜೊತೆಗೆ ಕಷ್ಟ ದುಖಗಳಲ್ಲಿ ಜೊತೆಯಾಗಿರಬೇಕು ಅವರ ಕಾರ್ಯಗಳಿಗೆ ಪ್ರೇರಕಳಾಗ ಬೇಕು ಎಂಬುದನ್ನು ತೋರಿಸುವ ಪಾತ್ರವೇ ದ್ರೌಪದಿಯ ಪಾತ್ರವಾಗಿದೆ.


ಒಬ್ಬಳು ಉತ್ತಮ ಸ್ತ್ರೀಗೆ ಇರಬೇಕಾದ ಎಲ್ಲ ಗುಣಗಳೂ ದ್ವೌಪದಿ ದೇವಿಯಲ್ಲಿದ್ದವು. ಅವಳು ಪಂಚ ಪಾಂಡವರೆಲ್ಲರ ಜವಾಬ್ದಾರಿಯ ಜೊತೆಗೆ ಅತ್ತೆ ಕುಂತಿಯ ಸೇವೆ, ರಾಜ್ಯ ಭಾರದಲ್ಲಿ ಎಲ್ಲರ ಊಟೋಪಚಾರ ಕಷ್ಟ ಸುಖಗಳು ರಾಜ ಕೋಶದ ಖರ್ಚಿನ  ಲೆಕ್ಕಾಚಾರವನ್ನು, ಯಾವ ಆಳು ಯಾವ ಕೆಲಸ ಮಾಡಿದ್ದಾನೆ ಅವರ ಉಟೋಪಚಾರಗಳು ಆಗಿವೆಯೋ ಇಲ್ಲವೋ ಎಂಬ ಸಮಸ್ತ ಲೆಕ್ಕಾಚಾರವನ್ನು ಇಟ್ಟು ಅವರನ್ನು ಸಮರ್ಥವಾಗಿ ನೋಡಿಕೊಳ್ಳುತ್ತಿದ್ದ ಸಮರ್ಥ ಮಂತ್ರಿಯಾಗಿದ್ದಳು.


ತನ್ನ ಐವರು ಪುತ್ರರನ್ನು ಅಭಿಮನ್ಯವನ್ನು ಪಾಂಡವರ ಎಲ್ಲ ಮಕ್ಕಳಿಗೂ ಸಮನಾದ ಪ್ರೀತಿಯನ್ನು ಹಂಚಿದವಳು. ದ್ರೌಪದಿ. ಕೆಲವರ ಪ್ರಕಾರ ಇಡೀ ಮಹಾಭಾರತಕ್ಕೆ ಕಾರಣ ದ್ರೌಪದಿ ದೇವಿ ದುರ್ಯೋಧನನ್ನು ಅಪಹಾಸ್ಯ ಮಾಡಿದ್ದು ಎಂದು ಹೇಳುತ್ತಾರೆ. ಆದರೆ ಅದು ನಿಮಿತ್ತ ಮಾತ್ರವೇ ಅವಳು ಹಾಸ್ಯ ಮಾಡಿದಾಕ್ಷಣ ಅವಳ ವಸ್ತ್ರಾಪಹರಣ ಮಾಡುವ ದುಷ್ಟತನಕ್ಕೆ ಮಹಾಭಾರತ ನಡೆದಿದ್ದು.


ಮುಂದುವರಿಯುವುದು.........


ಮಾಧುರಿ ದೇಶಪಾಂಡೆ, ಬೆಂಗಳೂರು


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top