ಶ್ರೀ ಸತ್ಯಾತ್ಮವಾಣಿ 15: ಲಕ್ಷ್ಮೀನಾರಾಯಣರ ಅನುಗ್ರಹಕ್ಕೆ ಸದಾಚಾರ ಸದ್ಗುಣಗಳೇ ಕಾರಣ

Upayuktha
0


ಕ್ಷ್ಮೀ ನಾರಾಯಣರ ಅನುಗ್ರಹವೇ ಸಕಲ ಸಮೃದ್ಧಿ ಪಡೆಯಲು ಮೂಲ ಕಾರಣ ಲಕ್ಷ್ಮಿ ನಾರಾಯಣರ ಅನುಗ್ರಹ ದೊರೆಯಲು ಸದ್ಗುಣ ಸದಾಚಾರಗಳು ಕಾರಣ. ಆಗ ನಾವು ಲಕ್ಷ್ಮೀನಾರಾಯಣರನ್ನು ಸ್ವಾಗತ ಮಾಡಿ ಕರೆಯಬೇಕಿಲ್ಲ. ಅವರೇ ಪ್ರೀತಿಯಿಂದ ಬಂದು ಮನೆಯಲ್ಲಿ ಮನದಲ್ಲಿ ರಾಜ್ಯದಲ್ಲಿ ನೆಲೆಸಿ ಸದ್ಗತಿಯನ್ನು ಕೊಡುತ್ತಾರೆ. ನಾವು ಸದಾಚಾರ ಇರದೇ ಇದ್ದರೆ ದುರಾಚಾರಿಗಳಾದರೆ ಸ್ವಾಗತ ಮಾಡಿ ವೈಭವದಿಂದ ಪೂಜೆ ನೈವೇದ್ಯ ವಾದ್ಯಗಳ ಜೊತೆಗೆ ಸಮರ್ಪಿಸಿದರೂ ನಮ್ಮ ಪ್ರಾರ್ಥನೆಯನ್ನು ಸ್ವೀಕರಿಸುವುದಿಲ್ಲ. ಗುಣವಂತರಾಗಿದ್ದಾಗ ನಾವೇ ಬರುತ್ತೇವೆ ಎಂದು ಲಕ್ಷ್ಮಿ ದೇವಿ ಹೇಳುತ್ತಾಳೆ. 


ಏನೆಲ್ಲ ಗುಣಗಳನ್ನು ಪಡೆದುಕೊಂಡಿರಬೇಕೆಂದು ಮಹಾ ಭಾರತದಲ್ಲಿ ಅಲ್ಲಲ್ಲಿ ಹೇಳಿದ್ದು ಒಟ್ಟಾಗಿ ಲಕ್ಷ್ಮಿ ದೇವಿ ಹೇಳುತ್ತಾಳೆ.  ನಂತರ ಈಗ ದೋಷಗಳು ಇರಬಾರದೆಂದು ಎಚ್ಚರ ವಹಿಸಿ ಇರಬೇಕೆಂಬುದನ್ನು ಕೂಡ ಲಕ್ಷ್ಮಿದೇವಿ ಹೇಳುತ್ತಾಳೇ.  ಕಾಮಕ್ರೋಧಗಳನ್ನು ಗೆದ್ದು ನಿಂತಾಗ ಅವರಲ್ಲಿ ಇದ್ದ ನಾನು ಕಾಮಕ್ರೋಧ ಪರವಶರಾದ ನಂತರ ಅಲ್ಲಿಂದ ಕಾಲು ತೆಗೆದೆ ಎನ್ನುತ್ತಾಳೆ, ದೊಡ್ಡ ಶಾಸ್ತ್ರಜ್ಞರು ಜ್ಞಾನಿಗಳು ಚರ್ಚೆ ಮಾಡುವಾಗ ಭಗವಂತನ ಮಹಿಮೆಯನ್ನು ಹೇಳುವಾಗ ಅಜ್ಞಾನಿಯಾದವನು ಅವರ  ಮಾತನ್ನು  ಅಪಹಾಸ ಮಾಡಿದರೆ, ಹಿರಿಯರಿಗೆ ಎಚ್ಚರ ತಪ್ಪಿ ಮಾತನಾಡುವವರ ಕಡೆಯಲ್ಲಿ ನಾನು ಇರುವುದಿಲ್ಲ.  ದೇವತೆಗಳ ಜೊತೆಗೆ ದೇವರ ಜೊತೆಗೆ ಹೋಲಿಕೆ ಮಾಡಿಕೊಂಡು ಅಪಹಾಸ ಮಾಡಿದರೆ ಅದು ಮಹಾನ್‌ ಅಪರಾಧ. ಪ್ರಹ್ಲಾದರ ರಾಜರ ಕತೆಯಲ್ಲಿ ನಾರದರ ಉಪದೇಶವನ್ನು ಪ್ರಹ್ಲಾದರಾಜರು ಕೇಳುತ್ತಿದ್ದರೂ ಎಂಬುದನ್ನು ಅಪಹಾಸ ಮಾಡುತ್ತಿದ್ದವರು ಇಂದು ವಿಜ್ಞಾನದ ಮಾತಿನಿಂದ ಈಗ ನಂಬುತ್ತಾರೆ. ಇಂತಹ ಉದ್ಧಟರ ಬಳಿ ನನ್ನ ವಾಸ ಇರುವುದಿಲ್ಲ.


ಧರ್ಮರಾಜ, ಇಂದ್ರ ದೇವರು ಎತ್ತಾಗಿ ಬಂದ ಕಥೆಗಳು ಭಾಗವತದಲ್ಲಿ ಬರುತ್ತದೆ. ಸಾಮಾನ್ಯ ಎತ್ತುಗಳು ಮಾತನಾಡಲು ಬರಲು ಸಾಧ್ಯವಿಲ್ಲ ಅದರೆ ಮಹನೀಯರು ಕಾಮರೂಪಿಗಳು ಯಾವುದೇ ರೂಪದಲ್ಲಿ ಬರುತ್ತಾರೆ ಎಂಬುದನ್ನು ಅಪಹಾಸ ಮಾಡಬಾರದು ಇಂತಹ ಮೂರ್ಖರ ಬಳಿ ನಾನು ಇರುವುದಿಲ್ಲ. ದೊಡ್ಡವರ ಬಗ್ಗೆ ಅಸೂಯೆ ಅಪಹಾಸ ಮಾಡಬಾರದು. ನಾವು ಕೂಪ ಮಂಡೂಕದಂತೆ ಭಗವಂತನ ಕತೆಗಳ ಬಗ್ಗೆ ಮಹಾತ್ಮರ ಕತೆಗಳನ್ನು ಅಪಹಾಸ ಮಾಡಿದರೆ ಅನರ್ಥವಾಗುತ್ತದೆ. ಯುವಕರಾಗಲಿ ಯುವತಿಯಾಗರಾಗಲಿ ದೊಡ್ಡವರು ಜ್ಞಾನಿಗಳಿಗೆ ಬಂದ ಕೂಡಲೇ ನಮಸ್ಕಾರ ಮಾಡಿ ಅವರ ಸೇವೆಗೆ ಪ್ರವರ್ತರಾಗಬೇಕು ಹಾಗೇ ಮಾಡದೇ ಇದ್ದವರಲ್ಲಿ ವಾಸ ಮಾಡುವುದಿಲ್ಲ ಎಂದು ಲಕ್ಷ್ಮಿದೇವಿ ಹೇಳುತ್ತಾಳೆ.


ತಂದೆ ಇರುವಾಗ ಅವರ ಅಧೀನದಲ್ಲಿ ಮಕ್ಕಳು ಇರಬೇಕು ಹಿರಿಯರ ಸೇವೆಯನ್ನು ಮಾಡಬೇಕು ತಂದೆಯ ಮಾತನ್ನು ಕೇಳಬೇಕು, ಅವರನ್ನು ಧಿಕ್ಕಾರ ಮಾಡಿದರೆ, ಅವರನ್ನು ಹಿಂದೆ ಸರಿಸಿ ತಾನು ಅಧಿಕಾರ ಮಾಡಿದರೆ ಅದು ಹಾಳು ಅಂತಹ ಸ್ಥಳದಲ್ಲಿ ನಾನು ಇರುವುದಿಲ್ಲ ಎಂದು ಹೇಳುತ್ತಾಳೆ. ಇಂದಿನ ಸಾಮಾನ್ಯ ಪ್ರವೃತ್ತಿ ಎಂದರೆ ಹಣ, ಮಾನ ಮರ್ಯಾದೆ ಸಿಕ್ಕರೆ ತನ್ನವರ ಶತ್ರುಗಳ ಜೊತೆಗೆ ಗೆಳೆತನ ಮಾಡಿ ತನ್ನ ರಹಸ್ಯವವರು ಹೇಳುವವರು ಇದ್ದಾರೆ ಅಂತಹ ಜನರಿಗೆ ಏಳಿಗೆ ಇಲ್ಲ, ಅವರನ್ನು ನಾನೇ ನಾಶ ಮಾಡುತ್ತೇನೆ ಎಂದು ಹೇಳುತ್ತಾಳೆ.


ನಮ್ಮವರನ್ನು ಅವಮಾನ ಮಾಡಿ ನಮ್ಮ ಶತ್ರುಗಳ ಜೊತೆಗೆ ಸೇರುವವರನ್ನು ತಿಸ್ಕರಿಸಿ ಅವರಲ್ಲಿ ಲಕ್ಷ್ಮಿ ದೇವಿಯು ವಾಸ ಮಾಡುವುದಿಲ್ಲ. ಏಕೆಂದರೆ ಇಂತಹವರನ್ನು ದೇವರೂ ಕೂಡ ಕ್ಷಮಿಸುವುದಿಲ್ಲ ಎಂದು ಹೇಳುತ್ತಾಳೆ. 


ಲಕ್ಷ್ಮಿದೇವಿಯು, ತಾಯಿ ತನ್ನ ಮಗುವಿಗೆ ತೊಡೆಯ ಮೇಲೆ ಕೂಡಿಸಿಕೊಂಡು ಹೇಳುವಂತೆ ಹೇಳುತ್ತಾಳೆ. ರಾತ್ರಿಕಾಲದಲ್ಲಿ ಗಹಗಹಿಸಿ ನಗಬಾರದು, ಜೋರು ಜೋರಾಗಿ ಕಿರುಚಿ ಮಾತನಡಬಾರದು, ರಾತ್ರಿ ಸಮಯದಲ್ಲಿ ದೇವರ ಧ್ಯಾನ, ಚಿಂತನೆ ಮಾಡಬೇಕು. ಯಾರು  ಕಿರುಚಾಡುತ್ತಾರೋ ಅಂತಹವರಲ್ಲಿ ನಾನು ಇರುವುದಿಲ್ಲ. ಯಜ್ಞದ ಅಗ್ನಿ ಸರಿಯಾಗಿ ಪ್ರಜ್ವಲಿತವಾದಲ್ಲಿ ಮಾತ್ರ ಇರುತ್ತೇನೆ. ತಂದೆ ತಾಯಿಯ ಮಾತು ಕೇಳುವುದಿಲ್ಲವೋ, ಗಂಡನ ಮಾತನ್ನು ಕೇಳದ ಕಡೆಗೆ ನಾನು ಇರುವುದಿಲ್ಲ ಎನ್ನುತ್ತಾಳೆ. ಧರ್ಮ ಮಾರ್ಗದಿಂದ ತಪ್ಪಿ ಅಧರ್ಮ ಮಾರ್ಗದಲ್ಲಿದ್ದರೆ ಅವರನ್ನು ತಿದ್ದಬೇಕು, ಧರ್ಮ ಮಾರ್ಗದಲ್ಲಿ ಇಲ್ಲದ್ದವರನ್ನು ದುರಭಿಮಾನಿಯಾದವರನ್ನು ಕ್ಷಮೆ ಮಾಡುವುದಿಲ್ಲ


ಅತಿಥಿ ಅಭ್ಯಾಗತರ ಸೇವೆ, ತಂದೆ ತಾಯಿಗಳ ಸೇವೆ ಮಾಡುವುದಿಲ್ಲವೋ, ಮಕ್ಕಳ ಲಾಲನೆ ಪೋಷಣೆ ಮಾಡುವುದಿಲ್ಲ. ಮಕ್ಕಳಿಗೆ ಸಂಸ್ಕಾರಗಳನ್ನು ಕೊಡುವುದರ ಕಡೆಗೆ ಗಮನ ಕೊಡದವರ ಬಳಿ ವಾಸಿಸುವುದಿಲ್ಲ ಎನ್ನುತ್ತಾಳೆ ಭಿಕ್ಷುಕರು ಬ್ರಹ್ಮಚಾರಿಗಳು ಯತಿಗಳು ಬಂದಾಗ ಅವರಿಗೆಲ್ಲ ಕೊಟ್ಟು ಉಳಿದ ಅನ್ನವನ್ನು ಸೇವಿಸಬೇಕು ಏಕೆಂದರೆ ಅದು ಪವಿತ್ರವಾದ ಆಹಾರ ದೇವರಿಗೆ ನಿವೇದಿತವಾದ ಅನ್ನವನ್ನು ತಿಂದರೆ ತೇಜಸ್ಸು ಓಜಸ್ಸು ಬರುತ್ತದೆ. 



ಶೌಚ ಬಹಳ ಮುಖ್ಯ ಕಂಡ ಕಂಡಲ್ಲಿ ತಿಂದರೆ ಲಕ್ಷ್ಮಿನಾರಾಯಣರು ಕೆಂಡದಂತಹ ಕೋಪ ಆಗುತ್ತಾರೆ. ಆದರೆ ಶುದ್ದ ಅನ್ನವನ್ನು ಸೇವಿಸಬೇಕು ಇಂದಿನ ಕಾಲದಲ್ಲಿ ಅತಿಥಿ ಅಭ್ಯಾಗತರು ಬರುವುದಿಲ್ಲವೆಂದಾಗ ಅಕ್ಕಿ ಬೇಳೆಗಳನ್ನು ಒಂದು ಮುಷ್ಟಿ ತೆಗೆದಿಟ್ಟು ಅವರಿಗೆ ತಲುಪಿಸಬೇಕು. ಮಡಿಯಿಂದ ಮಾಡಿದ ಸುರಕ್ಷಿತವಾದ ಆಹಾರ ಸೇವನೆ ಮಾಡಬೇಕು, ಮನೆಯಲ್ಲಿರುವ ಸಣ್ಣ ಮಕ್ಕಳಿಗೆ ಮೊದಲು ಆಹಾರ ಕೊಟ್ಟು ಅವರಿಗೆ ನಂತರ ನಾವು ಊಟ ಮಾಡಬೇಕು ಮಕ್ಕಳ ಮನಸ್ಸಿಗೆ ನೋವಾದರೆ ಭಗವಂತ ಶಾಪ ಕೊಡುತ್ತಾನೆ. ಮಕ್ಕಳನ್ನು ಅಳಿಸಬಾರದು, ಮಹಾಭಾರತವು ಸಮತೋಲನ ಕಾಪಡಿಕೊಳ್ಳುವುದನ್ನು ಕಲಿಸುತ್ತದೆ.


ಸಮಾಜದ ಎಲ್ಲರನ್ನು ನೋಡಿಕೊಳ್ಳಬೇಕೆಂಬ ವಿಶಾಲದೃಷ್ಟಿಯಿಂದ ಹೇಳಿದ್ದಾರೆ ಈ ಮಹಾಭಾರತವು ಹೇಳಿದ ಧರ್ಮವನ್ನು ಯಥಾಶಕ್ತಿ ಪಾಲನೆ ಮಾಡಿ ನಾವು ಭಗವಂತನ ಅನುಗ್ರಹಕ್ಕೆ ಪಾತ್ರರಾಗಬೇಕು.


ಅಕ್ಷರ ರೂಪ: ಶ್ರೀಮತಿ ಮಾಧುರಿ ದೇಶಪಾಂಡೆ, ಬೆಂಗಳೂರು


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top