ದಾರಿದೀಪ-9: ಸತ್ಯದಿಂದ ನಡೆದರೆ ಮುಕ್ತಿ

Upayuktha
0

ತ್ಯದ ಮಾರ್ಗ ಯಾವಾಗಲು ಮುಳ್ಳಿನ ಹಾಸಿಗೆಯಿಂದಲೇ ತುಂಬಿರುತ್ತದೆ. ನಾವು ಎಷ್ಟೇ ಸತ್ಯವಂತರಾದರೂ ಕೆಲವು ಪ್ರಸಂಗಗಳು ನಮ್ಮಿಂದ ಸುಳ್ಳನ್ನಾಡಿಸುತ್ತವೆ. ಸತ್ಯಕ್ಕಿಂತ ಸುಳ್ಳು ಪ್ರಬಲವಾದದ್ದು ಸತ್ಯ ಎರಡನೇ ಮನೆ ದಾಟುವ ಮೊದಲೇ ಸುಳ್ಳು ಇಡೀ ಊರನ್ನೆಲ್ಲಾ ಸುತ್ತಿ ಬಂದಿರುತ್ತದೆ. ಆದರೆ ಸತ್ಯದಿಂದ ಬದುಕು ನಡೆಸಿ ಮುಕ್ತಿ ಪಡೆದವರು ಅನೇಕರು ಅದರಲ್ಲಿ ಪ್ರಸಿದ್ಧವಾದವರು ಸತ್ಯ ಹರಿಚಂದ್ರ, ಸತ್ಯವಾನ ಸಾವಿತ್ರಿ, ರಾಜ ಸತ್ಯವ್ರತ, ಧರ್ಮರಾಯ ಇನ್ನು ಅನೇಕರು ತಮ್ಮ ಸತ್ಯದ ನಡೆಯಿಂದ ಇತಿಹಾಸದಲ್ಲಿ ಅಜರಾಮರರಾಗಿದ್ದಾರೆ. ಅಂತಹ ಮಹಾನ್ ವ್ಯಕ್ತಿಗಳ ಜೀವನದ ಘಟನೆಗಳನ್ನು ಕೇಳುತ್ತಿರಬೇಕು ಅವುಗಳು ನಮ್ಮಣ್ಣ ಸತ್ಯತೆಡೆಗೆ ಕೊಂಡೊಯ್ಯುತ್ತವೆ. 


ಹೀಗೆ ಒಂದು ಬಾರಿ ಮಹಾತ್ಮ ಗಾಂಧೀಜಿ ಅವರು ಬಾಲ್ಯದಲ್ಲಿ ಇರುವಾಗ ಸತ್ಯ ಹರಿಚಂದ್ರ ನಾಟಕವನ್ನು ನೋಡಲು ಹೋದಾಗ ಆ ಹರಿಶ್ಚಂದ್ರ ಮಹಾರಾಜನು ಎಷ್ಟೇ ಕಷ್ಟಗಳು ಬಂದರೂ ಸುಳ್ಳನ್ನು ಹೇಳದೆ ಆ ದೇವನ ಸವಾಲನ್ನು  ಗೆದ್ದ ಪ್ರಸಂಗವು ಅವರ ಮೇಲೆ ಬಹಳ ಪ್ರಭಾವ ಬೀರುತ್ತದೆ ಆ ದಿನ ಮನೆಗೆ ಬಂದ ಆ ಬಾಲಕ ಮೋಹನದಾಸನು ತನ್ನ  ತಂದೆ  ಕರ್ಮಚಂದ್ರರ  ಬಳಿಯಲ್ಲಿ ಹೇಳಿದ  ಪಿತಾಜಿಯವರೇ  ನನ್ನನ್ನು ಕ್ಷಮಿಸಬೇಕು ಪ್ರತಿನಿತ್ಯ ನಿಮ್ಮ ಜೇಬಿನಲ್ಲಿರುವ ಹಣವು ಕಳುವಾಗುತ್ತಿದೆ ಎಂದು ನೀವು ಹೇಳುತ್ತಿರುವಿರಲ್ಲ ಅದನ್ನು ಕದಿಯುತ್ತಿರುವವನು ನಾನೇ ಅದರಿಂದ ನಾನು ಬಿಡಿಸೇದುತ್ತಿದ್ದೆ ಇನ್ನ ಮುಂದೆ ಯಾವತ್ತಿಗೂ ನಾನು ಕದಿಯಲಾರೆ ದುಶ್ಚಟಗಳನ್ನು ಮಾಡಲಾರೆ ಎಂದಾಗ ತಂದೆಗೆ ಆಶ್ಚರ್ಯವಾಯಿತು ನಾನು ನಿನ್ನನ್ನು ಏನು ಕೇಳಲಾರದೆ ನೀನೆ ಎಲ್ಲವನ್ನು ಬಂದು ನನ್ನ ಎದುರು ಹೇಳುತ್ತಿರುವೆಯಲ್ಲ ಏನಿದು ವಿಸ್ಮಯ ಎಂದಾಗ ಮೋಹನದಾಸರು ಹೇಳುತ್ತಾರೆ ಪೂಜ್ಯ ತಂದೆಯವರೇ ನಾನು ನಿನ್ನೆ ಸತ್ಯ ಹರಿಶ್ಚಂದ್ರ ನಾಟಕವನ್ನು ನೋಡಿದೆ ಅದು ನನ್ನ ಅಂತರಾಳವನ್ನು ಆವರಿಸಿಬಿಟ್ಟಿದೆ ಇನ್ನು ಮೇಲೆ ಯಾವತ್ತಿಗೂ ನಾನು ಈ ತಪ್ಪನ್ನ ಮಾಡಲಾರೆ ಎಂದು ನಿರ್ಧರಿಸಿದ್ದೇನೆ ಎಂದರು. 

ಕೆಲವು ಘಟನೆಗಳು ವ್ಯಕ್ತಿಯ ಜೀವನದ ಮೇಲೆ ಬಹುದೊಡ್ಡ ಪ್ರಭಾವ ಬೀರುತ್ತವೆ ಅದರಲ್ಲಿ ಯಾರಿಗೆ ಒಳ್ಳೆಯ ಸಂಗತಿಗಳ ಪ್ರಭಾವವಾಗುತ್ತದೆಯೋ ಅವರು ಸಮಾಜದಲ್ಲಿ ಯಶಸ್ಸನ್ನ ಸಾಧಿಸಬಲ್ಲರು ಇನ್ನು ಯಾರ ಜೀವನದ ಮೇಲೆ ಕೆಟ್ಟ ಸಂಗತಿಗಳ ಪ್ರಭಾವವಾಗುತ್ತವೆಯೋ  ಅವರು ಸಮಾಜಕ್ಕೆ ಮಾರಕ ವ್ಯಕ್ತಿಗಳಾಗುವರು.ಸತ್ಯದಿಂದ ಬದುಕಲು ಹೋದವರ  ಜೀವನದಲ್ಲಿ ಅನೇಕ ಕಷ್ಟಗಳು ಬಂದರೂ ಕೊನೆಗೆ ಆತ ಮುಕ್ತಿಯನ್ನೇ ಹೊಂದಬಲ್ಲ ಒಂದು ಕಡೆ ದಾಸರು ಹೇಳುತ್ತಾರೆ "ಸತ್ಯವೇ ದೇವರು ಸತ್ಯಕ್ಕಿಂತ ಮತ್ತೊಂದು ದೇವರಿಲ್ಲ ಕಾಣಿರೋ" ಎಂದು ನುಡಿದಿದ್ದಾರೆ. 


ನಮ್ಮ ಉಪನಿಷತ್ತಿನಲ್ಲಿ "ಸತ್ಯಮೇವ ಜಯತೆ "ಎಂದು ವ್ಯಾಖ್ಯಾನಿಸಲಾಗಿದೆ ಅದರ ಅರ್ಥ ಸತ್ಯಕ್ಕೆ ಜಯವಾಗಲಿ ಎಂಬುದಾಗಿದೆ.ನಮ್ಮ ಋಷಿಮುನಿಗಳು ಸತ್ಯದ ಮೇಲೆ ಅನೇಕ ರೀತಿಯಾದ ಬೆಳಕು ಚೆಲ್ಲಿದ್ದಾರೆ.ಉಪನಿಷತ್ತಿನ ವಾಕ್ಯವನ್ನು  ನಾವು ನಮ್ಮ ರಾಷ್ಟ್ರ ಲಾಂಛನದಲ್ಲಿ ಅಳವಡಿಸಿಕೊಂಡಿದ್ದರು ಆ ಸತ್ಯದ ಮಹತ್ವ ಇನ್ನೂ ನಮಗೆ ಅರಿವಾಗುತ್ತಿಲ್ಲ ದಿನನಿತ್ಯ ನಾವುಗಳು ಸುಳ್ಳಿನ ಸಾಮ್ರಾಜ್ಯವನ್ನೇ ಸೃಷ್ಟಿ ಮಾಡುತ್ತಿದ್ದೇವೆ ಆದರೆ ಈ ಸಾಮ್ರಾಜ್ಯ ಶಾಶ್ವತವಾದದ್ದಲ್ಲ ಸುಳ್ಳು ತನ್ನ ಸುಳ್ಳನ್ನ ಮುಚ್ಚಿಕೊಳ್ಳಲು ಮತ್ತೊಂದು ಸುಳ್ಳನ್ನೇ ಹುಟ್ಟು ಹಾಕುತ್ತದೆ ಆದರೆ ಸತ್ಯ ಮಾತ್ರ ಯಾವಾಗಲೂ ಒಂದೇಯಾಗಿ ನಿಂತಿರುತ್ತದೆ.

ಕಳಬೇಡ,ಕೊಲಬೇಡ, ಹುಸಿಯ ನುಡಿಯಲು ಬೇಡ 

ಮುನಿಯಬೇಡ ಅನ್ಯರಿಗೆ ಅಸಹ್ಯ ಪಡಬೇಡ 

ತನ್ನ ಬಣ್ಣಿಸಬೇಡ ಇದಿರು ಹೊಳೆಯಲು ಬೇಡ 

ಇದೇ ಅಂತರಂಗಶುದ್ದಿ ಬಹಿರಂಗಶುದ್ಧಿ 

ನಮ್ಮ ಕೂಡಲಸಂಗಮದೇವನುಲಿಸುವ ಪರಿ||


ಬಸವಣ್ಣವರು ತಮ್ಮ ಈ ವಚನದಲ್ಲಿ ಹುಸಿಯನ್ನ ನುಡಿಯದೇ ಇರುವುದು ಅಂದರೆ ಸುಳ್ಳನ್ನ ಹೇಳದೆ ಇರುವುದು ಅದು ನಮ್ಮ ಅಂತರಂಗ ಮತ್ತು ಬಹಿರಂಗಗಳನ್ನ ಶುದ್ಧವಾಗಿಡುತ್ತದೆ ಮತ್ತು ಭಗವಂತನನ್ನ ಒಲಿಸಿಕೊಳ್ಳುವ ಸರಳ ಮಾರ್ಗವನ್ನ ತೋರಿಸುತ್ತದೆ ಅದಕ್ಕಾಗಿ ಹುಸಿಯ ನುಡಿಯಬೇಡ ಎಂದು ಹೇಳಿದ್ದಾರೆ.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top