ಪಣಜಿ: ಅಖಿಲ ಗೋವಾ ವೀರಶೈವ ಲಿಂಗಾಯತ ಸಮಾಜ, ಮಡಗಾಂವ-ಗೋವಾದ ಶಾಖಾ ಕಮೀಟಿಯಾದ ಪೊಂಡಾ-ಗೋವಾದ ಶಾಖಾ ಕಮಿಟಿಯವರು ಶ್ರಾವಣ ಶಿವಯೋಗ ಕಾರ್ಯಕ್ರಮ ಮಾಡಲು ಪೂರ್ವಭಾವಿ ಸಭೆಯನ್ನು ಕರೆದಿದ್ದರು. ಶಾಖಾ ಕಮೀಟಿಯ ಅಧ್ಯಕ್ಷರಾದ ಸ್ಮೀತಾ ಸಿರಿಗಣ್ಣವರ ಮಾತನಾಡಿ-ಶ್ರಾವಣ ಮಾಸದ ನಿಮಿತ್ಯ ವರದ ಶಂಕರ ಪೂಜೆ, ಸಾಮೂಹಿಕ ಇಷ್ಟಲಿಂಗ ಪೂಜೆ ಹಾಗೂ ಸಭಾ ಕಾರ್ಯಕ್ರಮ ಮಾಡುವ ವಿಷಯದ ಕುರಿತು ವಿಶ್ಲೇಷಿಸಿದರು.
ಆಗಸ್ಟ್ 18 ರಂದು ಭಾನುವಾರ ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಲಾಯಿತು. ಈ ಸಂದರ್ಭದಲ್ಲಿ ನಿರಂತರ 15 ವರ್ಷ ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ವೀರಶೈವ ಧರ್ಮದ ಸಿದ್ಧಾಂತ ಶಿಖಾಮಣಿ ಧರ್ಮಗ್ರಂಥದ ಪಾರಾಯಣ ಪಾಠವನ್ನು ಕಲಿಸಿ ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾದ ವೇದಮಾತಾ ಕವಿತಾ ಗುರುಸಿದ್ಧಯ್ಯ ಹಿರೇಮಠ ಧಾರವಾಡ ಇವರನ್ನು ಸನ್ಮಾನಿಸಲು ಹಾಗೂ ಈ ಕಾರ್ಯಕ್ರಮ ಗೌರವ ಅತಿಥಿಗಳಾಗಿ ಹನುಮಂತಪ್ಪ ಶಿರೂರ ರೆಡ್ಡಿ ಹಾಗೂ ಅತಿಥಿಗಳಾಗಿ ಮಹೇಶ ಬಳಬಟ್ಟಿಯವರನ್ನು ಆಹ್ವಾನಿಸಲು ಸರ್ವರೂ ಸರ್ವಾನುಮತದಿಂದ ಒಪ್ಪಿಗೆ ಸೂಚಿಸಿ ನಿರ್ಧಾರ ಕೈಗೊಳ್ಳಲಾಯಿತು.
ಜಯಶ್ರೀ ಶಂಕರ ಹೊಸ್ಮನಿ ಸ್ವಾಗತಿಸಿದರು. ಈ ಸಭೆಗೆ ಮಹಾಂತೇಶ ಬಡಿಗೇರ, ಸುರೇಶ ಹಡಪದ, ಶಿವಾನಂದ ಯೋಗಿಕೊಳ್ಳ, ರೇವಣಸಿದ್ಧಯ್ಯ ಹಿರೇಮಠ, ವಿರೂಪಾಕ್ಷ ಸಿದ್ಧಲಿಂಗಯ್ಯ ಹಿರೇಮಠ ಮತ್ತಿತರರು ಉಪಸ್ಥಿತರಿದ್ದರು. ಸಂಗೀತಾ ಚಪರೆ ಪ್ರಾರ್ಥನೆಗೈದರು, ಮೀನಾಕ್ಷಿ ಕಮ್ಮಾರ ವಂದನಾರ್ಪಣೆಗೈದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ