ಬದಿಯಡ್ಕ: ಮುಳ್ಳೇರಿಯಾ ಮಂಡಲಾಂತರ್ಗತ ಪೆರಡಾಲ ವಲಯದ ಕುಮಾರಮಂಗಲದ ಬಳಿ ಪರಮಪೂಜ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ ಕಾರ್ಯಾಚರಿಸುತ್ತಿರುವ ಧನ್ವಂತರಿ ಶ್ರೀವನದ ಸಮಿತಿಯ ಸಭೆಯು ಬದಿಯಡ್ಕ ಶ್ರೀ ಭಾರತಿವಿದ್ಯಾಪೀಠದಲ್ಲಿ ಆ.04ರಂದು ಜರಗಿತು.
ಶ್ರೀಹರಿಪ್ರಸಾದ್ ಪೆರ್ಮುಖ ಅಧ್ಯಕ್ಷತೆ ವಹಿಸಿದರು. ಗೋವಿಂದ ಬಳ್ಳಮೂಲೆ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಡಾ ವೈ ವಿ ಕೃಷ್ಣಮೂರ್ತಿ ಮುಂದಿನ ಕಾರ್ಯಯೋಜನೆಗಳಬಗ್ಗೆ ಮಾರ್ಗದರ್ಶನಗಳನ್ನಿತ್ತರು. ಶ್ರೀವನದಲ್ಲಿ ಶ್ರಮದಾನ ಸೇವಾ ಅರ್ಘ್ಯ, ಔಷಧೀಯ ಮತ್ತು ವೈದಿಕ ವೃಕ್ಷ ನೆಡುವಿಕೆ ಬಗ್ಗೆ ಸಮಾಲೋಚಿಸಿ ತೀರ್ಮಾನ ಕೈಗೊಳ್ಳಲಾಯಿತು.
ಶ್ರೀಧನ್ವಂತರಿ ಜಯಂತಿಯ ಸಂದರ್ಭದಲ್ಲಿ ವೇ ಮೂ ಕೇಶವಪ್ರಸಾದ ಕೂಟೇಲು ಅವರ ನೇತೃತ್ವದಲ್ಲಿ ಶ್ರೀವನದಲ್ಲಿ ಸಾರ್ವಜನಿಕ ಧನ್ವಂತರಿಪೂಜೆಯೆನ್ನು ಜರಗಿಸಲು ತೀರ್ಮಾನಿಸಲಾಯಿತು. ಮಂಡಲ ಕಾರ್ಯದರ್ಶಿ ಸುಬ್ರಹ್ಮಣ್ಯಕೆರೆಮೂಲೆ, ಸಮಿತಿಯ ಸದಸ್ಯರು ಉಪಸ್ಥಿತರಿದ್ದರು. ಗಣೇಶ್ ಪಟ್ಟಾಜೆ ಧನ್ಯವಾದವಿತ್ತರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ