ಮೂಡುಬಿದಿರೆ: ರಾಷ್ಟ್ರೀಯ ಸೇವಾ ಯೋಜನೆ ಚಟುವಟಿಕೆಯ ಉದ್ಘಾಟನೆ

Upayuktha
0

ವಿದ್ಯಾರ್ಥಿ ಸಮುದಾಯದ ಸಾಮರ್ಥ್ಯವನ್ನು ಸರಿಯಾಗಿ ಬಳೆಸಿಕೊಳ್ಳಲು ಆರಂಭಗೊಂಡಿದ್ದೇ ರಾಷ್ಟ್ರೀಯ ಸೇವಾ ಯೋಜನೆ ಮೂಲಕ: ಪ್ರೋ ಪ್ರಸಾದ್


ಮೂಡುಬಿದಿರೆ:
ರಾಷ್ಟ್ರೀಯ ಸೇವಾ ಯೋಜನೆ ನೀಡುವಂತಹ ಕೌಟುಂಬಿಕ ಅನುಭವ ಬೇರೆ ಯಾವುದೇ ಸಂಘಟನೆ ನೀಡಲಾರದು ಎಂದು ಮೂಡುಬಿದರೆ  ಶ್ರೀ ಧವಲಾ ಕಾಲೇಜಿನ ನಿವೃತ್ತ ಪ್ರಾಚರ‍್ಯ ಪ್ರೋಅಜಿತ್ ಪ್ರಸಾದ್ ಅಭಿಪ್ರಾಯಪಟ್ಟರು.


ಅವರು ಶಿವರಾಮ ಕಾರಂತ ವೇದಿಕೆಯಲ್ಲಿ, ಶನಿವಾರ ಆಳ್ವಾಸ್ ಪದವಿ ಕಾಲೇಜಿನ ರಾಷ್ಟ್ರೀಯ  ಸೇವಾ ಯೋಜನೆಯ ಪ್ರಸಕ್ತ ವರ್ಷದ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿದರು.


ವಿದ್ಯಾರ್ಥಿ ಸಮುದಾಯದ ಸಾಮರ್ಥ್ಯವನ್ನು ಸರಿಯಾಗಿ ಬಳೆಸಿಕೊಳ್ಳಲು ಆರಂಭಗೊಂಡಿದ್ದೇ ರಾಷ್ಟ್ರೀಯ ಸೇವಾ ಯೋಜನೆ ಮೂಲಕ.  1969 ರಲ್ಲಿ ಎನ್.ಎಸ್.ಎಸ್ ಶುರುವಾದಾಗ ಅಂದಿನ ಯುವಕರ ಪ್ರಮುಖ ಆಕರ್ಷಣೆ ಎನ್‌ಎಸ್‌ಎಸ್ ಆಗಿತ್ತು.


ಸಾಮಾಜಿಕ ಕಳಕಳಿ, ಬದ್ಧತೆ ಮತ್ತು ಉತ್ತರದಾಯಿತ್ವದ ಗುಣಗಳನ್ನು  ಎನ್.ಎಸ್.ಎಸ್ ನೀಡುತ್ತದೆ. ವ್ಯಕ್ತಿತ್ವ ವಿಕಸನವೆಂದರೆ ದೌರ್ಬಲ್ಯಗಳನ್ನು ಕಡಿಮೆಗೊಳಿಸಿ ಧನಾತ್ಮಕ ಚಿಂತನೆಯನ್ನು ಹೆಚ್ಚಿಸಿಕೊಳ್ಳುವುದಾಗಿದೆ. ಜೀವನವೆಂದರೆ ನಮಗಾಗಿ ಬದುಕೋದಲ್ಲ. ಇತರರ ಜೊತೆಗೆ ಬದುಕುತ್ತಾ, ಬೆಳೆಯುತ್ತಾ ಹೋಗುವ ವಿಶ್ವ ಪ್ರಜ್ಞೆ.   ಆಗ ಮಾತ್ರ ನಮ್ಮಲ್ಲಿ ಸಮಷ್ಟಿ ಮನೋಭಾವ ಬೆಳೆಯಲು ಸಾಧ್ಯ ಎಂದರು. 


ಎನ್.ಎಸ್.ಎಸ್. ಸ್ವಯಂಸೇವಕನ ಪ್ರಾಥಮಿಕ ಅರ್ಹತೆಯೇ 120 ಘಂಟೆಗಳ ಕಾರ್ಯಕ್ರಮದಲ್ಲಿ ಕ್ರಿಯಾತ್ಮಕವಾಗಿ ಭಾಗಿಯಾಗುವುದರ ಜೊತೆಗೆ ವಾರ್ಷಿಕ ಒಂದು ಶಿಬಿರದಲ್ಲಿ ಭಾಗವಹಿಸುವುದಾಗಿದೆ ಎಂದರು.


ಸಾಕ್ಷರತಾ ಆಂದೋಲನದ ಯಶಸ್ಸು ನಮ್ಮ ಯುವಪೀಳಿಗೆಯ ಕೈಲಿದೆ. ಎನ್.ಎಸ್.ಎಸ್.ನ ಮೂಲಕ ಇದನ್ನು ಇನ್ನಷ್ಟು ಹೆಚ್ಚಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ತಿಳಿಸಿದರು. ನೂತನವಾಗಿ ಆಯ್ಕೆಯಾದ ಎಲ್ಲಾ ಪದಾಧಿಕಾರಿಗಳಿಗೆ ಹಾಗೂ ಸದರಿ ವರ್ಷದಲ್ಲಿ ಎನ್.ಎಸ್.ಎಸ್. ಸೇರಿದ ಎಲ್ಲಾ ಸ್ವಯಂಸೇವಕರಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು.


ಕಾರ‍್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪರೀಕ್ಷಾಂಗ ಕುಲಸಚಿವ ಡಾ ನಾರಾಯಣ ಶೆಟ್ಟಿ ವಹಿಸಿದ್ದರು. ಎನ್.ಎಸ್.ಎಸ್. ಕಾರ್ಯಕ್ರಮ ಅಧಿಕಾರಿಗಳಾದ ವಸಂತ, ಅಕ್ಷತಾ ಪ್ರಭು ಹಾಗೂ ಅಪರ್ಣಾ ಇದ್ದರು.  ವೈಷ್ಣವಿ ನಿರೂಪಿಸಿ, ರಾ.ಸೇ.ಯೋ.ಯ ಮುಖ್ಯ ಕಾರ್ಯದರ್ಶಿ ಸಹನಾ ಸಹನಾ ಸ್ವಾಗತಿಸಿ, ಶ್ರೀವಲ್ಲಿ ಅತಿಥಿಯನ್ನು ಪರಿಚಯಿಸಿ, ಸಾತ್ವಿಕ್ ವಂದಿಸಿದರು.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top