ವಿದ್ಯಾಗಿರಿ: ಮಂಗಳೂರು ವಿಶ್ವವಿದ್ಯಾಲಯದ 2024- 25ನೇ ಸಾಲಿನ ಬಿ.ಕಾಂ. ಆರನೇ ಸೆಮಿಸ್ಟರ್‌ನ ಎಲ್ಲಾ ವಿಷಯಗಳಲ್ಲಿ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ದೀಕ್ಷಾ ಡಿ ಶೆಟ್ಟಿ ಪೂರ್ಣ ಅಂಕ ಗಳಿಸಿದ್ದಾಳೆ. ಮಂಗಳೂರು ವಿಶ್ವವಿದ್ಯಾಲಯದ ವಾಣಿಜ್ಯ ವಿಭಾಗದ ಪರೀಕ್ಷಾ ಇತಿಹಾಸದಲ್ಲೇ ಇದು ದಾಖಲೆಯಾಗಿದೆ.
ಇಂಡಿಯನ್ ಅಕೌಂಟಿಂಗ್ ಸ್ಟಾಂಡರ್ಡ್-2, ಇನ್‌ವೆಸ್ಟ್ಮೆಂಟ್ ಮ್ಯಾನೆಜ್‌ಮೆಂಟ್, ಅಡ್ವಾನ್ಸಡ್ ಫೈನಾನ್ಶಿಯಲ್ ಮ್ಯಾನೆಜ್‌ಮೆಂಟ್, ಇನ್‌ಕಂ ಟ್ಯಾಕ್ಸ್ ಲಾ ಆ್ಯಂಡ್ ಪ್ರಾಕ್ಟೀಸ್ 2, ಮ್ಯಾನೆಜ್‌ಮೆಂಟ್ ಅಕೌಂಟಿಂಗ್, ಅಸೆಸ್‌ಮೆಂಟ್ ಆಫ್ ಪರ್ಸನ್ಸ್ ಅದರ್ ದೆನ್ ಇಂಡಿವಿಜ್ಯುವಲ್ಸ್ ಎಂಡ್ ಫೈಲಿಂಗ್ ಐಟಿರ‍್ಸ್, ಹಾಗೂ ಮಿನಿ ಪ್ರಾಜೆಕ್ಟ್ ವಿಷಯಗಳಲ್ಲಿ ಪೂರ್ಣಾಂಕ ಗಳಿಸಿದ್ದಾಳೆ. ಅವಳ ಒಟ್ಟಾರೆ ಸರಾಸರಿ ಅಂಕವು ಶೇಕಡಾ 95.54 ಇದೆ. ಕಾಲೇಜಿನ ಕ್ಯಾಂಪಸ್ ಸಂದರ್ಶನದಲ್ಲಿ ಟಿಸಿಎಸ್ ಕಂಪೆನಿಗೆ ಉತ್ತಮ ವೇತನದೊಂದಿಗೆ ಆಯ್ಕೆಯಾಗಿದ್ದಾಳೆ.
ಪಠ್ಯೇತರ ಚಟುವಟಿಕೆಗಳಲ್ಲೂ ಸಕ್ರಿಯಳಾಗಿದ್ದಳು. ಮೂಡುಬಿದಿರೆ ದರೆಗುಡ್ಡೆ ನಿವಾಸಿಗಳಾದ ದಿನೇಶ ಶೆಟ್ಟಿ ಹಾಗೂ ಜಯಶ್ರೀ ಶೆಟ್ಟಿ ದಂಪತಿಗಳ ಪುತ್ರಿ. ವಿದ್ಯಾರ್ಥಿನಿಯ ಸಾಧನೆಯನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ ಆಳ್ವ ಶ್ಲಾಘಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ