ಹಾಸನ: ಹಾಸನದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ ಕಾರ್ಯಪಾಲಕ ಇಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸಿ ವಯೋನಿವೃತ್ತಿ ಹೊಂದಿದ ಎಂ.ಬಿ. ಜಯಕುಮಾರ್ ಅವರಿಗೆ ಹಾಸನದ ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಸಭಾಂಗಣದಲ್ಲಿ ಕಛೇರಿ ಸಿಬ್ಬಂದಿ ವರ್ಗ ಮತ್ತು ಗುತ್ತಿಗೆದಾರರಿಂದ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಪೂರ್ಣಿಮರವರು ಕಾರ್ಯಪಾಲಕ ಇಂಜಿನಿಯರ್ ಅವರನ್ನು ಸನ್ಮಾನಿಸಿ ಮಾತನಾಡಿ ಶುದ್ಧ ಕುಡಿಯುವ ನೀರನ್ನು ಹಳ್ಳಿ ಹಳ್ಳಿಗೂ ತಲುಪಿಸುವ ಯೋಜನೆಯ ಕಾರ್ಯ ಯೋಜನೆಯನ್ನು ಎಲ್ಲಾ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಅವರು ಉತ್ತಮವಾಗಿ ಅನುಷ್ಠಾನಗೊಳಿಸುವಲ್ಲಿ ನಿಷ್ಟೆಯಿಂದ ಪ್ರಗತಿ ಸಾಧಿಸಬೇಕಾಗಿ ಆಶಿಸಿದರು.
ರಾಜ್ಯ ಸರ್ಕಾರಿ ನೌಕರರ ಸಂಘದ ಹಾಸನ ಜಿಲ್ಲಾ ಘಟಕದ ಅಧ್ಯಕ್ಷರು ಈ.ಕೃಷ್ಣೇಗೌಡರು, ಹೇಮಾವತಿ ಯೋಜನೆಯ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿದ್ದು ನಿವೃತ್ತರಾಗಿರುವ ಬಿ.ಕೆ.ರುದ್ರಪ್ಪ ನಿವೃತ್ತರ ಕುರಿತು ಮಾತನಾಡಿದರು. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸ. ಕಾ. ಇಂಜಿನಿಯರ್‌ಗಳಾದ ರಂಜಿತ, ನವೀನ್‌ಕುಮಾರ್ ನಿವೃತ್ತರ ಸೇವಾ ಅವಧಿಯಲ್ಲಿನ ಕಾ. ಇಂ. ಸಹಕಾರ ಪ್ರೋತ್ಸಾಹ ಕುರಿತು ಮಾತನಾಡಿದರು..
ಚನ್ನರಾಯಪಟ್ಟಣ ಸ.ಕಾ.ಇಂ.ನಳಿನಾ, ಹಾಸನ ಸ.ಕಾ.ಇಂ. ರಂಗಸ್ವಾಮಿ, ಅರಸೀಕೆರೆ ಸಕಾಇಂ. ಮೇಘನಾಥ್. ಆಲೂರು ಸಕಾಇಂ. ರವಿ. ಸಕಲೇಶಪುರ ಸಕಾಇಂ ಹರೀಶ್‌ರವರು ವೇದಿಕೆಯಲ್ಲಿದ್ದರು. ವಿಭಾಗ ಕಛೇರಿಯ ಸಿಬ್ಬಂದಿ ವರ್ಗ ಉಪವಿಭಾಗಗಳ ಸಿಬ್ಬಂದಿ ವರ್ಗ ಹಾಗೂ ಗುತ್ತಿಗೆದಾರರಿಂದ ಕಾ. ಇಂ. ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನಿತರಾಗಿ ಮಾತನಾಡಿದ ಎಂ.ಬಿ.ಜಯಕುಮಾರ್ ಅವರು ತಾವು ನೌಕರಿಗೆ ಸೇರಿದಾಗಿನಿಂದ ಸಾಗಿ ಬಂದ ಹಾದಿಯನ್ನು ಸ್ಮರಿಸಿಕೊಂಡರು. ಸಾಹಿತಿ ಗೊರೂರು ಅನಂತರಾಜು ಕಾರ್ಯಕ್ರಮ ನಿರೂಪಿಸಿದರು. ಉಮೇಶ್ ಸ್ವಾಗತಿಸಿದರು. ಸಹಾಯಕ ಇಂಜಿನಿಯರ್ ಕು. ಪೂಜಾ ವಂದಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ