ಚುಟುಕೆಂದರೆ ನದಿಯ ಉಗಮದಂತೆ: ಡಾ ಸುರೇಶ ನೆಗಳಗುಳಿ

Chandrashekhara Kulamarva
0


ಬಂಟ್ವಾಳ: ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ದ.ಕ ಸಮಿತಿಯು ಸೀನಿಯರ್ ಚೇಂಬರ್ ಸಹಯೋಗದಲ್ಲಿ ಭಾನುವಾರ (ಆ.4) ಬಂಟ್ವಾಳ ಜೋಡುಮಾರ್ಗದ ಸ್ಪರ್ಶ ಕಲಾಮಂದಿರದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಪ್ರಥಮ ಸಾಹಿತ್ಯ ಸಮ್ಮಿಲನದ ಸಂದರ್ಭದಲ್ಲಿ ಕವಿಗೋಷ್ಠಿ ಹಾಗೂ ಸಮಾರೋಪ ಸಮಾರಂಭದ ಅದ್ಯಕ್ಷತೆ ವಹಿಸಿ ಮಂಗಳೂರು ಮಂಗಳಾ ಆಸ್ಪತ್ರೆ ಹಾಗೂ ಕಣಚೂರು ಆಯುರ್ವೇದ ಆಸ್ಪತ್ರೆಯ ಮುಖ್ಯ ವೈದ್ಯ ಹಾಗೂ ಬರಹಗಾರ ಡಾ ಸುರೇಶ ನೆಗಳಗುಳಿಯವರು ಚುಟುಕು ಸಾಹಿತ್ಯದ ಸ್ವಾರಸ್ಯದ ಬಗ್ಗೆ ಮಾತನಾಡಿದರು.


ಮುಂದುವರಿದು ಒಂದೇ ವಿಷಯವನ್ನು ಹೇಗೆ ಬಗೆ ಬಗೆಯ ಸಾಹಿತ್ಯ ಪ್ರಕಾರದಲ್ಲಿ ಬರೆಯಬಹುದು ಎನ್ನುತ್ತಾ ಚುಟುಕು, ರುಬಾಯಿ, ಮುಕ್ತಕ, ತನಗ, ಹಾಯ್ಕು, ಟಂಕಾ ಹಾಗೂ ಹನಿಗವನವಾಗಿ ಒಂದೇ ವಸ್ತುವನ್ನು ವಾಚಿಸಿ ತೋರಿಸಿದರು.


ಗಂಗಾಮೂಲದಲ್ಲಿ ಚಿಕ್ಕದಾಗಿ ಉಗಮಿಸಿದರೂ ಮುಂದುವರಿದು ಅದೇ ಊಟಿ ಕಡಲು ಸೇರುವಂತೆ ಸಾಹಿತ್ಯ ಯಾನ ಎಂದರಲ್ಲದೆ ಪರರಿಂದ ಬರೆಯಿಸಿ ಹೆಸರಿಗಾಗಿ ಸಾಹಿತಿಯಾದರೆ ರಸಹೀನ ಕಬ್ಬಿನಂತೆ ಎಂದರು. ಚುಟುಕು ವಾಚಿಸಿದ ಸುಮಾರು ನಲುವತ್ತು ಮೀರಿದ ವಾಚಕರನ್ನು ಹೆಸರಿಸಿ ಶ್ಲಾಘಿಸಿದರು.


ಪರಿಷತ್ತಿನ ದ.ಕ ಜಿಲ್ಲಾಧ್ಯಕ್ಷ ಜಯಾನಂದ ಪೆರಾಜೆಯವರ ಸರ್ವಾಧ್ಯಕ್ಷತೆಯಲ್ಲಿ ನಡೆದ ಈ ಸಮಾರಂಭವು ವಿ.ಬಿ ಕುಳಮರ್ವ ಹಾಗೂ ವಾಮನ ರಾವ್  ಬೇಕಲರವರ ಉಪನ್ಯಾಸ, ಡಾ ವಾಣಿಶ್ರೀ ಹಾಗೂ ಶಾಂತಾ ಕುಂಟಿನಿಯವರ ಬಳಗಗಳ ಸಾಂಸ್ಕೃತಿಕ ಕಾರ್ಯಕ್ರಮವೂ ನೆರವೇರಿತು.


ಪರಿಷತ್ತಿನ ಸ್ಥಾಪಕಾಧ್ಯಕ್ಷ ಕೃಷ್ಣಮೂರ್ತಿ ಕುಲಕರ್ಣಿ, ಹಾಗೂ ಶುಭಾಶಂಸನೆ ಗೈದ ರೇಮಂಡ್ ಡಿಕೂನಾ, ಕಾರ್ಯದರ್ಶಿ ಶಾಂತಾ ಪುತ್ತೂರು, ಸಂಚಾಲಕಿ ಮಧುರಾ ಕಡ್ಯ ವೇದಿಕೆಯಲ್ಲಿದ್ದರು.


ಹಾವೇರಿ ಹುಬ್ಬಳ್ಳಿ ಹಾಸನ ಸಹಿತ ದೂರದ ಊರುಗಳಿಂದಲೂ ಆಗಮಿಸಿದ್ದ ಕವಿಗಳ ಸಹಿತ ಜಿಲ್ಲಾ ಪ್ರತಿನಿಧಿಗಳನೇಕರು ಭಾಗವಹಿಸಿದ್ದು ಕಳೆ ತಂದಿತು. 


ಅಪೂರ್ವ ಕಾರಂತ್, ರವೀಂದ್ರ ಕುಕ್ಕಾಜೆ, ರೇಖಾ ಸುದೇಶ ರಾವ್ ನಿರೂಪಣೆಗೈದರು.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top