ಎಕ್ಸ್‌ಪರ್ಟ್‌ ಇ-ಲರ್ನ್ ಆ್ಯಪ್‌ ಲೋಕಾರ್ಪಣೆ

Upayuktha
0




ಮಂಗಳೂರು: ಮಂಗಳೂರಿನ ಪ್ರತಿಷ್ಠಿತ ಎಕ್ಸ್‌ಪರ್ಟ್‌ ಸಮೂಹ ಶಿಕ್ಷಣ ಸಂಸ್ಥೆಯು ಅಭಿವೃದ್ಧಿ ಪಡಿಸಿದ ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌-ಎಐ) ಆಧಾರಿತ ಕಲಿಕಾ ವೇದಿಕೆ ಎಕ್ಸ್‌ಪರ್ಟ್‌ ಇ-ಲರ್ನ್‌ ಅನ್ನು ಶನಿವಾರ ಲೋಕಾರ್ಪಣೆಗೊಳಿಸಿದೆ.


ಎಕ್ಸ್‌ಪರ್ಟ್‌ ಇ-ಲರ್ನ್‌, ಕೃತಕ ಬುದ್ಧಿಮತ್ತೆ ಆಧಾರಿತ 'ಇಝಿ' (EZ) ಹಾಗೂ ವಿಸ್ತೃತ ಅಧ್ಯಯನದ "ಎಕ್ಸ್‌ಪೆಡಿಷನ್‌' ಎಂಬ ಮೂರು ಹೊಸ ಆವಿಷ್ಕಾರವನ್ನು ಎಕ್‌ಪರ್ಟ್‌ ಸಮೂಹ  ಶಿಕ್ಷಣ ಸಂಸ್ಥೆ ಲೋಕಾರ್ಪಣೆಗೊಳಿಸಿದೆ.


ಆಂಡ್ರಾಯ್ಡ್‌ ಆಧರಿತ ಎಕ್‌ಪರ್ಟ್‌ ಇ-ಲರ್ನ್‌ ಆ್ಯಪ್‌ನ್ನು ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಎಕ್ಸ್‌ಪರ್ಟ್‌ ಪದವಿ ಪೂರ್ವ ಕಾಲೇಜು ಹಾಗೂ ಎಕ್ಸ್‌ಪರ್ಟ್‌ ಕೋಚಿಂಗ್‌ ಕ್ಲಾಸಸ್‌ನ ವಿದ್ಯಾರ್ಥಿಗಳಿಗೆ ಪೂರೈಸಿದರೆ, ಮುಂದಿನ ಶೈಕ್ಷಣಿಕ ವರ್ಷದಿಂದ ಮುಕ್ತ ಮಾರುಕಟ್ಟೆಗೆ ಪೂರೈಸಲಾಗುವುದು. ವಿದ್ಯಾರ್ಥಿಗಳು ಮತ್ತು  ಶಿಕ್ಷಕರು ಇದರ ಲಾಭ ಪಡೆದುಕೊಳ್ಳಬಹುದು. ಮುಂದಿನ ದಿನಗಳಲ್ಲಿ ಈ   ಪ್‌ ಶೈಕ್ಷಣಿಕ ಕ್ಷೇತ್ರದಲ್ಲಿ ಹೊಸ ಮನ್ವಂತರ ಸೃಷ್ಟಿಸಲಿದೆ.


ತರಗತಿಯಲ್ಲಿನ ಪಾಠ ಪೂರ್ಣ ಪ್ರಮಾಣದಲ್ಲಿ ಮನನ ಮಾಡಲು ಸಾಧ್ಯವಾಗದಿದ್ದರೆ ಅಥವಾ ಹೆಚ್ಚಿನ ವಿವರಣೆ ಬೇಕಾದರೆ, ಪದವಿ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ಸಿದ್ಧಪಡಿಸಿ, ಯಶಸ್ಸಿನ ಕ್ರಾಂತಿಯನ್ನು ಮಾಡಿದ ಎಕ್ಸ್‌ಪರ್ಟ್‌ ಸಮೂಹ ಸಂಸ್ಥೆಯ ಅನುಭವಿ ಅಧ್ಯಾಪಕರು ಮಾಡಿರುವ ಪಾಠಗಳ ವಿಡಿಯೊವನ್ನು ಎಕ್ಸ್‌ಪರ್ಟ್‌ ಇ-ಲರ್ನ್‌ನಲ್ಲಿ ನೋಡಬಹುದಾಗಿದೆ.



ಪ್ರತಿ ವಿಷಯದಲ್ಲಿ ಸುಮಾರು 10 ನಿಮಿಷಗಳ ವಿಡಿಯೋ ಇದ್ದು ವಿಡಿಯೋ ಪಾಠದ ನಡುವೆ ವಿದ್ಯಾರ್ಥಿಗಳಿಗೆ ಕೃತಕ ಬುದ್ಧಿಮತ್ತೆಯು ಪ್ರಶ್ನೆಯನ್ನು ಕೇಳುತ್ತದೆ. ಪ್ರಶ್ನೆಗೆ ಉತ್ತರ ಕೊಟ್ಟರೆ ಮಾತ್ರ ವಿಡಿಯೋ ಮತ್ತೆ ಮುಂದುವರಿಯುತ್ತದೆ. ಇಲ್ಲದಿದ್ದರೆ ಮತ್ತೆ ಮೊದಲಿನಿಂದ ಪ್ಲೇ ಮಾಡಿ ಮನನ ಮಾಡಬೇಕು. ಹೀಗೆ ಒಂದರ್ಥದಲ್ಲಿ ತರಗತಿಯಲ್ಲಿ ಅಧ್ಯಾಪಕರು ಪ್ರಶ್ನೆ ಕೇಳಿದಂತೆ ಇಲ್ಲೂ ಕೇಳಲಾಗುತ್ತದೆ.  


ಕೃತಕ ಬುದ್ಧಿಮತ್ತೆ (AI)

ಎಕ್ಸ್‌ಪರ್ಟ್‌ನ ಇಝಿ ಎಂಬುದು ಕೃತಕ ಬುದ್ಧಿಮತ್ತೆ ಆಧಾರಿತವಾಗಿರುವುದರಿಂದ ವಿದ್ಯಾರ್ಥಿಗಳು ತಮ್ಮ ಸಂದೇಹವನ್ನು ಟೈಪ್‌ ಮಾಡಿ ಕೇಳಿದಾಗ, ವಿಡಿಯೋ, ನೋಟ್ಸ್‌ ವಿವರಣೆಯನ್ನು ಉದಾಹರಣೆ ಸಹಿತ ವಿವರಿಸಲಾಗುತ್ತದೆ. ಇದು ಎನ್‌ಸಿಆರ್‌ಟಿ ಮತ್ತು ಎಕ್ಸ್‌ಪರ್ಟ್‌ ಪಬ್ಲಿಷಿಂಗ್‌ ಹೌಸ್‌ ಹೊರ ತಂದಿರುವ ಪುಸ್ತಕಗಳ ಆಧಾರದಲ್ಲಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡುತ್ತದೆ. ಇದು ಆತರ ಸರ್ಚ್‌ ಎಂಜಿನ್‌ಗಿಂತ ಹೆಚ್ಚು ನಿಖರವಾದ ಉತ್ತರವನ್ನು ನೀಡುತ್ತದೆ.


ವಿದ್ಯಾರ್ಥಿಗಳಿಗೆ ವಿಷಯದ ಬಗ್ಗೆ ಅಳವಾಗಿ ಅರಿತುಕೊಳ್ಳಲು ಸಹಾಯ ಮಾಡುತ್ತದೆ. ಮಾತ್ರವಲ್ಲದೆ. ಈ ರೀತಿಯ ರಿವಿಷನ್‌ ಪರಿಣಾಮಕಾರಿ ಯಾಗಿರುತ್ತದೆ. ಕೃತಕ ಬುದ್ಧಿಮತ್ತೆ ಒಂದು ಹೆಜ್ಜೆ ಮುಂದೆ ಹೋಗಿ ವಿದ್ಯಾರ್ಥಿಗಳಿಗೆ ನೋಟ್ಸ್‌ ಮಾತೃ ಭಾಷೆಯಲ್ಲೂ ಕೊಡುತ್ತದೆ. ಇದು ವಿದ್ಯಾರ್ಥಿಗಳಿಗೆ ಸುಲಭದಲ್ಲಿ ಅರ್ಥ ಮಾಡಿಕೊಳ್ಳಲು ಸಹಕಾರಿಯಾಗಿದೆ.



ಸಾಮಾನ್ಯವಾಗಿ ಎಲ್ಲ ಅನ್‌ಲೈನ್‌ ಕ್ಲಾಸ್‌ಗಳು ವನ್‌ ವೇ ಕಮ್ಯೂನಿಕೇಷನ್‌ನಿಂದ ಕೂಡಿದ್ದರೆ, ಇಲ್ಲಿ ವಿದ್ಯಾರ್ಥಿಗಳು ಪ್ರಶ್ನೆಗಳನ್ನು ಕೇಳಬಹುದು. ಪಠ್ಯದ ವಿಷಯಗಳ ಕುರಿತು ಎಲ್ಲ ಮಗ್ಗಲುಗಳಿಂದ ಪ್ರಶ್ನೆ ಕೇಳಬಹುದು, ತುಲನೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಪರೀಕ್ಷೆಗಳ ಸಿದ್ಧತೆಗಾಗಿ ಮಾದರಿ ಪ್ರಶ್ನೆಗಳನ್ನು ಕೊಡುವಂತೆಯೂ ಕೇಳಬಹುದು. ಮಾದರಿ ಪ್ರಶ್ನೆಗಳಿಗೆ ಉತ್ತರಿಸಿದರೆ ತಕ್ಷಣ ಮೌಲ್ಯಮಾಪನ ಮಾಡಲಾಗುತ್ತದೆ. ಕೀ ಉತ್ತರಗಳನ್ನು ನೀಡುತ್ತದೆ. ಈ ನಡುವೆ ಕಾಲಮಿತಿಯಲ್ಲೂ ಪದವಿ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಯನ್ನೂ ಅನ್‌ಲೈನ್‌ನಲ್ಲಿಮಾಡಲಾಗುತ್ತದೆ.                     |

ಟ್ಯಾಬ್‌ ಸುರಕ್ಷಿತ:

ವಿದ್ಯಾರ್ಥಿಗಳಿಗೆ ನೀಡುವ ಟ್ಯಾಬ್‌ ಸುರಕ್ಷಿತವಾಗಿದ್ದು ಎಕ್ಸ್‌ಪರ್ಟ್‌ನ ಇ-ಲರ್ನ್‌ ಅ್ಕಪ್‌ ಹೊರತುಪಡಿಸಿ ಇತರ ಯಾವುದೇ ಅ್ಯಪ್‌ ಡೌನ್‌ಲೋಡ್‌ ಮಾಡಲು ಸಾಧ್ಯವಿಲ್ಲ, ಇದನ್ನು ಎಕ್ಸ್‌ಪರ್ಟ್‌ನ ಸರ್ವರ್‌ ಕೊಠಡಿಯಲ್ಲಿ ಸಂಪೂರ್ಣ ಮಾನಿಟರ್‌ ಮಾಡಲಾಗುತ್ತದೆ. ಮಕ್ಕಳಲ್ಲಿ ಶಿಸ್ತು ಕಾಪಾಡುವ ಉದ್ದೇಶದಿಂದ ಹಾಗೂ ಆರೋಗ್ಯ ದೃಷ್ಟಿಯಿಂದ ರಾತ್ರಿ 11ರಿಂದ ಮುಂಜಾನೆ 5 ಗಂಟೆಯವರೆಗೆ ಸ್ಕೀನ್‌ ಸಂಪೂರ್ಣ ಆಫ್‌ ಆಗುತ್ತದೆ. ಈ ವೇಳೆ ಕೇವಲ ಅಲಾರ್ಮ್‌ ಮಾತ್ರ ಕೆಲಸ ಮಾಡುತ್ತದೆ.


ಎಕ್ಸ್‌ಪೆಡಿಷನ್: 


ಚಿಕ್ಕ ಮಕ್ಕಳಿಗೆ ಇರುವ ಪ್ರಶ್ನಿಸುವ ಮನೋಭಾವ ಮತ್ತು ಕುತೂಹಲ ಮಕ್ಕಳು ದೊಡ್ಡವರಾಗುತ್ತಿದ್ದಂತೆ ಕಡಿಮೆಯಾಗುತ್ತದೆ. ಆದರೆ ಪ್ರಶ್ನಿಸುವ ಮನೋಭಾವ ಹಾಗೂ ಕುತೂಹಲದಿಂದ ನೋಡುವ ಆಸಕ್ತಿಯನ್ನು ನಿರಂತರವಾಗಿಸುವ ಉದ್ದೇಶದಿಂದ ಪಠ್ಯದ ವಿಭಿನ್ನ ರೀತಿಯ ಪ್ರಸ್ತುತತೆಯೇ ಎಕ್ಸ್‌ಪೆಡಿಷನ್‌. ಫಿಸಿಕ್ಸ್‌, ಕೆಮೆಸ್ಟಿ, ಬಯಾಲಜಿ, ಮ್ಯಾಥ್ಸ್‌, ಕಂಪ್ಯೂಟರ್‌ ಸೈನ್ಸ್‌ ಎಲೆಕ್ಟ್ರಾನಿಕ್ಸ್‌ ಮತ್ತು ಸ್ಟ್ಯಾಟಿಸ್ಟಿಕ್ಸ್‌, ಇಂಗ್ಲಿಷ್‌, ಕನ್ನಡ, ಸಂಸ್ಕೃತ, ಹಿಂದಿ ವಿಷಯದಲ್ಲೂ ಈ ಪ್ರಯೋಗ ಮಾಡಲಾಗಿದೆ. ಇದು ಪುಸ್ತಕ ರೂಪದಲ್ಲಿ ಎಲ್ಲರಿಗೆ ದೊರೆತರೆ, ಡಿಜಿಟಲ್‌ ಮಾದರಿಯಲ್ಲಿ ಎಕ್‌ಪರ್ಟ್‌ ಇ-ಲನ್‌ ಅ್ಯಪ್‌ನಲ್ಲಿ ದೊರೆಯಲಿದೆ.


ವಿಷಯದಲ್ಲಿ ಮೇಲಿನ ಆಸಕ್ತಿ ಹೆಚ್ಚಿಸಿ, ವಿಷಯವನ್ನು ಬೇರೆ ಬೇರೆ ಮಗ್ಗುಲುಗಳಿಂದ ವಿಭಿನ್ನ ರೀತಿಯಲ್ಲಿ ಪರಾಮರ್ಶೆ ಮಾಡಲಾಗುತ್ತದೆ. ಯಾವುದೇ ರೀತಿಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಸಾಮರ್ಥ್ಯ ಬೆಳೆಸುವ ಉದ್ದೇಶವೇ ಎಕ್ಸ್‌ಪೆಡಿಷನ್‌. ಕಲಿಕೆಯಲ್ಲಿ ವಿಷಯಕ್ಕೆ ಹೊಸ ಪ್ರಸ್ತುತತೆಯನ್ನು ಇಲ್ಲಿ ನೀಡಲಾಗಿದೆ. ಸುಲಭವಾಗಿ ಮತ್ತು ಹೆಚ್ಚು ಸೃಜನಾತ್ಮಕ ರೀತಿಯಲ್ಲಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರೇರಣೆ ನೀಡಲು ಸಿದ್ಧಪಡಿಸಲಾಗಿದೆ.


ಸಣ್ಣ ವಯಸ್ಸಿನಲ್ಲಿ ವಿಭಿನ್ನ ರೀತಿಯ ಚಿಂತನೆ ಮುಂದಿನ ದಿನಗಳಲ್ಲಿ ಅವರ ಭವಿಷ್ಯಕ್ಕೆ ಹೊಸ ರಹದಾರಿಯನ್ನು ಕಲ್ಪಿಸಲಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top