ಭೀಮ, ಎಂದರೆ ಕೇವಲ ಒಂದು ಚಿತ್ರವಲ್ಲ, ಮಾದಕ ಲೋಕದ ಪಡಿಪಾಟಲುಗಳನ್ನು ಎಳೆ ಎಳೆಯಾಗಿ ಸಮಾಜಕ್ಕೆ ತೋರಿಸಿ ಕೊಟ್ಟ ನಾಯಕನ ಕಥೆ. ಸಿನಿಮಾ ಮುಗಿದು, ಹಾಕಿದ ಹಣ ಬಂದರೆ ಸಾಕು ಎನ್ನುವ ಮನಸ್ಥಿತಿಗಳ ನಡುವೆ ಸಿನಿಮಾ ಮುಗಿದ ಬಳಿಕವೂ ಡ್ರಗ್ಸ್ ನ ಬೆಂಬಿಡದೆ ಸಾಗಿದ ಒಬ್ಬ ದಿಟ್ಟ ಕಲಿಯ ಕಥೆ.
ಸುಮಾರು ತಡವಾಗಿತ್ತು, ಫಸ್ಟ್ ಡೇ ಫಸ್ಟ್ ಶೋ ನೋಡಬೇಕು ಎಂದು ಕೊಂಡಿದ್ದ ನನಗೆ ಸಮಯ ಸಿಕ್ಕಿದ್ದು 7 ದಿನದ ನಂತರ..
ಕಥೆ ಹೇಗಿದೆ ಎಂದರೆ:
ಶಾಂತಿಯುತವಾಗಿ ಸಾಗುವ ಕಥಾ ಸಾಲು ಸಾಗುತ್ತಾ ಸಾಗುತ್ತಾ ರಕ್ತದ ಹಾದಿ ಪಡೆಯುತ್ತದೆ. ಮಚ್ಚು, ಲಾಂಗ್ ಎನ್ನು ಹಿಡಿಯದೇ ಕೇವಲ ಕೈ ಯಿಂದ ಡೈಲಾಗ್ ಯಿಂದ ಬೆಂಗಳೂರು ರೌಡಿಸಂ ತೋರಿಸಬಹುದು ಎಂದು ಮೊದಲಾರ್ಧದಲ್ಲಿ ತೋರಿಸಿದ್ದಾರೆ.
ವೃತ್ತಿಪರ ನಿರ್ದೇಶಕನಲ್ಲದಿದರು ಚಿತ್ರಕಥೆ ಕಂಡು ಬರುವ ರೀತಿ ಲಕ್ಷಣಗಳು ಎಲ್ಲಿಯೂ ನವ ನಿರ್ದೇಶಕನ ಕೈವಾಡವೆಂದು ಅರಿಯಾಗುವುದೇ ಇಲ್ಲ ಅಸ್ಟ್ರರ ಮಟ್ಟಿಗೆ ಅಚ್ಚುಕಟ್ಟಾಗಿ ಮೂಡಿ ಬಂದಿದೆ.
ಭೀಮ ಸಿನಿಮಾದಲ್ಲಿ ಮೊದಲೆರಡು ಬರುವ ಪದ್ಯದಲ್ಲೇ ನಿಮ್ಮ ಪೂರ್ತಿ ಟಿಕೆಟ್ ಹಣ ವಾಪಸು ಆಗಿರುತ್ತದೆ. ದುನಿಯಾ ವಿಜಯ್ ಅವರ ಎಂಟ್ರಿಯಿಂದ ಕೇಳಿಸುವ ವಿಸೆಲ್ ಸೌಂಡು ಮತ್ತೊಮ್ಮೆ ಕೇಳಸಿಗುವುದು ಗಿರಿಜಾ ಎಂಬ ಪಾತ್ರದ ಪ್ರವೇಶದಿಂದ, ಪೊಲೀಸ್ ಪಾತ್ರದಲ್ಲಿ ಕಂಡು ಬರುವ ಹೊಸ ಪರಿಚಯ "ಪ್ರಿಯ ಶತಮರ್ಷನ್" ಪೊಲೀಸ್ ಎಂಬ ಪದಕ್ಕೆ ಮತ್ತಷ್ಟು ಕಡಕ್‌ನೆಸ್ ತುಂಬಿಸಿದ್ದಾರೆ.
ಸಿನಿಮಾದಲ್ಲಿ ಕಥೆ ಸಾಗುವ ರೀತಿ ಪ್ರೇಕ್ಷಕರ ಗಮನ ಬೇರೆ ಎಲ್ಲೂ ಹೋಗದೆ ಇರುವಂತೆ ಕಥಾ ಲೋಕನದಲ್ಲಿ ಬಂದಿ ಮಾಡಿ ಇರಿಸುತ್ತದೆ.
ಹೊಸ ಕಲಾವಿದರ ಆರ್ಭಟ ನೋಡಲು ಮತ್ತಷ್ಟು ಮಜಕವಾಗಿದೆ, ಸಿನಿಮಾದಲ್ಲಿ ಭೂಗತ ಹಾಗೂ ಮಾದಕದಿಂದ ಲೋಕದಿಂದ ಸಮಾಜಕ್ಕೆ ಆಗುವ ಪರಿಣಾಮ, ಭ್ರಷ್ಟಾಚಾರ, ಅತ್ಯಾಚಾರಗೈದ ಕೈಗಳಿಗೆ ಸಿಗಬೇಕಾದ ಶಿಕ್ಷೆ, ಎಲ್ಲವೂ ಸಿನಿಮಾದಿಂದ ಸಮಾಜಕ್ಕೆ ಸಿಗುವ ಮುಖ್ಯ ಸಂದೇಶ ಮತ್ತು ಬದಲಾಗಬೇಕಾದ ಕಾನೂನು ಸುವ್ಯವಸ್ಥೆ!
ವಿಲ್ಲನ್ ಪಾತ್ರದಲ್ಲಿ ಕಾಣಿಸಿಕೊಳ್ಳುವ ಕಾಕ್ರೋಚ್ ಸುಧಿ ಅಭಿನಯಕ್ಕೆ ಸವಾಲು ಒಡ್ಡಲು ಸಾದ್ಯವಿಲ್ಲ! ಎಲ್ಲವೂ ಪಕ್ಕಾ; ಒಂದು ರೀತಿ ಪರ್ಫೆಕ್ಷನ್. ಪರದೆಯ ಉಪಸ್ಥಿತಿ, ಸಂಭಾಷಣೆಯ ತತ್ವ, ಎಲ್ಲವೂ ನೂರಕ್ಕೆ ನೂರು, ಕಾಮಿಡಿಗೂ ಸೈ, ಯುದ್ಧಕ್ಕೂ ಸೈ ಎನ್ನುವ ಪಾತ್ರ. ಇನ್ನೋರ್ವ ವಿಲ್ಲನ್ ಎಂದರೆ ಡ್ರ್ಯಾಗನ್ ಮಂಜು ಹೊಸ ಮುಖವಾದರೂ ವಿಲ್ಲನ್ ಪಾತ್ರಕ್ಕೆ ಹೇಳಿ ಮಾಡಿದಂತೆ ಇದೆ. ನಟನಾ ಕೌಶಲ್ಯ ಪ್ರೇಕ್ಷಕರ ಮನ ಕೆಣಕುವಷ್ಟು ಇರದೆ ಇದ್ದರು ಸಹ ಡ್ರ್ಯಾಗನ್ ಮಂಜು ಎಂಬ ಪಾತ್ರಕ್ಕೆ ಹೇಳಿ ಮಾಡಿಸಿದಂತೆ ಕಾಣಿಸುತ್ತಿದ್ದರು.
ಓರ್ವ ಲೋ ಕ್ಲಾಸ್ ರೌಡಿ ಯಾವ ರೀತಿ ರೌಡಿಸಂ ನಡೆಸಿ ಪೊಲಿಟಿಕ್ಸ್‌ಗೆ ಲಗ್ಗೆ ಇಡುತ್ತಾನೆ ಹಾಗೂ ಅವನಿಗೆ ಸಿಗುವ ಮಿನಿಸ್ಟರ್ ಪವರ್, ಹೊಸ ವಿಚಾರ. ದುನಿಯಾ ವಿಜಿ ಅವರ ಕಥೆಗಾರಿಕೆಗೆ ಒಂದು ಪ್ರಶಂಸೆ ಇರಲೇ ಬೇಕು. ಡೋಂಟ್ ವರಿ ಬೇಬಿ ಚಿನ್ನಮ್ಮ ಎಂಬ ಪದ್ಯದಿಂದ ಪರದೆ ಮೇಲೆ ಬರುವ ನಾಯಕ ಸಾಲು ಸಾಲು ಮಾಸ್ ಡೈಲಾಗ್‌ಗಳಿಂದ ನೋಡುಗರನ್ನು ವಿಶಲ್ ಹಾಕುವಂತೆ ಕೆರಳಿಸುತ್ತದೆ. ಸಿನಿಮಾ ತುಂಬಾ ವಾಸ್ತವಿಕವಾಗಿದ್ದು ಎಲ್ಲಿಯೂ ಬೋರ್ ಎನಿಸುವುದು ಇಲ್ಲ.
ಸಿನಿಮಾ ಮಧ್ಯಂತರದ ತನಕ ಒಂದು ಕಥಾಲೋಕನವಾದರೆ ತದನಂತರ ಬೇರೊಂದು ಪ್ರಪಂಚ. ತಿಳಿಯದೇ ಇರುವ ಅನೇಕ ವಿಷಯಂತರಗಳು, ಮಾಹಿತಿಗಳ ಬೊಕ್ಕೆಯೇ ಸಿಗುವುದು ಖಚಿತ. ಸಿನಿಮಾದಲ್ಲಿ ಅಲ್ಪ ಸ್ಪಲ್ಪ ಅಸಭ್ಯತೆ, ಕ್ರೂರತ್ವ ಹಾಗೂ ಹೆಚ್ಚಾಗಿ ಅವಾಚ್ಯ ಶಬ್ದ ಇದ್ದರೂ ಸಹ ಒಂದೊಳ್ಳೆ ಸಂದೇಶವನ್ನು ಸಮಾಜಕ್ಕೆ ಒಯ್ಯುತ್ತದೆ.
ಕಥೆಯಲ್ಲಿ ಬರುವ ಸಹ ಪಾತ್ರಗಳು ಸಹ ಎಲ್ಲಿಯೂ ರಂಪಾಟ ಎನಿಸುವುದು ಇಲ್ಲ, ರುಚಿಗೆ ತಕ್ಕಷ್ಟು ಉಪ್ಪಿನ ಹಾಗೆ ಪಾತ್ರಕ್ಕೆ ತಕ್ಕಂತ ಆಯ್ಕೆ.
ಭೀಮನ ಅಣ್ಣನಾಗಿ ಕಾಣುವ ಗೋಪಾಲಕೃಷ್ಣ ದೇಶಪಾಂಡೆ, ಅಪ್ಪನ ಪಾತ್ರದಲ್ಲಿ ಅಚ್ಯುತ್ ಕುಮಾರ್, ಮಧ್ಯಂತರದ ನಂತರ ಕಾಣುವ ರಂಗಾಯಣ ರಘು ಮುಂತಾದವರ ನಟನಾ ಚಾತುರ್ಯದಿಂದ ಚಿತ್ರವು ಇನ್ನಷ್ಟು ನುಣುಪಾಗಿದೆ.
ಇನ್ನು ಕಥೆಯಲ್ಲಿ ನೋಡುವುದು ಆದರೆ, ಕಳ ನಟ ಡ್ರ್ಯಾಗನ್ ಮಂಜು ಹಾಗೂ ಭೀಮನ ನಡುವೆ ಇರುವ ಸೇಡು, ಎಂಎಲ್ಎ, ಎಂಪಿಗಳ ದಡ್ಡತನ, ಅಧಿಕಾರದ ದುರುಪಯೋಗ, ಮಾದಕ ವ್ಯಯಸ್ಥೆಯ ದುಷ್ಪರಿಣಾಮಗಳು, ಕಥೆಯ ಜೀವಾಳ.
ಕೊನೆಯಲ್ಲಿ ಕಂಡು ಬರುವ 2 ನಿಮಿಷದ ಆಕ್ಷನ್ ಪ್ಯಾಕ್, ಬೇಬಿ ಅಮ್ಮನ ಕಡಕ್ ಡೈಲಾಗ್ ಬಾಯಿಗೆ ಕೈ ಹಾಕಿ ಸಿಳ್ಳೆ ಹೊಡೆಸುವುದರಲ್ಲಿ ಸಂದೇಹವಿಲ್ಲ. ಚರಣ್ ರಾಜ್ ಅವರ ಬಿಜಿಎಂ ಸಪ್ತ ಸಾಗರದಲ್ಲಿ ಕಂಡಂತೆ ಮತ್ತಷ್ಟು ಆಕ್ಷನ್ ಪ್ಯಾಕ್‌ಗೇ ಕಳೆ ತಂದಿದೆ. ಶುರುವಿನಿಂದ ಎಲ್ಲಿಯೂ ಮೂಡದ ಬಿಜಿಎಂ ಕೊನೆಯಲ್ಲಿ ಒಂದೇ ಸಾರಿ ಬಂದಾಗ ಮೈ ಜುಂ ಎಂದು ರೋಮಾಂಚನಗೊಳ್ಳುತ್ತದೆ.
ದುನಿಯಾ ವಿಜಯ್ ಅವರ ನಿರ್ದೇಶನ ಸ್ಟೋರಿ ಲೈನ್ ಹೊಸ ತಂತ್ರಜ್ಞಾನ ಬಳಕೆ, ಕಲರ್ ಗ್ರಿಡಿಂಗ್ ಐಡಿಯಾ ತುಂಬಾ ಹೊಸತು ಎನಿಸುತ್ತದೆ. ಡ್ರ್ಯಾಗನ್ ಮಂಜು ಅವರ ಅಭಿನಯದ ಬಗ್ಗೆ ಒತ್ತು ಕೊಟ್ಟಿದ್ದಾರೆ ಚಿತ್ರ ಇನ್ನಷ್ಟು ಚೆನ್ನಾಗಿ ಕಂಡು ಬರುತ್ತಾ ಇತ್ತು ಆದರೆ ಆಕ್ಷನ್, ಹಾಸ್ಯ, ಪ್ರೀತಿ, ತಮಾಷೆ ಹಾಗು ಎಮೋಷನ್ ಗೆ ಯಾವುದೇ ರೀತಿ ಮೋಸವಿಲ್ಲ. ಒಟ್ಟಾರೆ ಹೇಳ ಬೇಕೆಂದರೆ ಪೈಸಾ ವಸೂಲ್ ಮೂವೀ.
ಹೊಸ ವಿಚಾರ ಎಂದರೆ ಭೀಮದಲ್ಲಿ ಎಲ್ಲ ಹೊಸ ನಟರಿಗೆ, ಪ್ರತಿಭಾವಂತರಿಗೆ ಅವಕಾಶ ದೊರಕಿದೆ ಇದು ಕೇವಲ ಭೀಮ ಚಿತ್ರಕ್ಕೆ ಮುಗಿಯದೆ ಇರಲಿ, ಇನ್ನಷ್ಟು ಹೊಸ ಮುಖಗಳಿಗೆ ಅವಕಾಶದ ಗೊಂಚಲು ದೊರಕಲಿ ಎಂಬುದು ಆಶಯ.
- ರಕ್ಷಿತ್ ಆರ್ ಪಿ
ಹೆಬ್ರಿ, ಬಚ್ಚಪ್ಪು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ