ಮೈಸೂರು:ಆ 26 ರಂದು ಮೈಸೂರಿನಲ್ಲಿ ಶ್ರೀ ವಾಸದೇವ ಮಹಾರಾಜ ಸದ್ಭಾವನ ಪ್ರಶಸ್ತಿ ಪ್ರದಾನ

Upayuktha
0


ಮೈಸೂರು:
ಶ್ರೀ ವಾಸುದೇವ ಮಹಾರಾಜ ಫೌಂಡೇಶನ್ ವತಿಯಿಂದ ಶ್ರೀ ವಾಸುದೇವ ಮಹಾರಾಜ್ ಅವರ 18ನೇ ಆರಾಧನಾ ಮಹೋತ್ಸವದ ಅಂಗವಾಗಿ ಶ್ರೀ ವಾಸುದೇವ ಮಹಾರಾಜ್ ಸದ್ಭಾವನಾ ಪ್ರಶಸ್ತಿಯನ್ನು ಇದೇ ದಿನಾಂಕ 26.08.2024ರ ಸೋಮವಾರ ಸಂಜೆ 5:00ಗೆ ಮೈಸೂರಿನ ಜೆ ಎಲ್ ಬಿ ರಸ್ತೆಯ ರೋಟರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.


 ಕಾರ್ಯಕ್ರಮದ ಉದ್ಘಾಟನೆಯನ್ನು ಚಂದ್ರವನ ಆಶ್ರಮದ ಡಾ. ಶ್ರೀ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿಗಳು ನೆರವೇರಿಸುವರು. ಶ್ರೀಗಳ ಭಾವಚಿತ್ರಕ್ಕೆ ವಿಧಾನಪರಿಷತ್ ಸದಸ್ಯರಾದ ಡಾ.ಡಿ ತಿಮ್ಮಯ್ಯ ಪುಷ್ಪಾರ್ಚನೆ ನೆರವೇರಿಸಲಿದ್ದು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಮಡ್ಡಿಕೆರೆ  ಗೋಪಾಲ್ ಅಧ್ಯಕ್ಷತೆ ವಹಿಸಲಿದ್ದಾರೆ.


 ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಹಿರಿಯ ಸಮಾಜ ಸೇವಕರಾದ ಡಾ.ಕೆ ರಘುರಾಮ ವಾಜಪೇಯಿ,  ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನದ ಸಿಇಒ ಕೆ ಆರ್ ಯೋಗಾ ನರಸಿಂಹನ್  ಹಾಗೂ ಶ್ರೀ ವಾಸುದೇವ ಮಹಾರಾಜ್ ಫೌಂಡೇಶನ್ ನ  ಅಧ್ಯಕ್ಷರಾದ ಡಾ. ಗುರುರಾಜ್ ಪೋ ಶೆಟ್ಟಿಹಳ್ಳಿ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾದ ಎಂ. ಮೋಹನ್ ಉಪಸ್ಥಿತರಿರಲಿದ್ದಾರೆ.


 ಇದೇ ಸಂದರ್ಭ  ಸಂಧ್ಯಾ ಸುರಕ್ಷಾ ಟ್ರಸ್ಟ್ ಅಧ್ಯಕ್ಷರಾದ  ಡಾ. ಬಿ ಆರ್ ನಟರಾಜ ಜೋಯಿಸ್ ಹಾಗೂ ಅಂತರಾಷ್ಟ್ರೀಯ ಖ್ಯಾತಿಯ   ಲೈಂಗಿಕ ಮತ್ತು ಗರ್ಭಧಾರಣ ತಜ್ಞ ವೈದ್ಯರಾದ ಡಾ.ಸಿ ಶರತ್ ಕುಮಾರ್ ಅವರಿಗೆ ಈ ಸಾಲಿನ ಶ್ರೀ ವಾಸುದೇವ ಮಹಾರಾಜ್ ಸದ್ಭಾವನಾ ಪ್ರಶಸ್ತಿಯನ್ನು ಅವರುಗಳ ಜೀವಮಾನ ಸಾಧನೆಗಾಗಿ ಪ್ರದಾನ  ಮಾಡಲಾಗುವುದು ಹಾಗೂ ಖ್ಯಾತ ಕೊಳಲು ವಾದನ ವಿದ್ವಾನ್ ಶ್ರೀ ವಿನಾಯಕ ಹೊನ್ನಾವರ ಅವರಿಂದ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು  ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಎಂ ವಿ. ನಾಗೇಂದ್ರಬಾಬು ಹಾಗೂ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕರಾದ ಎನ್ ಅನಂತ್  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 




Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top