ಸಿದ್ಧರಾಮಯ್ಯ ರಾಜೀನಾಮೆ ನೀಡಿ ಘನತೆ ಉಳಿಸಿಕೊಳ್ಳಲಿ: ಶಾಸಕ ಕಾಮತ್ ಆಗ್ರಹ

Upayuktha
0

ಮಂಡ್ಯ: ರಾಜ್ಯ ಕಾಂಗ್ರೆಸ್ ಸರ್ಕಾರದ ಹಗರಣಗಳ ವಿರುದ್ಧ ಆರಂಭವಾಗಿರುವ ಮೈಸೂರು ಚಲೋ ಪಾದಯಾತ್ರೆಯು 5ನೇ ದಿನಕ್ಕೆ ಕಾಲಿಟ್ಟಿದ್ದು ಮಂಗಳೂರು ನಗರದ ದಕ್ಷಿಣದ ಬಿಜೆಪಿ ಕಾರ್ಯಕರ್ತರೂ ಸಹ ಅತ್ಯಂತ ಹುರುಪಿನಿಂದ ಸೇರಿಕೊಂಡಿದ್ದಾರೆ ಎಂದು ಶಾಸಕ ವೇದವ್ಯಾಸ ಕಾಮತ್ ಅವರು ಹೇಳಿದರು. 


   


5ನೇ ದಿನ ಸಕ್ಕರೆ ನಾಡಿನಿಂದ ಶುರುವಾದ ಪಾದಯಾತ್ರೆಯಲ್ಲಿ ಮಾತನಾಡಿದ ಶಾಸಕರು, ಈಗಾಗಲೇ ಕಾಂಗ್ರೆಸ್ ಸರ್ಕಾರದ ಹಗರಣಗಳ ಸರಮಾಲೆಯಿಂದ ಬೇಸತ್ತಿರುವ ನಾಡಿನ ಜನತೆ ಮೂಲೆ ಮೂಲೆಯಿಂದ ಪಾದಯಾತ್ರೆಗೆ ಬಂದು ಬೆಂಬಲ ನೀಡುತ್ತಿದ್ದಾರೆ. ಈ ನಡುವೆ ಕಾಂಗ್ರೆಸ್ಸಿಗರು ತಮ್ಮ ಹಗರಣಗಳನ್ನು ಮುಚ್ಚಿಕೊಳ್ಳಲು ಹಿಟ್ ಅಂಡ್ ರನ್ ರೀತಿಯಲ್ಲಿ ಬಿಜೆಪಿಯ ಮೇಲೆ ಆರೋಪದ ಮಾಡುವ ಬದಲು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆಯನ್ನು ಕೊಡಿಸಲಿ. ಇಲ್ಲದಿದ್ದರೆ ಈ ಪಾದಯಾತ್ರೆ ಮುಗಿಯುವುದರೊಳಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಘನತೆಯನ್ನು ಉಳಿಸಿಕೊಳ್ಳಲಿ ಎಂದು ಆಗ್ರಹಿಸಿ ಶಾಸಕರು ಸವಾಲೆಸೆದರು. 


ಈ ನಡುವೆ ಸಕ್ಕರೆ ನಾಡಿನಲ್ಲಿ ಬಿಜೆಪಿ -ಜೆಡಿಎಸ್ ಬಾವುಟದ ಜೊತೆಗೆ ತುಳುನಾಡ ಬಾವುಟವೂ ರಾರಾಜಿಸುತ್ತಿದ್ದದ್ದು ಎಲ್ಲರ ಪ್ರಮುಖ ಆಕರ್ಷಣೆಯ ಕೇಂದ್ರವಾಗಿತ್ತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top