ಸೇತುವೆ ಸಂಚಾರ ನಿಬ೯ಂಧ: ತಾಂತ್ರಿಕ ಪರಿಶೀಲನೆ ಬಳಿಕ ನಿಧಾ೯ರ

Upayuktha
0


ಪೊಳಲಿ ಮತ್ತು ಉಳಾಯಿಬೆಟ್ಟು ಸೇತುವೆ ಹಾಗೂ ದೇರಳಕಟ್ಟೆ ರೆಂಜಾಡಿ ರಸ್ತೆಯ ಉನ್ನತ ತಾಂತ್ರಿಕ ಪರಿಶೀಲನೆಗೆ ಸೋಮವಾರ ತಜ್ಞರ ತಂಡ ಆಗಮಿಸಲಿದೆ.


ಈಗಾಗಲೇ ಈ ರಸ್ತೆ ಮತ್ತು ಸೇತುವೆ  ಮೇಲೆ ವಾಹನಗಳ ಸಂಚಾರಕ್ಕೆ ನಿಬ೯ಂಧ ಹೇರಲಾಗಿದೆ. ಲಘು ವಾಹನ ಮತ್ತು ಬಸ್ಸುಗಳ ಓಡಾಟಕ್ಕೆ ಅವಕಾಶ ನೀಡಬೇಕೆಂದು ಇತ್ತೀಚೆಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಸ್ಥಳೀಯ ಗ್ರಾಮ ಪಂಚಾಯತ್, ಬಸ್ಸು ಮಾಲೀಕರು, ಸ್ಥಳೀಯ ಸಂಘ ಸಂಸ್ಥೆಗಳ ಸಾವ೯ಜನಿಕರು ಆಗ್ರಹಿಸಿದ್ದರು. 

 

ಈ ನಿಟ್ಟಿನಲ್ಲಿ ಸೋಮವಾರ ತಾಂತ್ರಿಕ ತಜ್ಞರು ಸೇತುವೆಯನ್ನು ಯಂತ್ರೋಪಕರಣಗಳೊಂದಿಗೆ ಪರಿಶೀಲಿಸಿ, ವರದಿ ನೀಡಿ ಜಿಲ್ಲಾಧಿಕಾರಿಗಳೊಂದಿಗೆ ಚಚಿ೯ಸಿದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top