ಹೆಳವನಕಟ್ಟೆ ಗಿರಿಯಮ್ಮ ಆರಾಧನೋತ್ಸವ

Upayuktha
0


ಬೆಂಗಳೂರು: ಬೆಂಗಳೂರಿನ ಭುವನಗಿರಿ ಆಶ್ರಮದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ, ಆ.9ರಂದು ಹೆಳವನಕಟ್ಟೆ ಗಿರಿಯಮ್ಮನವರ ಆರಾಧನೆಯನ್ನು ಮೈತ್ರೇಯಿ ಮಹಿಳಾ ಕನ್ನಡ ಹರಿದಾಸ ಟ್ರಸ್ಟ್‌ ಹಾಗೂ ಭಕ್ತವೃಂದ ಏರ್ಪಡಿಸಿತ್ತು. 


ಶ್ರೀ ಶ್ರೀ ಸುವಿದ್ಯೇಂದ್ರ ತೀರ್ಥ ಶ್ರೀಪಾದರ ದಿವ್ಯ ಸಾನಿಧ್ಯದಲ್ಲಿ, ಡಾ. ವಾದಿರಾಜಾಚಾರ್ಯ ಅಗ್ನಿಹೋತ್ರಿ ಇವರ ಅಧ್ಯಕ್ಷತೆಯಲ್ಲಿ, ಡಾ. ಶ್ರೀ ಮುಷ್ಣಂ ರಾಘವೇಂದ್ರಾಚಾರ್ಯರು ಅತಿಥಿಗಳಾಗಿ ಆಗಮಿಸಿದ್ದರು. ಸಂಘದ ಅಧ್ಯಕ್ಷರಾದ ಕಟ್ಟೆ ಹನುಮಕೃಷ್ಣನದಾಸಿ ಶ್ರೀಮತಿ ಶಾಂತಾ ರಘೂತ್ತಮಾಚಾರ್ಯ ಇವರನ್ನು ಮೈತ್ರೇಯಿ ಮಹಿಳಾ ಕನ್ನಡ ಹರಿದಾಸ ಟ್ರಸ್ಟ್ ನ ವತಿಯಿಂದ ಸನ್ಮಾನಿಸಲಾಯಿತು, ಶ್ರೀಮತಿ ಶಾಂತಾ ರಘೂತ್ತಮಾಚಾರ್ಯ ಶ್ರೀಮತಿ ಶಾಂತಾ ರಘೂತ್ತಮಾಚಾರ್ಯ ಇವರು ಹೆಳವನಕಟ್ಟೆ ಗಿರಿಯಮ್ಮನವರ ಭಕ್ತವೃಂದದ ಸಂಸ್ಥಾಪಕ ಅಧ್ಯಕ್ಷರಾಗಿ, 25 ನೇ ವರ್ಷದ ಆರಾಧನೆಯನ್ನು ನಡೆಸಿಕೊಂಡು ಬರುತ್ತಿದ್ದಾರೆ.


ಈ ಸವಿ ನೆನಪಿಗಾಗಿ, ಅವರು ರಚಿಸಿದ 25 ಕಿರು ಹೊತ್ತಿಗೆಗಳನ್ನು ಶ್ರೀ ಸುವಿದ್ಯೇಂದ್ರ ತೀರ್ಥ ಶ್ರೀಪಾದರು ಬಿಡುಗಡೆಗೊಳಿಸಿದರು. ಕಟ್ಟೆ ಹನುಮಕೃಷ್ಣನದಾಸಿ ಶ್ರೀಮತಿ ಶಾಂತಾ ರಘೂತ್ತಮಾಚಾರ್ಯ ಇವರು ಈ 25 ವರ್ಷದ ಅನುಭವದೊಂದಿಗೆ ಇದೀಗ ನಮ್ಮ ಮೈತ್ರೇಯಿ ಮಹಿಳಾ ಕನ್ನಡ ಹರಿದಾಸ ಟ್ರಸ್ಟ ನ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಸ್ತುತ ಬೆಂಗಳೂರಿನ ಚಿಕ್ಕಲ್ಲಸಂದ್ರದ ನಿವಾಸಿ. 1980 ರಲ್ಲಿ ಶ್ರೀ ಬಿ ಎನ್ ರಘೋತ್ತಮಾಚಾರ್ ಇವರೊಂದಿಗೆ ವಿವಾಹವಾಯ್ತು. ಇಬ್ಬರು ಮಕ್ಕಳು ಶ್ರೀಮತಿ ವಾತ್ಸಲ್ಯ ವಿದೇಶದಲ್ಲಿದ್ದಾರೆ. ಪಂಡಿತ್ ಮಾತರಿಶ್ವಾಚಾರ್ ಶ್ರೀ ಪೇಜಾವರ ಶ್ರೀಗಳಲ್ಲಿ ಸುಧಾ ಮಂಗಳ ಮಾಡಿ, ಬೆಂಗಳೂರಿನ ಶ್ರೀ ಪೂರ್ಣ ಪ್ರಜ್ಞ ವಿದ್ಯಾಪೀಠದಲ್ಲಿ ಶಾಸ್ತ್ರಗ್ರಂಥಗಳ ಅಧ್ಯಾಪಕ.


ಶ್ರೀಮತಿ ಶಾಂತಾ ರಘೋತ್ತಮಾಚಾರ್ ಕನ್ನಡ ಸಾಹಿತ್ಯ ಪರಿಷತ್ ನಡೆಸುವ ಕಾವ, ಜಾಣ, ರತ್ನ ಪರೀಕ್ಷೆಗಳಲ್ಲದೇ, ಮೈಸೂರಿನ ಮಾನಸಗಂಗೋತ್ರಿಯಲ್ಲಿ ಎಂಎ ಪದವಿ ಪಡೆದು ಶ್ರೀಪಾದರಾಜ ಮಠದ ರಾಷ್ಟ್ರೀಯ ವೇದವಿಜ್ಞಾನ ಸಂಸ್ಥೆಯ ಡಾ. ಗೋಕುಲನಾಥ್ ಅವರ ಮಾರ್ಗದರ್ಶನದಲ್ಲಿ ಹರಿದಾಸ ಸಾಹಿತ್ಯದಲ್ಲಿ ಬಿಂಬ ಪ್ರತಿಬಿಂಬ ಭಾವದ ಬಗ್ಗೆ ಸಂಶೋಧನೆಗೆ ಡಾಕ್ಟರೇಟ್ ಪಡೆದಿದ್ದಾರೆ. ಈಗ ಬಿಡುಗಡೆಯಾದ 25 ಪುಸ್ತಕಗಳಲ್ಲದೇ, ಇನ್ನೂ 23 ಪುಸ್ತಕಗಳ ಕರ್ತೃ ಇವರು. ಅನೇಕ ಸಂಘ ಸಂಸ್ಥೆಗಳು ಇವರ ಕಾರ್ಯವನ್ನು ಗುರುತಿಸಿ ಸನ್ಮಾನಿಸಿವೆ. ಹರಿದಾಸ ಅನುಗ್ರಹ ಪ್ರಶಸ್ತಿ, ಪ್ರಣವ ಶ್ರೀ ಪ್ರಶಸ್ತಿ, ಶ್ರೀ ಗುರುಶ್ರೀಶ ಪ್ರಶಸ್ತಿ, ಹೀಗೆ ಇನ್ನೂ ಅನೇಕ ಪ್ರಶಸ್ತಿಗಳ ಭಾಜನರಿವರು.


ಇವರನ್ನು ಮೈತ್ರೇಯಿ ಮಹಿಳಾ ಕನ್ನಡ ಹರಿದಾಸ ಟ್ರಸ್ಟ ನ ಪರವಾಗಿ ಸನ್ಮಾನಿಸಲಾಯಿತು ಎಂಬುದು ಟ್ರಸ್ಟಗೆ ಹೆಮ್ಮೆಯ ವಿಷಯ. ವಿದ್ವಾನ್ ಸತ್ಯಧಾನ್ಯಾಚಾರ್ಯ ಕಟ್ಟಿ ಇವರು ನಮ್ಮ ಸನ್ಮಾನಕ್ಕೆ ಒಮ್ಮತದಿಂದ ಶ್ರೀಮತಿ ಶಾಂತಾ ರಘೂತ್ತಮಾಚಾರ್ಯ ಇವರಿಗೆ ಗೌರವಪೂರ್ವಕವಾಗಿ ಶಾಲು ಹೊದಿಸಿದರು. ಟ್ರಸ್ಟನ ವತಿಯಿಂದ ಫಲಕ ಹಾಗೂ ಫಲಪುಷ್ಟ ನೀಡಲಾಯಿತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top