ನಿಟ್ಟೆ: ನಿಟ್ಟೆ ರೋಟರಿ ಕ್ಲಬ್ ವತಿಯಿಂದ ಸ್ವಾತಂತ್ರ್ಯೋತ್ಸವ ಪ್ರಯುಕ್ತ ನಿಟ್ಟೆ ಗ್ರಾಮದ ಸುಮಾರು 13 ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ನಿಟ್ಟೆ ರೋಟರಿ ಕ್ಲಬ್ ನ ಕಾರ್ಯದರ್ಶಿ ರೊ. ಡಾ.ರಘುನಂದನ್, ಹಿರಿಯ ಸದಸ್ಯರುಗಳಾದ ರೊ.ಡಾ.ಶಶಿಕಾಂತ್ ಕರಿಂಕಾ, ರೋ ತುಕಾರಾಮ ಶೆಟ್ಟಿ, ರೋ. ಸುರೇಶ ಶೆಟ್ಟಿ, ರೊ. ಪ್ರಶಾಂತ ಕುಮಾರ್, ರೋ. ದಿಲೀಪ್ ಕುಮಾರ ಹಾಗೂ ರೋಟರ್ಯಾಕ್ಟ್ ಕ್ಲಬ್ ನ ಸದಸ್ಯರು ಉಪಸ್ಥಿತರಿದ್ದರು. ತೀರ್ಪುಗಾರರಾಗಿ ಡಾ. ವಿದ್ಯಾಸಾಗರ ಶೆಟ್ಟಿ ಮತ್ತು ರಾಜ್ಯ ಪ್ರಶಸ್ತಿ ವಿಜೇತ ನಿವೃತ್ತ ಶಿಕ್ಷಕ ವಿ.ಕೆ.ರಾವ್ ನಂದಳಿಕೆ ಆಗಮಿಸಿದ್ದರು.
ಲಘೂಪಹಾರದ ಪ್ರಾಯೋಜಕತ್ವವನ್ನು ರೋ. ಪಿ.ಎಚ್.ಎಫ್. ಯೋಗೀಶ್ ಹೆಗ್ಡೆ ಹಾಗೂ ವಿಜೇತರಾದ ಮಕ್ಕಳಿಗೆ ಬಹುಮಾನದ ಪ್ರಾಯೋಜಕತ್ವವನ್ನು ರೋ.ಸರೋಜಿನಿ ತುಕಾರಾಮ ಶೆಟ್ಟಿ ಅವರು ವಹಿಸಿಕೊಂಡಿದ್ದರು. ಸುಲೋಚನಾ ಸತೀಶ ಕುಮಾರ್ ಅವರು ವಂದಿಸಿದರು. ರೊ. ಶಶಿಕಲಾ ಶೆಟ್ಟಿ ಕಾಯ೯ಕ್ರಮ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ