ಬಾಗಲಕೋಟೆ: ವಿಶ್ವಭಾರತಿ ಪತ್ತಿನ ಸಂಘಕ್ಕೆ 6 ಲಕ್ಷ ರೂ. ನಿವ್ವಳ ಲಾಭ

Upayuktha
0

ನಿಗದಿತ ಸಮಯಕ್ಕೆ ಸಾಲ ಮರುಪಾವತಿಸಿ



ಬಾಗಲಕೋಟೆ: ಸಾಲ ಪಡೆದ ಗ್ರಾಹಕರು ನಿಗದಿತ ಅವಧಿಯೊಳಗೆ ಸಾಲ ಮರುಪಾವತಿ ಮಾಡಿ ಸಹಕಾರಿ ಸಂಘಗಳ ಪ್ರಗತಿಗೆ ಸಹಕರಿಸಬೇಕು ಎಂದು ಕೆ.ಪಿ. ಅರಿಷಿಣಗೋಡಿ ಹೇಳಿದ್ದಾರೆ. ಬಾಗಲಕೋಟೆ ಜಿಲ್ಲೆಯ ಬಾಗಲಕೋಟೆ ತಾಲೂಕಿನ ಬೆನಕಟ್ಟಿ ಗ್ರಾಮದ  ವಿಶ್ವಭಾರತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ 14 ನೆಯ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿ, ಗ್ರಾಹಕರು ಪಡೆದ ಸಾಲವನ್ನು ಸದುಪಯೋಗ ಪಡಿಸಿಕೊಂಡು ಆರ್ಥಿಕ ಸಬಲತೆ ಸಾಧಿಸಬೇಕು ಎಂದರು.


ಜನರು ಗ್ರಾಮೀಣ ಪ್ರದೇಶದ ಸಹಕಾರಿ ಸಂಘಗಳಲ್ಲಿ ಹೆಚ್ಚು ಹಣವನ್ನು ಠೇವಣಿ ಇಟ್ಟು ಬಡ್ಡಿ ಪಡೆಯುವ ಜೊತೆಗೆ ಬಡವರು, ಸಾಮಾನ್ಯ ವರ್ಗದ ಜನರಿಗೆ ಸಾಲ ಸೌಲಭ್ಯ ಒದಗಿಸಲು ನೆರವಾಗಬೇಕು ಎಂದು ಅರಿಷಿಣಗೋಡಿ ಹೇಳಿದರು.


ಸಂಘದ ವ್ಯವಸ್ಥಾಪಕ ಟಿ. ಎಚ್. ಸಣ್ಣಪ್ಪನವರ ಸಂಘದ ವರದಿ ಮಂಡಿಸಿ, ಸಂಘ ಕಳೆದ ಮಾರ್ಚ್ ಅಂತ್ಯಕ್ಕೆ 5.93 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ ಎಂದು ತಿಳಿಸಿದರು. 


ಸಂಘದ ಆಡಳಿತ ಮಂಡಳಿ ಉಪಾಧ್ಯಕ್ಷ ರಂಗಣ್ಣ ಕಟಗೇರಿ, ಪಿಕೆಪಿಎಸ್ ಅಧ್ಯಕ್ಷ ವೇಮನ ಯಡಹಳ್ಳಿ, ಮಾಲತೇಶ ಅಮಾತೆಪ್ಪನವರ, ನಿರ್ದೇಶಕ ಗದಿಗೆಪ್ಪ ಅರಕೇರಿ, ಶಿವಾನಂದ ಅಂಗಡಿ ಮಾತನಾಡಿದರು. 


ಲಚ್ಚಪ್ಪ ಬಾಳಕ್ಕನವರ, ಪಾಂಡುರಂಗ ಸಣ್ಣಪ್ಪನವರ, ಮುತ್ತಪ್ಪ ಬೆನ್ನೂರ, ನೀಲಪ್ಪ ದಾಸಪ್ಪನವರ, ನಿಂಗಪ್ಪ ಶಿರೂರ, ರಾಘು ಯಡಹಳ್ಳಿ, ನಿರ್ದೇಶಕರಾದ ಹಣಮಂತ ತೆಗ್ಗಿ, ವೆಂಕಟೇಶ ತಿಮ್ಮಾಪುರ, ಕೃಷ್ಣಾ ಪಾಟೀಲ, ತಿಪ್ಪಣ್ಣ ಗುಳೇದ, ಹಣಮಂತ ವಾಲೀಕಾರ, ತಿಮ್ಮಣ್ಣ ಸಣ್ಣಪ್ಪನವರ ಇದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top